ಮಂಗಳವಾರ, ಏಪ್ರಿಲ್ 29, 2025
HomeCrimesleep talk:ನಿದ್ದೆಗಣ್ಣಿನಲ್ಲಿ ಪತಿಯೆದರು ಹೇಳಬಾರದ್ದನ್ನು ಹೇಳಿದ ಪತ್ನಿ:ಮುಂದೇನಾಯ್ತು ನೋಡಿ

sleep talk:ನಿದ್ದೆಗಣ್ಣಿನಲ್ಲಿ ಪತಿಯೆದರು ಹೇಳಬಾರದ್ದನ್ನು ಹೇಳಿದ ಪತ್ನಿ:ಮುಂದೇನಾಯ್ತು ನೋಡಿ

- Advertisement -

sleep talk : ನಿದ್ದೆಯಲ್ಲಿ ಬಡಬಡಾಯಿಸುವ ಅಭ್ಯಾಸ ಅನೇಕರಿಗೆ ಇರುತ್ತದೆ. ಕೆಲವೊಬ್ಬರು ಚಿತ್ರ ವಿಚಿತ್ರವಾಗಿ ಮಾತನಾಡಿದರೆ ಇನ್ನು ಕೆಲವರು ನಿದ್ದೆಗಣ್ಣಿನಲ್ಲಿ ಬೆಳಗ್ಗೆಯಿಂದ ಆದ ಎಲ್ಲಾ ಘಟನೆಗಳನ್ನು ಹೇಳುತ್ತಾ ಹೋಗುತ್ತಾರೆ. ಇದೊಂದು ಸಾಮಾನ್ಯ ಸಮಸ್ಯೆ ಆಗಿರೋದ್ರಿಂದ ಯಾರೂ ಇದರ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ನಿದ್ದೆಗಣ್ಣಿನಲ್ಲಿ ಬಡಬಡಾಯಿಸುವ ತನ್ನ ಅಭ್ಯಾಸದಿಂದಾಗಿ ಇದೀಗ ಪೊಲೀಸ್​ ಠಾಣೆಯ ಅತಿಥಿಯಾಗಿದ್ದಾಳೆ.. !


ದುರ್ಬಲ ಮಹಿಳೆಯ ಆರೈಕೆ ಮಾಡುತ್ತಿದ್ದ ಈಕೆಯು ನಿದ್ದೆಗಣ್ಣಿನಲ್ಲಿ ತಾನು ದುರ್ಬಲ ಮಹಿಳೆ ಬಳಿಯಿದ್ದ ಹಣ ಕದ್ದಿದ್ದಾಗಿ ಹೇಳಿದ್ದು ಇದನ್ನು ಕೇಳಿಸಿಕೊಂಡ ಪತಿಯು ಆಕೆಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಪತ್ನಿಯು ನಿದ್ದೆಗಣ್ಣಿನಲ್ಲಿ ಹೇಳಿದ ಕಳ್ಳತನದ ಕತೆಯನ್ನು ಸಂಪೂರ್ಣವಾಗಿ ಕೇಳಿಸಿಕೊಂಡ ಪತಿಯು ಸುಮ್ಮನಿರದೇ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಪ್ರಾಮಾಣಿಕತೆಯನ್ನು ಮರೆದಿದ್ದಾರೆ .

ತಾನು ಆರೈಕೆ ಮಾಡಬೇಕಿದ್ದ ಮಹಿಳೆಯಿಂದ ರುಥ್​ ಪೋರ್ಟ್​ ಎಂಬಾಕೆ ಬರೋಬ್ಬರಿ 7200 ಪೌಂಡ್​ ಮೊತ್ತವನ್ನು ಎಗರಿಸಿದ್ದಳು. ಈ ರಹಸ್ಯವನ್ನು ರುಥ್​ ಫೋರ್ಟ್​ ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ನಿದ್ದೆ ಮಾಡುತ್ತಿದ್ದ ವೇಳೆಯಲ್ಲಿ ತನಗೆ ಅರಿವಿಲ್ಲದೆಯೇ ಪತಿಯ ಎದುರು ಎಲ್ಲಾ ಸತ್ಯವನ್ನು ಬಾಯ್ಬಿಟ್ಟ ಪರಿಣಾಮ ಇದೀಗ ಪೊಲೀಸ್​ ಠಾಣೆಯ ಅತಿಥಿಯಾಗಿದ್ದಾಳೆ.


ಈ ದಂಪತಿಗೆ ಮೂವರು ಮಕ್ಕಳು ಕೂಡ ಇದ್ದಾರೆ. ಮೆಕ್ಸಿಕೋದಲ್ಲಿ ವಾಸವಿರುವ ಈ ದಂಪತಿಗೆ ಕುಟುಂಬ ನಿರ್ವಹಣೆ ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೂ ಸಹ ತನ್ನ ಪತ್ನಿ ಹೇಗೆ ಎಲ್ಲವನ್ನೂ ನಿಭಾಯಿಸುತ್ತಾಳೆ ಎಂಬ ಅನುಮಾನ ಪತಿಗೆ ಎಂದಿನಿಂದಲೂ ಕಾಡುತ್ತಿತ್ತು. ಆದರೆ ನಿದ್ದೆಗಣ್ಣಿನಲ್ಲಿ ರುಥ್​ಫೋರ್ಡ್​ ವ್ಹೀಲ್​ ಚೇರ್​ ಮೇಲೆಯೇ ಇರುವ ಮಹಿಳೆಯ ಬಳಿ ಇರುವ ಹಣವನ್ನು ಕದ್ದಿದ್ದಾಗಿ ಒಪ್ಪಿಕೊಂಡಾಗ ಪತಿಯ ಅನುಮಾನ ನಿಜವಾಗಿದೆ. ಪತ್ನಿಯ ಪರ್ಸ್​ನಲ್ಲಿ ದುರ್ಬಲ ಮಹಿಳೆಯ ಡೆಬಿಟ್​ ಕಾರ್ಡ್ ನೋಡಿದ ಪತಿಯು ಕೂಡಲೇ ಪೊಲೀಸರ ಬಳಿ ತೆರಳಿದ್ದಾನೆ.


ನಾನು ರುಥ್​​ಳನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಆಕೆ ಮಾಡಿದ ತಪ್ಪನ್ನು ನನ್ನಿಂದ ನಿರ್ಲಕ್ಷಿಸಲು ಸಾಧ್ಯವಾಗಲಿಲ್ಲ. ಒಬ್ಬ ಮಹಿಳೆಯ ದುರ್ಬಲತೆಯನ್ನು ನನ್ನ ಪತ್ನಿ ಹೇಗೆ ಬಳಸಿಕೊಂಡಿದ್ದಾಳೆ ಎಂದು ಹೇಳಲು ನನಗೆ ಅಸಹ್ಯವೆನಿಸುತ್ತದೆ. ಹೀಗಾಗಿ ನಾನು ಪೊಲೀಸ್​ ಠಾಣೆಗೆ ದೂರು ನೀಡಿದೆ ಎಂದು 61 ವರ್ಷದ ಆಂಟೋನಿ ಹೇಳಿದರು.


ಪತ್ನಿಯು ನಿದ್ದೆಗಣ್ಣಿನಲ್ಲಿ ವ್ಹೀಲ್​ಚೇರ್​ನಲ್ಲೇ ಇರುವ ಮಹಿಳೆಯ ಬ್ಯಾಂಕ್​ ಖಾತೆಯಲ್ಲಿ ಸಾಕಷ್ಟು ಹಣವಿದೆ ಎಂದು ಹೇಳಿದ್ದಾಳೆ. ರುಥ್​​ಗೆ ಮಹಿಳೆಯ ಡೆಬಿಟ್​ ಕಾರ್ಡ್​ನ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಹೀಗಾಗಿಯೇ ನನ್ನ ಪತ್ನಿ ಅತ್ಯಂತ ಸುಲಭವಾಗಿ ದುರ್ಬಲ ಮಹಿಳೆಯಿಂದ ಹಣವನ್ನು ಎಗರಿಸಿದ್ದಾಳೆ ಎಂದು ಹೇಳಿದರು.

Husband finds out about wife’s crime from her sleep talk, reports her to police

ಇದನ್ನು ಓದಿ : School Reopen ಗೆ ಖಾಸಗಿ ಶಾಲೆಗಳ ಒತ್ತಡ, ಲಸಿಕೆ ಪಡೆಯದ ಮಕ್ಕಳ ಮೇಲೆ ಪ್ರಯೋಗ : ಸರಕಾರದ ವಿರುದ್ದ ಪೋಷಕರ ಆಕ್ರೋಶ

ಇದನ್ನೂ ಓದಿ : PUC 2022 Exam : ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

RELATED ARTICLES

Most Popular