House Demolished: ಬಾಲಕಿಗೆ ಲೈಂಗಿಕ ದೌರ್ಜನ್ಯ.. ಶಾಲಾ ಬಸ್ ಡ್ರೈವರ್ ಮನೆ ಧ್ವಂಸ

ಭೋಪಾಲ್ : House Demolished ಮೂರೂವರೆ ವರ್ಷದ ಪುಟ್ಟ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ, ಶಾಲೆಯೊಂದರ ಬಸ್ ಡ್ರೈವರ್ ಮನೆಯನ್ನ ಧ್ವಂಸ ಮಾಡಲಾಗಿದೆ. ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಆಡಳಿತದ ಅಧಿಕಾರಿಗಳು ಹಾಗೂ ಪೊಲೀಸರು ಮುಂದೆ ನಿಂತು ಮನೆಯನ್ನ ಕೆಡವಿ ಹಾಕಿದ್ದಾರೆ.

ಏನಿದು ಘಟನೆ : ಬೋಪಾಲ್ ನ ಖಾಸಗಿ ಶಾಲೆಯೊಂದರಲ್ಲಿ ಮೂರುವರೆ ವರ್ಷದ ಮಗುವನ್ನ ನರ್ಸರಿಗೆ ಸೇರಿಸಿದ್ರು. ನಿತ್ಯ ಮನೆಯಿಂದ ಬಸ್ ನಲ್ಲಿ ಹೋಗಿ ಬರ್ತಿದ್ದ ಬಾಲಕಿ ಮೇಲೆ ಸ್ಕೂಲ್ ಬಸ್ ಡ್ರೈವರ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಮಗು ಮೊನ್ನೆ ಶಾಲೆಯಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಗು ಶಾಲೆಯಿಂದ ಮನೆಗೆ ಬಂದಾಗ, ತಾಯಿ ಮಗುವಿನ ಬಟ್ಟೆಯನ್ನ ಯಾರೋ ಬದಲಿಸಿರೋದನ್ನ ಗಮನಿಸಿದ್ದಾರೆ. ನರ್ಸರಿಯಲ್ಲಿ ಮಗು ಕಲಿಯುತ್ತಿರೋದ್ರಿಂದ ನಿತ್ಯ ಬ್ಯಾಗ್ ನಲ್ಲಿ ಎಕ್ಸ್ಟ್ರಾ ಬಟ್ಟೆಯನ್ನ ಅಂದ್ರೆ ಇಟ್ಟು ಕಳುಹಿಸ್ತಿದ್ರು. ಆದ್ರೆ ಬಟ್ಟೆ ಬದಲಿಸಿದ್ದನ್ನ ಗಮನಿಸಿದ್ದ ತಾಯಿ, ಶಾಲೆಯ ಶಿಕ್ಷಕಿಯರ ಬಳಿ ವಿಚಾರಿಸಿದ್ರು. ಆದ್ರೆ ಅವರು, ನಾವ್ಯಾರು ಬಟ್ಟೆ ಬದಲಿಸಿಲ್ಲ ಅಂತಾ ತಿಳಿಸಿದ್ರು.

ಬಳಿಕ ತಾಯಿ ಯಾರು ಬಟ್ಟೆ ಬದಲಿಸಿದ್ದಾರೆ ಅಂತಾ ಮಗುವನ್ನೇ ವಿಚಾರಿಸಿದ್ರು. ಆಗ ಆ ಮಗು ‘ಬಸ್ ಅಂಕಲ್’ ಅಂತಾ ಹೇಳಿತ್ತು. ಅಲ್ದೆ ಮಗುವಿನ ಹತ್ತಿರ ಮತ್ತಷ್ಟು ವಿಚಾರಿಸಿದಾಗ ಶಾಲಾ ಬಸ್ ಡ್ರೈವರ್ ಅಸಭ್ಯವಾಗಿ ವರ್ತಿಸಿರೋದು, ಹಾಗೂ ಮುಖ,ತುಟಿ ಮತ್ತು ಖಾಸಗಿ ಅಂಗಗಳನ್ನ ಮುಟ್ಟಿರೋ ಬಗ್ಗೆ ಮಗು ತಾಯಿ ಬಳಿ ಹೇಳಿಕೊಂಡಿತ್ತು. ಆಗಲೇ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋದು ಗೊತ್ತಾಗಿತ್ತು.

ಮಗುವಿನ ತಾಯಿ ಶಾಲಾ ಆಡಳಿತ ಮಂಡಳಿಗೆ ವಿಚಾರ ತಿಳಿಸಿದ್ದಾರೆ. ಆದ್ರೆ, ಶಾಲೆಯವ್ರು ಈ ಪ್ರಕರಣವನ್ನ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಬಳಿಕ ಮಗುವಿನ ತಾಯಿ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದಾರೆ. ಇನ್ನು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಬಸ್ ನಲ್ಲಿ ಒಬ್ಬ ಮಹಿಳಾ ಸಹಾಯಕಿಯೂ ಇದ್ದಳು ಅಂತಾ ಗೊತ್ತಾಗಿದ್ದು, ಆಕೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಡ್ರೈವರ್ ಹಾಗೂ ಬಸ್ ಸಹಾಯಕಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಇನ್ನೊಂದೆಡೆ ಸ್ಕೂಲ್ ಬಸ್ ಡ್ರೈವರ್  ಮನೆಯನ್ನ ಧ್ವಂಸ ಗೊಳಿಸಿದ್ದಾರೆ. ಆತನ ಮನೆ ಅಕ್ರಮವಾಗಿ ನಿರ್ಮಿಸಲಾಗಿದ್ದು ಅನ್ನೋ ಕಾರಣ ನೀಡಿದ್ದಾರೆ.

ಇದನ್ನೂ ಓದಿ : Five men gang-rape : ಬಾಯ್​ಫ್ರೆಂಡ್​ ಎದುರಲ್ಲೇ ಮಹಿಳೆ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : husband put gum on his wife’s private part :ನಶೆಯಲ್ಲಿ ಪತ್ನಿಯ ಖಾಸಗಿ ಅಂಗಕ್ಕೆ ಗಮ್ ಹಾಕಿದ ಪಾಪಿ ಪತಿ

House Demolished Bus Driver’s House Demolished After He Allegedly Raped 3 Year Old child

Comments are closed.