Alwar rape case: ‘ಅತ್ಯಾಚಾರಿಗಳು ಹಣೆಗೆ ತಿಲಕವಿಡೋದಿಲ್ಲ’ : ಯಡವಟ್ಟಿನ ಹೇಳಿಕೆ ನೀಡಿದ ಸಚಿವೆ

Alwar rape case:ರಾಜಸ್ಥಾನದ ಅಲ್ವಾರ್​​ನಲ್ಲಿ ವಿಶೇಷ ಚೇತನ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರವನ್ನು ಖಂಡಿಸುವ ಭರದಲ್ಲಿ ರಾಜಸ್ಥಾನದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಮತಾ ಭೂಪೇಶ್​ ಯಡವಟ್ಟಿನ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ. ಅತ್ಯಾಚಾರದಂತಹ ಕೃತ್ಯಗಳನ್ನು ತಡೆಯಲು ಸರ್ಕಾರದಿಂದ ಸಾಧ್ಯವಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.


ಅತ್ಯಾಚಾರದಂತಹ ದುಷ್ಕೃತ್ಯಗಳನ್ನು ತಡೆಯಲು ಕೇವಲ ಸರ್ಕಾರದಿಂದ ಮಾತ್ರ ತಡೆಯಲು ಸಾಧ್ಯವಿಲ್ಲ . ಸಾಮೂಹಿಕ ಸಂಕಲ್ಪದಿಂದ ಮಾತ್ರ ಇಂತಹ ದುಷ್ಪರಿಣಾಮಗಳು ಕೊನೆಯಾಗಲು ಸಾಧ್ಯ ಎಂದು ಹೇಳಿದರು. ಅತ್ಯಾಚಾರಿಗಳು ಎಲ್ಲೋ ಹೊರಗಿನಿಂದ ಬರುವುದಿಲ್ಲ. ಇಂತಹ ದುಷ್ಕರ್ಮಿಗಳು ನಾವು ಕಂಡು ಹಿಡಿಯಲು ಸುಲಭವಾಗಲಿ ಹಣೆಗೆ ತಿಲಕ ಇಟ್ಟು ಓಡಾಡೋದಿಲ್ಲ ಎಂದು ಹೇಳಿದ್ದಾರೆ.


ನಾವು ಮಕ್ಕಳಿಗಾಗಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಸಮಾಜದಲ್ಲಿ ರಕ್ಷಣಾತ್ಮಕ ವಾತಾವರಣವನ್ನು ನಿರ್ಮಿಸಬೇಕಿದೆ. ನಾವು ಮಕ್ಕಳಿಗೆ ಕೌಟುಂಬಿಕ ವಾತಾವರಣವನ್ನು ಕಟ್ಟಿ ಕೊಡಬೇಕು. ಹೀಗಾಗಿ ನಾವೆಲ್ಲರೂ ಒಂದಾಗಿ ಸಮಾಜದಲ್ಲಿ ಇಂತಹ ಪಿಡುಗಳುಗಳನ್ನು ಹೋಗಾಲಿಡಿಸುವ ಮೂಲಕ ಒಳ್ಳೆಯ ವಾತಾವರಣವನ್ನು ನಿರ್ಮಿಸಬೇಕು ಎಂದು ಅವರು ಹೇಳಿದರು.


ಜನವರಿ 12ರಂದು ಅಲ್ವಾರ್​ನ ತಿಜಾರಾ ಮೇಲ್ವೇತುವೆ ಬಳಿಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ವಿಶೇಷ ಸಾಮರ್ಥ್ಯವುಳ್ಳ ಅಪ್ರಾಪ್ತ ಬಾಲಕಿಯೊಬ್ಬಳು ಪತ್ತೆಯಾಗಿದ್ದಾಳೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್​ ಮಾಹಿತಿ ನೀಡಿದ್ದಾರೆ.


“ರಾಜಸ್ಥಾನದ ಅಲ್ವಾರ್‌ನಲ್ಲಿರುವ ತಿಜಾರಾ ಮೇಲ್ಸೇತುವೆಯಲ್ಲಿ ವಿಶೇಷ ಸಾಮರ್ಥ್ಯವುಳ್ಳ ಅಪ್ರಾಪ್ತ ಬಾಲಕಿಯೊಬ್ಬಳು ಅತ್ಯಾಚಾರಕ್ಕೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಖಾಸಗಿ ಅಂಗಾಗಳಿಂದ ಸಾಕಷ್ಟು ರಕ್ತಸ್ರಾವವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಎಸ್ಪಿ ತೇಜಸ್ವಿನಿ ಮಾಹಿತಿ ನೀಡಿದ್ದಾರೆ.

Alwar rape case: ‘Monsters don’t wear tilak…’, Rajasthan minister’s shocking remark | WATCH

ಇದನ್ನು ಓದಿ : MakaraJyoti :ಶಬರಿ ಮಲೆಯಲ್ಲಿ ಮಕರ ಜ್ಯೋತಿ ದರ್ಶನ

ಇದನ್ನೂ ಓದಿ : Coronavirus pandemic Updates : ದೇಶದಲ್ಲಿ ಒಂದೇ ದಿನ 2.47 ಲಕ್ಷ ಹೊಸ ಕೋವಿಡ್​ ಪ್ರಕರಣ ವರದಿ

Comments are closed.