ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನ ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ನ್ನು ಕೇಳಿದ ಪಶ್ಚಿಮ ಬಂಗಾಳ ಸರಕಾರ

ದಿ ಕೇರಳ ಸ್ಟೋರಿ ಸಿನಿಮಾ ಸಾಕಷ್ಟು ವಿವಾದದ ನಡುವೆಯೂ ಭರ್ಜರಿ ಕಲೆಕ್ಷನ್‌ನ್ನು ಕಾಣುತ್ತಿದೆ. ಈ ಸಿನಿಮಾವು ತಿರುಚಿದ ವಾಸ್ತವಗಳು ಹಾಗೂ ದ್ವೇಷಪೂರಿತ ದೃಶ್ಯಗಳನ್ನು ಒಳಗೊಂಡಿದ್ದು, ರಾಜ್ಯದಲ್ಲಿ ಧಾರ್ಮಿಕ ಭಾವಣೆಗಳಿಗೆ ಧಕ್ಕೆ ಹಾಗೂ ಸಮುದಾಯಗಳ ನಡುವೆ ಸೌಹಾರ್ದತೆಗೆ ಧಕ್ಕೆಯಾಗಬಹುದು ಎಂದು ಪಶ್ಚಿಮ ಬಂಗಾಳ ಸರಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಹೀಗಾಗಿ ಈ ಸಿನಿಮಾ ಪ್ರದರ್ಶನಕ್ಕೆ ನಿಷೇಧಿಸುವಂತೆ ಪಶ್ಚಿಮ ಬಂಗಾಳ ಸರಕಾರ ಸುಪ್ರೀಂ ಕೋರ್ಟ್‌ಗೆ (Supreme Court – West Bengal Govt) ಪತ್ರ ಸಲ್ಲಿಸಿದೆ.

ಈ ಕುರಿತಂತೆ ಸುಪ್ರೀಂ ಕೋರ್ಟ್‌ ಎದುರು ಪ್ರಮಾಣ ಪತ್ರ ಸಲ್ಲಿಸಿರುವ ಮಮತಾ ಬ್ಯಾನರ್ಜಿ ಸರಕಾರವು, ಹಲವು ಗುಪ್ತಚರ ಮಾಹಿತಿಗಳ ಪ್ರಕಾರ, ಈ ಸಿನಿಮಾದಿಂದ ಕೋಮು ಸಾಮರಸ್ಯಕ್ಕೆ ಧಕ್ಕೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕುಸಿದಂತಹ ಪರಿಸ್ಥಿತಿ ಉದ್ಭವಿಸಲಿದೆ ಎಂದು ವಾದಿಸಿದೆ. ಸಿನಿಮಾ ನಿಷೇಧಿಸುವ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಪಶ್ಚಿಮ ಬಂಗಾಳ ಸರಕಾರವು ಸಿನಿಮಾ ಪ್ರದರ್ಶನದಿಂದ ತೀವ್ರವಾದಿ ಗುಂಪುಗಳ ನಡುವೆ ಘರ್ಷಣೆಗಳಾಗುವ ಸಾಧ್ಯತೆ ಇದೆ ಎಂದು ಪ್ರತಿಪಾದಿಸಿದೆ.

ಪಶ್ಚಿಮ ಬಂಗಾಳ ಸರಕಾರವು ಯಾವುದೇ ದ್ವೇಷ ಅಥವಾ ಹಿಂಸಾಚಾರವನ್ನು ತಪ್ಪಿಸಲು ಸಿನಿಮಾವನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದೆ ಎಂದು ಸಮರ್ಥಿಸಿಕೊಂಡಿದೆ. ಪಶ್ಚಿಮ ಬಂಗಾಳ ಸರಕಾರವು ದಿ ಕೇರಳ ಸ್ಟೋರಿ ಸಿನಿಮಾವನ್ನು ನಿಷೇಧಿಸುವ ನಿರ್ಧಾರವನ್ನು ಪ್ರಶ್ನಿಸಿ ಸಿನಿಮಾ ನಿರ್ಮಾಪಕರು ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಮೇಲಿನಂತೆ ಪ್ರಮಾಣ ಪತ್ರ ಸಲ್ಲಿಸಿದೆ.

ಇದನ್ನೂ ಓದಿ : ಕೊನೆಗೂ ಮಗಳ ಮುಖ ರಿವೀಲ್‌ ಮಾಡಿದ ನಟ ಧ್ರುವ ಸರ್ಜಾ : ಮಗು ಎಷ್ಟು ಕ್ಯೂಟ್‌ ಆಗಿದೆ ಗೊತ್ತಾ ?

ಸದ್ಯ ದಿ ಕೇರಳ ಸ್ಟೋರಿ ಸಿನಿಮಾವು ಲವ್‌ ಜಿಹಾದ್‌ ಮತ್ತು ಮತಾಂತರದ ಘಟನೆಗಳನ್ನು ಒಳಗೊಂಡಿದೆ. ವಿವಾದತ್ಮಕ ಕಥಾಹಂದರ ಇರುವುದರಿಂದ ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದೆ. ಇನ್ನುಳಿದಂತೆ ಕೆಲವು ಕಡೆಗಳಲ್ಲಿ ಪ್ರದರ್ಶನಕ್ಕೆ ಅಡ್ಡಿ ಆಗಿದ್ದರೂ ಕೂಡ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿಲ್ಲ. ಎರಡನೇ ವಾರಕ್ಕೆ ಸರಿ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್‌ ಕಂಡಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಇನ್ನಷ್ಟು ದಾಖಲೆ ಸೃಷ್ಟಿಸಲಿದೆ.

Supreme Court – West Bengal Govt: The West Bengal government asked the Supreme Court to ban the screening of the movie The Kerala Story

Comments are closed.