SSLC Preparatory Exam : ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹಾಗೂ ಓಮಿಕ್ರಾನ್‌ ವೈರಸ್‌ ಸೋಂಕು ತಾಂಡವವಾಡುತ್ತಿದೆ. ಈ ನಡುವಲ್ಲೇ ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈಗಾಗಲೇ ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದೀಗ ಫೆಬ್ರವರಿ 21 ರಿಂದ 26 ರವರೆಗೆ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ (SSLC Preparatory Exam) ನಡೆಯಲಿವೆ.

ಬೆಳಗ್ಗೆ 1.30ರಿಂದ ಮಧ್ಯಾಹ್ನ 1.45ರ ವರಗೆ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಮಂಡಳಿ ನಿರ್ಧಾರ ಕೈಗೊಂಡಿದೆ. ಫೆಬ್ರವರಿ 21ರಂದು ಆರಂಭಗೊಳ್ಳಲಿರುವ ಪರೀಕ್ಷೆ ಒಟ್ಟು ಆರು ದಿನಗಳ ಕಾಲ ನಡೆಯಲಿದೆ. ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಈ ಕೆಳಗಿನಂತಿದೆ.

ಫೆಬ್ರವರಿ 21 : ಪ್ರಥಮ ಭಾಷೆ (ಕನ್ನಡ, ತೆಲಗು, ತಮಿಳು, ಮರಾಠಿ, ಉರ್ದು, ಇಂಗ್ಲೀಷ್, ಸಂಸ್ಖ್ರತ )
ಫೆಬ್ರವರಿ 22 : ಸಮಾಜ ವಿಜ್ಞಾನ
ಫೆಬ್ರವರಿ 23 : ದ್ವಿತೀಯ ಭಾಷೆ (ಇಂಗ್ಲೀಷ್, ಕನ್ನಡ )
ಫೆಬ್ರವರಿ 24 : ಗಣಿತ
ಫೆಬ್ರವರಿ 25 : ತೃತೀಯ ಭಾಷೆ ( ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಪರ್ಷಿಯನ್ )
ಫೆಬ್ರವರಿ 26 : ಕೋರ್ ಸಬ್ಜೆಕ್ಟ್ : ವಿಜ್ಞಾನ

SSLC : ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು : ಕರ್ನಾಟಕ ಪ್ರೌಢಶಿಕ್ಷಣಾ ಪರೀಕ್ಷಾ ಮಂಡಳಿಯು ಮಾರ್ಚ್​/ ಏಪ್ರಿಲ್​ 2022ರ ಎಸ್​ಎಸ್​ಎಲ್​ಸಿSSLC ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ ರಾಜ್ಯದಲ್ಲಿ ಮಾರ್ಚ್​ 28ರಿಂದ ಏಪ್ರಿಲ್​ 11ನೇ ತಾರೀಖಿನವರೆಗೆ ಪರೀಕ್ಷೆಗಳು ನಡೆಯಲಿವೆ. ಇನ್ನು ಪ್ರಸ್ತುತ ಪ್ರಕಟಿಸಲಾದ ವೇಳಾಪಟ್ಟಿಯಲ್ಲಿ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ದೂರು ಸಲ್ಲಿಸಲು ಇಂದಿನಿಂದ ಜನವರಿ 14ರವರೆಗೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು www.sslc.karnataka.gov.in / [email protected] ಗೆ ಇ ಮೇಲ್​ ಮಾಡುವಂತೆ ಅಥವಾ ನಿರ್ದೇಶಕರು , ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560003ಗೆ ಅಂಚೆ ಮಾಡುವಂತೆ ತಿಳಿಸಲಾಗಿದೆ.

PUC 2022 Exam : ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳ ಏರಿಕೆಯ ಭೀತಿ ನಡುವೆಯೇ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ದಿನಾಂಕವನ್ನು ( PUC 2022 Exam Time Table ) ಪ್ರಕಟಿಸಿದೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಮೊದಲನೇ ಹಾಗೂ ಎರಡನೇ ಅಲೆಯ ಕಾರಣಕ್ಕೆ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಅಸ್ತವ್ಯಸ್ಥಗೊಂಡಿತ್ತು. ಇದರಿಂದ ಮಕ್ಕಳು ಪರೀಕ್ಷೆಯ ಸಂದರ್ಭದಲ್ಲಿ ಒತ್ತಡ ಎದುರಿಸುವಂತಾಗಿತ್ತು.

ಹೀಗಾಗಿ ಈ ವರ್ಷ ಶೈಕ್ಷಣಿಕ ವರ್ಷಾರಂಭದಿಂದಲೂ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕಾಳಜಿ ವಹಿಸಿದ್ದ ಶಿಕ್ಷಣ ಇಲಾಖೆ ಈಗ ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕವನ್ನು ಅಂದಾಜು ಎರಡು ತಿಂಗಳ ಮೊದಲೇ ನಿಗದಿಪಡಿಸಿ ಬಿಡುಗಡೆ ಮಾಡಿದೆ. ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಫೆ.17ರಿಂದ ಮಾ.23ರವರೆಗೆ ನಡೆಯಲಿದ್ದು, ಇದಾದ ಬಳಿಕದ್ಚಿತೀಯ ಪಿಯುಸಿ ಪೂರ್ವ ಸಿದ್ದತಾ ಪರೀಕ್ಷೆ ಮಾ.14ರಿಂದ ಮಾ.25ರವರೆಗೆ ಪರೀಕ್ಷೆ ನಿಗದಿ ಪಡಿಸಿದ ಪಿಯು ಬೋರ್ಡ್ ಪ್ರಕಟಣೆ ಹೊರಡಿಸಿದೆ. ಇದಾದ ಬಳಿಕ ದ್ವಿತೀಯ ಪಿಯುಸಿ ಅಂತಿಮಪರೀಕ್ಷೆ ಆರಂಭವಾಗಲಿದೆ. ಏಪ್ರಿಲ್ 16ರಂದು ಪರೀಕ್ಷೆ ಆರಂಭವಾಗಲಿದ್ದು ಮೇ 4 ಕ್ಕೆ ಮುಕ್ತಾಯವಾಗಲಿದೆ.

ಏಪ್ರಿಲ್ 16 ರಂದು ಗಣಿತ, ಶಿಕ್ಷಣ, ಮೂಲ ಗಣಿತ

ಏ.18ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಏ. 19ರಂದು ಮಾಹಿತಿ ತಂತ್ರಜ್ಞಾನ

ಏ. 20ರಂದು ಇತಿಹಾಸ, ಭೌತಶಾಸ್ತ್ರ

ಏ. 21ರಂದು ದ್ವಿತೀಯ ಭಾಷೆ

ಏ.22ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಏ. 23ರಂದು ರಾಸಾಯನಶಾಸ್ತ್ರ, ಮನಃಶಾಸ್ತ್ರ, ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ

ಏ.25ರಂದು ಅರ್ಥಶಾಸ್ತ್ರ

ಏ. 26ರಂದು ಹಿಂದಿ

ಏ. 28ರಂದು ಐಚ್ಛಿಕ ಕನ್ನಡ, ಅಕೌಂಟ್ಸ್, ಭೂವಿಜ್ಞಾನ

ಏ. 29ರಂದು ಕನ್ನಡ

ಏ. 30ರಂದು ಸಮಾಜಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್

ಮೇ. 02 ಭೂಗೋಳಶಾಸ್ತ್ರ, ಜೀವಶಾಸ್ತ್ರ

ಮೇ. 04 ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ : School Reopen ಗೆ ಖಾಸಗಿ ಶಾಲೆಗಳ ಒತ್ತಡ, ಲಸಿಕೆ ಪಡೆಯದ ಮಕ್ಕಳ ಮೇಲೆ ಪ್ರಯೋಗ : ಸರಕಾರದ ವಿರುದ್ದ ಪೋಷಕರ ಆಕ್ರೋಶ

ಇದನ್ನೂ ಓದಿ : Coastal Corona : ಕರಾವಳಿಯಲ್ಲಿ ಕೊರೊನಾ ಹೆಚ್ಚಳಕ್ಕೆ ಶಾಲೆಗಳೇ ಕಾರಣ : ಖಾಸಗಿ ಒತ್ತಡ, ಶಾಲೆ ಬಂದ್‌ ಮಾಡಲು ಸಚಿವರೇ ಅಡ್ಡಿ

(SSLC Preparatory Exam Time Table Release Karnataka )

Comments are closed.