Antarctica winter ends :ಬರೋಬ್ಬರಿ 4 ತಿಂಗಳು ಬಳಿಕ ಅಂಟಾರ್ಟಿಕಾದಲ್ಲಿ ಉದಯಿಸಿದ ಸೂರ್ಯ

ಅಂಟಾರ್ಟಿಕಾ : Antarctica winter ends: ಅಂಟಾರ್ಟಿಕಾದಲ್ಲಿ ಚಳಿಗಾಲವು ಮುಗಿದಿದ್ದು ಬರೋಬ್ಬರಿ ನಾಲ್ಕು ತಿಂಗಳುಗಳ ಬಳಿಕ ಸೂರ್ಯನ ಕಿರಣಗಳು ಅಂಟಾರ್ಟಿಕಾ ಪ್ರದೇಶದ ಮೇಲೆ ಬಿದ್ದಿದೆ. ಈ ಭಾಗದಲ್ಲಿ ಸೂರ್ಯನ ಕಿರಣಗಳು ಬಿತ್ತು ಅಂದರೆ ಅಲ್ಲಿಗೆ ಚಳಿಗಾಲದ ಅವಧಿ ಮುಗಿದಿದೆ ಎಂದರ್ಥವಾಗಿದೆ. ಅಂಟಾರ್ಟಿಕಾದಲ್ಲಿ ಚಳಿಗಾಲದ ತಿಂಗಳು ಬಹಳ ಕಠಿಣವಾಗಿರುತ್ತದೆ. ಸಂಪೂರ್ಣ ಕತ್ತಲು ಆವರಿಸಿದ ಪ್ರದೇಶದಲ್ಲಿ ತಾಪಮಾನವು ಅತ್ಯಂತ ಕಡಿಮೆ ಇರುತ್ತದೆ. ಯುರೋಪಿಯನ್​ ಸ್ಪೇಸ್​ ಏಜೆನ್ಸಿಯು ಅಂಟಾರ್ಟಿಕಾದ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದೆ.

‘ಇದು ಅಂಟಾರ್ಟಿಕಾದಲ್ಲಿ ಚಳಿಗಾಲದ ಅಂತ್ಯವಾಗಿದೆ. @DrHagson & Concordia ನಿಲ್ದಾಣದ ಸಿಬ್ಬಂದಿ ನಾಲ್ಕು ತಿಂಗಳುಗಳ ಕಾಯುವಿಕೆ ಬಳಿಕ ಸೂರ್ಯನನ್ನು ಸ್ವಾಗತಿಸಿದ್ದಾರೆ ಎಂದು ಯುರೋಪಿಯನ್​ ಸ್ಪೇಸ್​ ಏಜೆನ್ಸಿ ಟ್ವಿಟರ್​ನಲ್ಲಿ ತಿಳಿಸಿದೆ.


ಬರೋಬ್ಬರಿ ನಾಲ್ಕು ತಿಂಗಳುಗಳ ಬಳಿಕ ಅಂಟಾರ್ಟಿಕಾದಲ್ಲಿ ಸೂರ್ಯನ ಮೊದಲ ಕಿರಣಗಳು ಭೂಮಿಯನ್ನು ಸ್ಪರ್ಶಿಸಿದ ದೃಶ್ಯಗಳು ಮನ ಮೋಹಕವಾಗಿದ್ದು ಈ ಅದ್ಭುತ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಸಖತ್​ ವೈರಲ್​ ಆಗಿದೆ.

ಈ ಪ್ರದೇಶದಲ್ಲಿ ಸಮಯಕ್ಕೆ ವಿಚಿತ್ರವಾದ ಗುಣವಾಗಿದೆ. ಇಲ್ಲಿ ಒಂದೇ ಕಾಲಕ್ಕೆ ನಿಮಗೆ ಸಮಯ ಬೇಗ ಹಾಗೂ ಅತ್ಯಂತ ತಡವಾಗಿ ಸಾಗುತ್ತಿರುವಂತೆ ಭಾಸವಾಗುತ್ತದೆ. ಹಗಲು ಹಿಂತಿರುಗಿರುವುದು ಖಂಡಿತವಾಗಿಯೂ ನಮ್ಮೆಲ್ಲರನ್ನು ಹುರಿದುಂಬಿಸಿದೆ ಎಂದು ಹ್ಯಾಗ್ಸನ್​ ಹೇಳಿದ್ದಾರೆ.

ಇದನ್ನು ಓದಿ : Manish sisodia attack On Bjp : ಬಿಜೆಪಿ ಸೇರಿದ್ರೆ ಎಲ್ಲಾ ಕೇಸ್ ಕ್ಲೋಸ್-ಮನೀಶ್ ಸಿಸೋಡಿಯಾ

ಇದನ್ನೂ ಓದಿ : Zomato ಪಿಜ್ಜಾ ಆರ್ಡರ್ ರದ್ದು: ಗ್ರಾಹಕರಿಗೆ 10,000 ರೂ. ಪಾವತಿಸಲು ಆದೇಶ

Antarctica winter ends: Take a look at first sunrise after 4 months of darkness

Comments are closed.