POLICE COMPLAINT ON WOMAN : ಪತಿಯ ಮನೆಯ 10 ಲಕ್ಷ ರೂ. ದೋಚಿ ತವರು ಮನೆಗೆ ಎಸ್ಕೇಪ್​ ಆದ ಪತ್ನಿ

ಬೆಂಗಳೂರು : POLICE COMPLAINT ON WOMAN : ದಾಂಪತ್ಯ ಎನ್ನುವುದು ಎಷ್ಟು ಸುಂದರ ಸಂಬಂಧವೋ ಸ್ವಲ್ಪ ಯಾಮಾರಿದರೂ ಈ ಸಂಬಂಧ ಒಂದು ಕುಟುಂಬವನ್ನೇ ಹಾಳು ಮಾಡಿಬಿಡಬಹುದು. ಈ ಮಾತಿಗೆ ಸಾಕ್ಷಿ ಎಂಬಂತಹ ಘಟನೆಯೊಂದು ಬೆಂಗಳೂರಿನ ಪದ್ಮನಾಭನಗರದಲ್ಲಿ ಸಂಭವಿಸಿದೆ. ಸೊಸೆಯು ನಮ್ಮ ಕುಟುಂಬಕ್ಕೆ ಮಾನಸಿಕ ಹಿಂಸೆಯನ್ನು ನೀಡಿ 10 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆಂದು ಆರೋಪಿಸಿ ಕಮಲ ಎಂಬವರು ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ.


ಕಮಲಾ ತನ್ನ ಪುತ್ರನಿಗೆ ಮೊದಲ ನಿಶ್ಚಿತಾರ್ಥ ಮುರಿದು ಹೋದ ಬಳಿಕ ಗೌತಮಿ ಎಂಬ ಯುವತಿಯನ್ನು ತನ್ನ ಮಗನಿಗಾಗಿ ಹುಡುಕಿದ್ದರು. ತಾವೇ ಸಂಪೂರ್ಣ ಖರ್ಚು ಹಾಗೂ ವಧುವಿಗೆ ಚಿನ್ನಾಭರಣಗಳನ್ನು ನೀಡಿ ಮದುವೆ ಮಾಡಿಸಿದ್ದರು. ಆದರೆ ಮದುವೆಯಾಗಿ ಮನೆಗೆ ಬಂದ ದಿನದಿಂದಲೇ ಗೌತಮಿ ತನ್ನ ವರಸೆಯನ್ನು ತೋರಿಸಿದ್ದಾಳೆ. ಪತಿಯ ಜೊತೆ ಅಮೆರಿಕಕ್ಕೆ ತೆರಳಬೇಕಿದ್ದ ಗೌತಮಿಯು ಪತಿಯ ಮನೆಯಲ್ಲಿ ಒಂದಿಲ್ಲೊಂದು ವಿಚಾರಕ್ಕೆ ತಗಾದೆ ತೆಗೆದು ಚಿತ್ರಹಿಂಸೆ ನೀಡುತ್ತಿದ್ದಳು ಎನ್ನಲಾಗಿದೆ.

ಗೌತಮಿಯನ್ನು ಪತಿಯೊಂದಿಗೆ ಅಮೆರಿಕಕ್ಕೆ ಕಳುಹಿಸಲು ಪತಿಯ ಮನೆಯವರೇ 50 ಸಾವಿರ ರೂಪಾಯಿ ಖರ್ಚು ಮಾಡಿಸಿ ವೀಸಾ ರೆಡಿ ಮಾಡಿದ್ದರು. ಅಲ್ಲದೇ ವಿಮಾನದ ಟಿಕೆಟ್​ ಹಣವನ್ನೂ ಭರಿಸಿದ್ದಾರೆ. ಆದರೆ ಈ ನಡುವೆ ಅನಾರೋಗ್ಯದ ನೆಪವೊಡ್ಡಿ ಗೌತಮಿ ತನ್ನ ತವರು ಮನೆಗೆ ಹೋಗಿದ್ದಾಳೆ . ಸ್ವಲ್ಪ ದಿನಗಳ ಬಳಿಕ ಕಮಲ ಕುಟುಂಬಸ್ಥರಿಗೆ ಸೊಸೆಯು 10 ಲಕ್ಷ ರೂಪಾಯಿ ನಗದು ಹಾಗೂ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳ ಸಮೇತ ಎಸ್ಕೇಪ್​ ಆಗಿದ್ದಾಳೆ ಎಂಬ ವಿಚಾರ ತಿಳಿದಿದೆ.


ಗೌತಮಿ ತವರು ಮನೆಗೆ ತೆರಳಿದ ಕಮಲ ಕುಟುಂಬಸ್ಥರು ಹಣ ಹಾಗೂ ಚಿನ್ನಾಭರಣಗಳನ್ನು ಮರಳಿಸುವಂತೆ ಕೇಳಿದ್ದಾರೆ. ಆದರೆ ಗೌತಮಿ ಪೋಷಕರು ಕಮಲರನ್ನು ತರಾಟೆಗೆ ತೆಗೆದುಕೊಂಡು ಬರಿಗೈಲಿ ವಾಪಸ್​ ಕಳಿಸಿದ್ದಾರೆ. ಸೊಸೆಯ ಕಾಟದಿಂದ ಬೇಸತ್ತ ಕಮಲಾ ಇದೀಗ ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನು ಓದಿ : Zomato ಪಿಜ್ಜಾ ಆರ್ಡರ್ ರದ್ದು: ಗ್ರಾಹಕರಿಗೆ 10,000 ರೂ. ಪಾವತಿಸಲು ಆದೇಶ

ಇದನ್ನೂ ಓದಿ : Sania Mirza pulls out of US Open : ಯುಎಸ್ ಓಪನ್ ಟೆನಿಸ್ ನಿಂದ ಹಿಂದೆ ಸರಿದ ಸಾನಿಯಾ ಮಿರ್ಜಾ

HUSBAND AND FAMILY MEMBERS FILES POLICE COMPLAINT ON WOMAN IN BENGALURU

Comments are closed.