India vs SA 3rd Test Results: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸೋಲಿಗೆ ಏನು ಕಾರಣ?

ಮೂರನೇ ಮತ್ತುಸರಣಿಯ  ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ (India vs SA 3rd Test Results) ಸೋಲನುಭವಿಸುವ ಮೂಲಕ ಭಾರತ ಸರಣಿಯನ್ನು ಬಿಟ್ಟುಕೊಟ್ಟಂತಾಗಿದೆ. ಆತಿಥೇಯ ದಕ್ಷಿಣ ಆಫ್ರಿಕಾ (South Africa) ತಂಡದ ಎದುರು ಭಾರತ ತಂಡ 7 ವಿಕೆಟ್ ಗಳಿಂದ ಸೋಲನುಭವಿಸಿ 2-1 ಅಂತರದಲ್ಲಿ ಸರಣಿಯನ್ನು ಬಿಟ್ಟುಕೊಟ್ಟಿತು. ಪಂದ್ಯದ ನಾಲ್ಕನೇ ದಿನವಾದ ಇಂದು, ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಲು ಒಟ್ಟು 111 ರನ್‌ಗಳ ಅಗತ್ಯವಿತ್ತು. ಇತ್ತ ಭಾರತ ತಂಡವು ಗೆಲುವು ಸಾಧಿಸಲು ದಕ್ಷಿಣ ಆಫ್ರಿಕಾದ 8 ವಿಕೆಟ್‌ಗಳನ್ನುಕೀಳಬೇಕಿತ್ತು. ಆದರೆ ಭಾರತದ ತಂಡವು ಈ ಗುರಿಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾದ ಕೀಗನ್ ಪೀಟರ್ಸನ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರ ಬ್ಯಾಟಿಂಗ್ ಬಲ ದಕ್ಷಿಣ ಆಫ್ರಿಕಾಕ್ಕೆ ಗೆಲುವಿನ ಹಾರ ಹಾಕಿತು.

ಭಾರತದ ರಿಷಬ್ ಪಂತ್ ಅವರ ಭರ್ಜರಿ ಶತಕವಿದ್ದರೂ ಸಹ ಭಾರತ ತಂಡ 198 ರನ್ ಗಳಿಸಲಷ್ಟೇ ಸಶಕ್ತವಾಗಿತ್ತು. ಭಾರತ ದಕ್ಷಿಣ ಆಫ್ರಿಕಾfಕೆ ನೀಡಿದ ಒಟ್ಟು ಗುರಿ 212 ರನ್‌ಗಳಷ್ಟೇ ಆಗಿದ್ದು ಸೋಲಿಗೆ ಮುಖ್ಯ ಕಾರಣವಾಯಿತು. ದಕ್ಷಿಣ ಆಫ್ರಿಕಾದ ನೂತನ ಬ್ಯಾಟರ್ ಕೀಗನ್ ಪೀಟರ್ಸನ್  ಭರ್ಜರಿ ಆಟವಾಡಿ ಇನ್ನಿಂಗ್ಸ್ ಕಟ್ಟಿದರು. ಪೀಟರ್ಸನ್ ರಾಸಿ ವ್ಯಾನ್ ಡೆರ್ ಡುಸ್ಸೆನ್ ಇಬ್ಬರೂ ಸೇರಿಕೊಂಡು 54 ರನ್ ಪೇರಿಸಿದರು.  ಭಾರತ ತಂಡ ತನಗೆ ದೊರಕಿದ ಉತ್ತಮ ಅವಕಾಶವೊಂದನ್ನು ಮಿಸ್ ಮಾಡಿಕೊಂಡಿತು,  ಚೇತೇಶ್ವರ ಪೂಜಾರ ಪೀಟರ್ಸನ್ ನೀಡಿದ  ಕ್ಯಾಚ್ ಕೈಚೆಲ್ಲಿದರು. ಇದು ಭಾರತ ತಂಡಕ್ಕೆ ಕೊಂಚ ಹಿನ್ನೆಡೆ ಉಂಟುಮಾಡಿತು. ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 72 ರನ್ ಗಳಿಸಿದ್ದ ಪೀಟರ್ಸನ್ 113 ಎಸೆತಗಳಲ್ಲಿ 82 ರನ್ ಗಳಿಸಿ ತಮ್ಮ ಉತ್ತಮ ರನ್ ಗಳಿಸಿದರು.  

ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಔಟ್ ಆಫ್ ಫಾರ್ಮ್ ಆಗಿದ್ದು ಭಾರತದ ಇಂದಿನ ಸೋಲಿಗೆ ಮುಖ್ಯ ಕಾರಣವೆನಿಸಿತು. ಭಾರತದ ಮಧ್ಯಮ ಕ್ರಮಾಂಕದ ಆಟಗಾರರಾದ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಅವರುಗಳ ಬಳಿ ದೊಡ್ಡ ಇನ್ನಿಂಗ್ಸ್ ಕಟ್ಟಲು ಆಗಲಿಲ್ಲ.

ಅಷ್ಟೇ ಅಲ್ಲದೇ ಈ ಪಂದ್ಯದ ಸೋಲಿಗೆ ಚೇತೇಶ್ವರ ಪೂಜಾರ ದಕ್ಷಿಣ ಆಫ್ರಿಕಾದ ಪ್ರಮುಖ ಬ್ಯಾಟರ್ ಕೀಗನ್ ಪೀಟರ್ಸನ್ ಅವರ ಕ್ಯಾಚ್  ಹಿಡಿಯದಿದ್ದು ಸಹ ಕಾರಣವಾಯಿತು. ಇಂದಿನ ಪಂದ್ಯದ ಸೋಲಿನ ಮೂಲಕ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ 2-1ರಿಂದ ಸರಣಯನ್ನು ಬಿಟ್ಟುಕೊಟ್ಟಂತಾಯಿತು.

ಇದನ್ನೂ ಓದಿ: Happy Makar Sankranti 2022: ಮಕರ ಸಂಕ್ರಾಂತಿಗೆ ಎಳ್ಳು–ಬೆಲ್ಲದ ಸವಿ; ಮನೆಯಲ್ಲೇ ಸಿಹಿಸಿಹಿಯಾದ ಖಾದ್ಯ ಮಾಡುವ ವಿಧಾನ ತಿಳಿಯಿರಿ

(India vs SA 3rd Test Results why India lost the match here is the reason)

Comments are closed.