ಮಂಗಳೂರು : ಆತ ಆಟೋ ಚಾಲಕ. ರಾತ್ರಿಯ ಹೊತ್ತಲ್ಲಿ ವಿಡಿಯೋ ಕಾಲ್‌ವೊಂದು ಬಂದಿತ್ತು. ಯುವತಿಯೋರ್ವಳು ಬೆತ್ತಲಾಗಿ ಆಟೋ ಚಾಲಕನ ಬಳಿ ಬಟ್ಟೆ ಬಿಚ್ಚುವಂತೆ ಹೇಳಿದ್ದಾಳೆ. ಯುವತಿ ಹೇಳಿದಂತೆ ತಾನೂ ಬೆತ್ತಲಾಗಿ ಆಕೆಯೊಂದಿಗೆ ಚಾಟಿಂಗ್ ನಡೆಸಿದ್ದಾನೆ. ಆದರೆ ಕೆಲ ದಿನಗಳ ಬಳಿಕ ಆಟೋ ಚಾಲಕನ ವಿಡೀಯೋ ಬಯಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇಷ್ಟು ದಿನ ಶ್ರೀಮಂತರನ್ನೇ ಟಾರ್ಗೇಟ್ ಮಾಡುತ್ತಿದ್ದ ಗ್ಯಾಂಗ್ ಇದೀಗ ಜನಸಾಮಾನ್ಯರ ಬೆನ್ನು ಬಿದ್ದಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಟೋ ಚಾಲಕನೋರ್ವ ಹನಿಟ್ರ್ಯಾಪ್ ಜಾಲದ ಬಲೆಗೆ ಬಿದ್ದಿದ್ದಾನೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಆಟೋ ಚಾಲಕನಿಗೆ ರಾತ್ರಿಯ ಹೊತ್ತಲ್ಲಿ ವಿಡಿಯೋ ಕಾಲ್ ಬಂದಿತ್ತು. ಯುವತಿಯೊಬ್ಬಳು ವಿಡಿಯೋದಲ್ಲಿ ಬೆತ್ತಲಾಗಿದ್ದು, ನೋಡಿ ಆಕೆ ಹೇಳಿದಂತೆ ಚಾಲಕ ಕೂಡ ಬೆತ್ತಲಾಗಿ ಆಕೆಯೊಂದಿಗೆ ಚಾಟ್ ಮಾಡಿದ್ದಾನೆ. ಆದರೆ ತಂಡವೊಂದನ್ನು ಈತನ ಬೆತ್ತಲೆ ವಿಡಿಯೋ ರೆಕಾರ್ಡ್ ಇಟ್ಟುಕೊಂಡು ಹಣಕ್ಕೆ ಡಿಮ್ಯಾಂಡ್ ಇಟ್ಟಿದೆ. ಆದರೆ ಆಟೋ ಚಾಲಕ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ.
ಇದನ್ನೂ ಓದಿ : Honney Trap : ಪ್ರಜ್ಞೆ ತಪ್ಪಿಸಿ ಅಶ್ಲೀಲ ವಿಡಿಯೋ ಶೂಟ್ : ಹನಿಟ್ರ್ಯಾಪ್ ಮಾಡಿ ಸಿಕ್ಕಿ ಬಿದ್ರು ಗೆಳೆಯ, ಗೆಳತಿ
ಆದರೆ ವಾರದ ಕಳೆಯುವ ಹೊತ್ತಲ್ಲೇ ಆಟೋ ಚಾಲಕನ ಸ್ನೇಹಿತ ವಾಟ್ಸಾಪ್‌ಗೆ ವಿಡಿಯೋ ಕಾಲ್ ಮಾಡಿದ್ದ ವಿಡಿಯೋವನ್ನು ದುಷ್ಕರ್ಮಿಗಳು ಹರಿಬಿಟ್ಟಿದ್ದಾರೆ. ಇದರಿಂದಾಗಿ ಆಟೋ ಚಾಲಕನಿಗೆ ಧಿಕ್ಕೆ ತೋಚದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪರಿಚಿತರ ವಿಡಿಯೋ ಕಾಲ್ ರಿಸೀವ್ ಮಾಡೋ ಮುನ್ನ ಹುಷಾರ್ ಆಗಿರಿ.
ಇದನ್ನೂ ಓದಿ : ಪುತ್ತೂರಿನಲ್ಲಿ ಹನಿಟ್ರ್ಯಾಪ್ : 30 ಲಕ್ಷ ಕಳೆದುಕೊಂಡ ವ್ಯಕ್ತಿ : ಯುವತಿಯ ಬಂಧನ, 6 ಮಂದಿ ನಾಪತ್ತೆ