New jersey for Team India : ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾದ ನ್ಯೂ ಲುಕ್

ಕ್ರಿಕೆಟ್ : New jersey for Team India ಕಾಂಗರೂಗಳ ನಾಡಿನಲ್ಲಿ ನಡೆಯಲಿರುವ ಈ ಬಾರಿ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಟೀಂ ಇಂಡಿಯಾ 15 ಜನರ ತಂಡ  ರೆಡಿಯಾಗಿದೆ. ಆದ್ರೆ ಈ ಬಾರಿಯ ಟಿ-20 ಸಮರಾಂಗಣಕ್ಕೆ ಟೀಂ ಇಂಡಿಯಾ ಹೊಸ ಲುಕ್ ನೊಂದಿಗೆ ಅಖಾಡಕ್ಕೆ ಇಳಿಯುತ್ತಿದೆ.

ಟಿ20 ವಿಶ್ವಕಪ್‌ ನಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಸ್ಕೈ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದು, ಭಾರತ ತಂಡ ಶೀಘ್ರದಲ್ಲೇ ಹೊಸ ಜೆರ್ಸಿಗಳನ್ನು ಬಿಡುಗಡೆ ಮಾಡುವುದಾಗಿ ಬಿಸಿಸಿಐ ಘೋಷಿಸಿದೆ. ಕಳೆದ ವರ್ಷದ ಟಿ 20 ವಿಶ್ವಕಪ್‌ಗೂ ಮುನ್ನ, ತಂಡದ ಕಿಟ್ ಪ್ರಾಯೋಜಕರಾದ ಎಂಪಿಎಲ್ ಸ್ಪೋರ್ಟ್ಸ್ ಟೀಂ ಇಂಡಿಯಾದ ಪ್ರಸ್ತುತ ಧರಿಸಿರುವ ಜೆರ್ಸಿಗಳನ್ನು ಅನಾವರಣಗೊಳಿಸಿತ್ತು.ಈ ಜೆರ್ಸಿಗಳು ಕಡು ನೀಲಿ ಬಣ್ಣದಿಂದ ಕೂಡಿದ್ದು, ಕೆಲವು ಪಟ್ಟೆಗಳನ್ನು ಹೊಂದಿವೆ. ಆದರೆ ಮುಂಬರುವ ಟಿ20 ವಿಶ್ವಕಪ್ ಗಾಗಿ ಭಾರತ ತಂಡದ ಜೆರ್ಸಿ ಮತ್ತೊಮ್ಮೆ ಬದಲಾಗಲಿದೆ. MPL ಸ್ಪೋರ್ಟ್ಸ್ ಮಂಗಳವಾರ ಹೊಸ ಜೆರ್ಸಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಘೋಷಿಸಿದೆ. ಎಂಪಿಎಲ್ ಸ್ಪೋರ್ಟ್ಸ್ ವಿಡಿಯೋ ಮೂಲಕ ಈ ಘೋಷಣೆ ಮಾಡಿದ್ದು, ಈ ಬಗ್ಗೆ ಬಿಸಿಸಿಐ ಕೂಡ ಟ್ವೀಟ್ ಮಾಡಿದೆ.

ಈ ವಿಡಿಯೋದಲ್ಲಿ ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಶ್ರೇಯಸ್ ಅಯ್ಯರ್ ಇದ್ದಾರೆ. ಹೊಸ ಜರ್ಸಿ ಮೇಲೆ ಜಾಕೆಟ್ ಹಾಕಿರೋದ್ರಿಂದ, ಒಳಗೆ ಆಕಾಶ ನೀಲಿ ಬಣ್ಣದ ಜೆರ್ಸಿ ಎದ್ದು ಕಾಣುತ್ತಿದೆ. ಇದರೊಂದಿಗೆ ಟೀಂ ಇಂಡಿಯಾ ಮತ್ತೊಮ್ಮೆ ಆಕಾಶ ನೀಲಿ ಬಣ್ಣದಲ್ಲಿ ಅಭಿಮಾನಿಗಳ ನೆಚ್ಚಿನ ಜೆರ್ಸಿ ಧರಿಸೋದು ಫಿಕ್ಸ್ ಆಗಿದೆ. ಆದ್ರೆ ಈ ಹೊಸ ಜೆರ್ಸಿಗಳನ್ನು ಯಾವಾಗ ಬಿಡುಗಡೆ ಮಾಡ್ತಾರೆ, ಅವುಗಳ ವಿನ್ಯಾಸ ಹೇಗಿರುತ್ತದೆ ಎಂಬುದನ್ನು MPL ಸ್ಪೋರ್ಟ್ಸ್ ಇನ್ನೂ ಬಹಿರಂಗಪಡಿಸಿಲ್ಲ. ಟಿ20 ವಿಶ್ವಕಪ್ ಮುಂದಿನ ತಿಂಗಳು 16 ರಿಂದ ಆರಂಭವಾಗಲಿದೆ. ಆ ವೇಳೆಗಾಗಲೇ ಜೆರ್ಸಿ ಅನಾವರಣಗೊಳ್ಳಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ.ಈ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಈ ಮೆಗಾ ಟೂರ್ನಮೆಂಟ್‌ಗಾಗಿ ಭಾರತ ತಂಡವನ್ನು ಮತ್ತೊಮ್ಮೆ ಆಕಾಶ ನೀಲಿ ಬಣ್ಣದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕಳೆದ ಸೋಮವಾರ ಈ ಬಾರಿಯ ಟಿ-20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನು ಘೋಷಣೆ ಮಾಡಲಾಗಿದೆ. ಈ ಮೆಗಾ ಟೂರ್ನಮೆಂಟ್ ನಲ್ಲಿ ಆಡಲು ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ವಾಪಸ್ ಆಗಿದ್ದಾರೆ. ಮಹಮ್ಮದ್ ಶಮಿ ಸ್ಟ್ಯಾಂಡ್‌ ಬೈನಲ್ಲಿದ್ದಾರೆ. ಆದರೆ ಕೇರಳದ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್ ಗೆ ನಿರಾಸೆ ಮೂಡಿಸಲಾಗಿದೆ. ಆದರೆ ಏಷ್ಯಾಕಪ್‌ನಲ್ಲಿ ಫೈನಲ್ ತಲುಪದೆ ವಾಪಸ್ ಆಗಿದ್ದ ಟೀಂ ಇಂಡಿಯಾ ಟಿ-20 ವಿಶ್ವಕಪ್ ನಲ್ಲಿ ಅದ್ಹೇಗೆ ಕಂ ಬ್ಯಾಕ್ ಮಾಡುತ್ತೆ ಕಾದು ನೋಡಬೇಕಿದೆ.

New jersey for Team India MPL Sports, India’s official kit partners, announced new jersey

Comments are closed.