Inhuman incident in Bangalore: ಬೆಂಗಳೂರಿನಲ್ಲಿ ಅಮಾನವೀಯ ಘಟನೆ : ವ್ಯಕ್ತಿಯನ್ನು ರಸ್ತೆಯಲ್ಲಿ ಎಳೆದೊಯ್ದ ಬೈಕ್ ಸವಾರ

ಬೆಂಗಳೂರು: (Inhuman incident in Bangalore) ದೆಹಲಿಯಲ್ಲಿ ನಡೆದ ಹಿಡ್‌ ಆಂಡ್‌ ರನ್‌ ಕೇಸ್‌ ನಂತೆಯೇ ಬೆಂಗಳೂರಿನಲ್ಲಿ ಕೂಡ ನಡೆದಿದ್ದು, ಬೈಕ್‌ ಸವಾರ ಅಮಾನವೀಯ ವರ್ತನೆ ತೋರಿದ್ದಾನೆ. ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್‌ ಗೇಟ್‌ ಬಳಿಯಲ್ಲಿ ಘಟನೆ ನಡೆದಿದ್ದು, ಬೈಕ್‌ ಸವಾರ ವ್ಯಕ್ತಿಯೋರ್ವನನ್ನು ರಸ್ತೆಯಲ್ಲೇ ಎಳೆದೊಯ್ದಿದ್ದಾನೆ.

ಟಾಟಾ ಸೋಮೋ ವಾಹನಕ್ಕೆ ಸ್ಕೂಟರ್‌ ನಲ್ಲಿ ಬಂದ ವ್ಯಕ್ತಿಯೋರ್ವ ಅಡ್ಡ ಬಂದು ಢಿಕ್ಕಿ (Inhuman incident in Bangalore) ಹೊಡೆದಿದ್ದಾನೆ. ಅಡ್ಡ ಬಂದಿದ್ದಕ್ಕೆ ಟಾಟಾ ಸೋಮೋ ವಾಹನದ ಚಾಲಕ ಆರೋಪಿ ಬೈಕ್‌ ಸವಾರನನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿ ಬೈಕ್‌ ಸವಾರ ಅಲ್ಲಿಂದ ಪರಾರಿಯಾಗಲೂ ಪ್ರಯತ್ನಿಸಿದ್ದು, ವ್ಯಕ್ತಿ ಆತನನ್ನು ಹಿಡಿಯುವ ಪ್ರಯತ್ನದಲ್ಲಿ ಸ್ಕೂಟರ್‌ ಅನ್ನು ಹಿಡಿದಿದ್ದಾರೆ. ವ್ಯಕ್ತಿ ಸ್ಕೂಟರ್‌ ಅನ್ನು ಹಿಡಿದುಕೊಂಡಿರುವುದು ತಿಳಿದಿದ್ದರು ಕೂಡ ಆರೋಪಿ ಸ್ಕೂಟರ್‌ ಚಲಾಯಿಸಿಕೊಂಡು ಹೋಗಿದ್ದಾನೆ. ಸುಮಾರು ಒಂದು ಕಿ.ಮೀ. ವರೆಗೂ ವ್ಯಕ್ತಿಯನ್ನು ಎಳೆದೊಯ್ದಿದ್ದು, ಅಮಾನವೀಯ ವರ್ತನೆಯನ್ನು ತೋರಿದ್ದಾನೆ. ಟೋಲ್‌ ಗೇಟ್‌ ಬಳಿಯಲ್ಲಿ ನಿಂತಿದ್ದ ಆಟೋ ಚಾಲಕರೊಬ್ಬರು ಇದನ್ನು ನೋಡಿ ಶಾಕ್‌ ಆಗಿದ್ದು, ಬೈಕ್‌ ಸವಾರನನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದ್ದಾರೆ.

ಈ ವೇಳೆಯೂ ಆತ ನಿರ್ಲಕ್ಷ್ಯ ತೋರಿದ್ದು, ಪ್ರಶ್ನೆ ಮಾಡಿದವರ ಜೊತೆಯೂ ಕೂಡ ಆತ ಅಮಾನವೀಯವಾಗಿ ವರ್ತಸಿದ್ದಾನೆ ಅಲ್ಲದೇ ಎಲ್ಲರ ಆಕ್ರೋಶಕ್ಕೆ ಗುರಿಯಾಗಿದ್ದಾನೆ. ಮಾಹಿತಿಯ ಪ್ರಕಾರ, ಸಂತ್ರಸ್ತ ವ್ಯಕ್ತಿಯ ಕಾಲಿಗೆ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ. ಇದೀಗ ಆರೋಪಿ ಬೈಕ್‌ ಸವಾರನನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಆರೋಪಿ ಬೈಕ್‌ ಸವಾರ ವ್ಯಕ್ತಿಯನ್ನು ಅಮಾನುಷವಾಗಿ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ಮನಕಲುವಂತಿದ್ದು, ಎಂತವರಿಗೂ ಕೂಡ ಕಣ್ಣಲ್ಲಿ ನೀರು ತರಿಸುವಂತಿದೆ.

ಇದನ್ನೂ ಓದಿ : Attack on bakery owner: ಬೆಂಗಳೂರಿನ ಬೇಕರಿಯೊಂದರಲ್ಲಿ ಬೈಂದೂರು ಯುವಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

ಬೆಂಗಳೂರಿನಲ್ಲಿ ನಡೆದ ದಾರುಣ ಹಾಗೂ ಅಮಾನವೀಯ ಘಟನೆ ದೆಹಲಿಯ ಹಿಡ್‌ ಆಂಡ್‌ ರನ್‌ ಘಟನೆಯನ್ನು ಒಂದೊಮ್ಮೆ ನೆನಪಿಸಿದೆ. ದೆಹಲಿಯಲ್ಲೂ ಇದೇ ರೀತಿಯಾಗಿ ಕಾರಿನ ಚಕ್ರದಡಿಗೆ ಮಹಿಳೆ ಸಿಲುಕಿರುವುದು ತಿಳಿದಿದ್ದರೂ ಕೂಡ ಸುಮಾರು ಹನ್ನೆರಡು ಕಿಮೀ ವರೆಗೂ ಎಳೆದೊಯ್ದ ಘಟನೆ ನಡೆದಿತ್ತು. ದೆಹಲಿಯಲ್ಲಿ ಅಂದು ನಡೆದ ಘಟನೆ ಇಂದು ಬೆಂಗಳೂರಿನಲ್ಲೂ ನಡೆದಿದೆ.

Inhuman incident in Bangalore: Inhuman incident in Bangalore: Bike rider dragged a person on the road

Comments are closed.