ಭಾನುವಾರ, ಏಪ್ರಿಲ್ 27, 2025
HomeCrimeEXPLAINED : ತರಗುಪೇಟೆ ಸ್ಪೋಟದ ಕಾರಣ ಇನ್ನೂ ನಿಗೂಢ : ಸ್ಪೋಟ ಹುಟ್ಟು ಹಾಕಿದೆ ಹಲವು...

EXPLAINED : ತರಗುಪೇಟೆ ಸ್ಪೋಟದ ಕಾರಣ ಇನ್ನೂ ನಿಗೂಢ : ಸ್ಪೋಟ ಹುಟ್ಟು ಹಾಕಿದೆ ಹಲವು ಅನುಮಾನ !

- Advertisement -

ಬೆಂಗಳೂರು : ನ್ಯೂ ತರಗುಪೇಟೆಯಲ್ಲಿ ನಡೆದಿರುವ ನಿಗೂಢ ಸ್ಪೋಟ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅಕ್ರಮ ಸ್ಪೋಟ ಸಾಗಾಟದಿಂದಲೇ ಈ ದುರಂತ ಸಂಭವಿಸಿದ್ಯಾ ಅನ್ನೋ ಅನುಮಾನವೂ ವ್ಯಕ್ತವಾಗುತ್ತಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ಅಂತಿಮ ವರದಿಯತ್ತ ಎಲ್ಲರ ಚಿತ್ತ ನೆಟ್ಟಿದೆ.

ನಿನ್ನೆ ನ್ಯೂ ತರಗು ಪೇಟೆಯಲ್ಲಿನ ಗೋಡಾನ್‌ನಲ್ಲಿ ಸ್ಪೋಟ ಸಂಭವಿಸಿದೆ. ಮೇಲ್ನೋಟಕ್ಕೆ ಪಟಾಕಿ ಸ್ಪೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ದುರಂತ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸರು ಗೋಡಾನ್‌ ಮಾಲೀಕ ಗಣೇಶ್‌ ಬಾಬು ಎಂಬಾತನನ್ನು ಬಂಧಿಸಿ, ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಇನ್ನೊಂದೆಡೆಯಲ್ಲಿ ಅಕ್ರಮ ಗೋಡಾನ್‌ಗಳ ಮೇಲೆ ಪೊಲೀಸರ ತಂಡ ದಾಳಿಯನ್ನು ನಡೆಸಿದೆ.

Bangalore Crackers Blast 3 death, Crackers Shop Owner Babu Arrest

ಪಟಾಕಿ ಬಾಕ್ಸ್‌ ಸಾಗಿಸುವಾಗ ಸ್ಪೋಟ !

ಗೋಡಾನ್‌ನಲ್ಲಿ ಸಂಗ್ರಹ ಮಾಡಿಟ್ಟಿದ್ದ ಪಟಾಕಿಯನ್ನು ಮೃತ ಮನೋಹರ್‌ ಟ್ರಾಲಿಯ ಮೂಲಕ ಸಾಗಾಟ ಮಾಡುತ್ತಿದ್ದ. ಸುಮಾರು 28 ಬಾಕ್ಸ್‌ಗಳು ಗೋಡಾನ್‌ ಒಳಗೆ ಸಂಗ್ರಹ ಮಾಡಲಾಗಿತ್ತು. ಟ್ರಾಲಿಯಲ್ಲಿ ಸಾಗಾಟ ಮಾಡುವಾಗ ಎರಡು ಬಾಕ್ಸ್‌ ರೀಲ್‌ ಪಟಾಕಿ ಸ್ಪೋಟವಾಗಿತ್ತು. ಎರಡು ಬಾಕ್ಸ್‌ನಲ್ಲಿ ಸುಮಾರು 40 ಕೆ.ಜಿ ತೂಕದ ಪಟಾಕಿ ಇತ್ತು ಎನ್ನಲಾಗುತ್ತಿದೆ. ಇನ್ನು ಗೋಡಾನ್‌ನಲ್ಲಿ ಒಟ್ಟು 1500 ಕೆಜಿಯಷ್ಟು ಪಟಾಕಿ ಸಂಗ್ರಹವಿದ್ದು, ಎಲ್ಲಾ ಬಾಕ್ಸ್‌ಗಳು ಸ್ಪೋಟವಾಗಿದ್ರೆ ಬಾರೀ ದುರಂತವೇ ನಡೆಯುವ ಸಾಧ್ಯತೆಯಿತ್ತು ಎನ್ನಲಾಗುತ್ತಿದೆ.

ಬಿಬಿಎಂಪಿ ಅನುಮತಿ ಪಡೆಯುದೆ ಪಟಾಕಿ ಸಂಗ್ರಹ

ನ್ಯೂ ತರಗುಪೇಟೆಯಲ್ಲಿ ಗಣೇಶ್‌ ಬಾಬು ಎಂಬಾತ ಪಾತ್ರಕಾಳಿ ಅಮ್ಮ ಲಾರಿ ಸರ್ವಿಸ್‌ ಅಂಗಡಿಯನ್ನು ಮಾಡಿಕೊಂಡಿದ್ದ. ಲಾರಿಯಲ್ಲಿ ಬರುತ್ತಿದ್ದ ವಸ್ತುಗಳನ್ನು ಸಂಗ್ರಹಿಸಲು ಗೋಡಾನ್‌ ಮಾಡಿಟ್ಟುಕೊಂಡಿದ್ದ. ಆದರೆ ಅಧಿಕಾರಿಗಳು ಬಂದಾಗ ಟ್ರಾನ್ಸ್‌ಪೋರ್ಟ್‌ ಮಾಡುವುದಕ್ಕೆ ಇಟ್ಟಿದ್ದೇವೆ ಅಂತಾ ಹೇಳುತ್ತಿದ್ದ. ಆದರೆ ಗಣೇಶ್‌ ಬಾಬು ಅಕ್ರಮವಾಗಿ ಬಾರೀ ಪ್ರಮಾಣ ಪಟಾಕಿಯನ್ನು ಸಂಗ್ರಹ ಮಾಡಿಟ್ಟುಕೊಂಡಿದ್ದ ಅನ್ನೋದು ತನಿಖೆಯಿಂದ ಬಯಲಾಗಿದೆ. ಆದರೆ ಪಟಾಕಿ ಸಂಗ್ರಹ ಮಾಡಲು ಗೋಡಾನ್‌ ಮಾಲೀಕ ಗಣೇಶ್‌ ಬಾಬು ಯಾವುದೇ ಅನುಮತಿಯನ್ನೂ ಪಡೆದಿರಲಿಲ್ಲ ಅನ್ನೋದು ತನಿಖೆಯಿಂದ ಬಯಲಾಗಿದೆ.

Bangalore : New Tharagupet Blast 2 Death at spot visit FSL, Bomb Squad
PIC : NEWS NEXT

ಕೂದಲೆಳೆ ಅಂತರದಲ್ಲಿ ತಪ್ಪಿತ್ತು ಮಹಾಸ್ಪೋಟ !

ಗೋಡಾನ್‌ನಲ್ಲಿ ರೀಲ್‌ ಪಟಾಕಿಯ ಬಾಕ್ಸ್‌ ಸ್ಪೋಟಗೊಳ್ಳುತ್ತಲೇ ಪಟಾಕಿ ಸಾಗಾಟ ಮಾಡುತ್ತಿದ್ದ ಮನೋಹರ್‌ ಮೃತದೇಹದ ಇಪತ್ತು ಮೀಟರ್‌ ನಷ್ಟು ದೂರದವರೆಗೆ ಹಾರಿ ಹೋಗಿತ್ತು. ಅಲ್ಲದೇ ೭೦ ಮೀಟರ್‌ ದೂರದಲ್ಲಿರೋ ಮನೆಗಳಿಗೆ ಹಾನಿ ಉಂಟಾಗಿತ್ತು. ಅಕ್ಕಪಕ್ಕದಲ್ಲಿರುವ ಮನೆ ಹಾಗೂ ಅಂಗಡಿಗಳಿಗೆ ಹಾನಿಯುಂಟಾಗಿದೆ. ಒಂದೊಮ್ಮೆ ಗೋಡಾನ್‌ನಲ್ಲಿದ್ದ ಎಲ್ಲಾ ಪಟಾಕಿ ಬಾಕ್ಸ್‌ಗಳು ಸ್ಪೋಟಗೊಂಡಿದ್ರೆ ಇಡೀ ಏರಿಯಾಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿತ್ತು ಎಂದು ತಜ್ಞರು ಅಂದಾಜಿಸಿದ್ದಾರೆ.

100 ಕ್ಕೂ ಅಧಿಕ ಪೊಲೀಸರಿಗೆ ಗೋಡಾನ್‌ ಪರಿಶೀಲನೆ

ಪಟಾಕಿಯಿಂದಲೇ ದುರಂತ ಸಂಭವಿಸಿದೆ ಅನ್ನೋ ಹಿನ್ನೆಲೆಯಲ್ಲಿಯೇ ಇದೀಗ ಪೊಲೀಸರು ಗೋಡಾನ್‌ನಲ್ಲಿ ಪರಿಶೀಲನೆಯನ್ನು ಮುಂದುವರಿಸಿದ್ದಾರೆ. ಸ್ಪೋಟಗೊಂಡಿರುವ ಗೋಡಾನ್‌ ಮಾತ್ರವಲ್ಲದೇ ಚಾಮರಾಜಪೇಟೆಯ ನಾಲ್ಕು ಮುಖ್ಯರಸ್ತೆಗಳ, ಸರ್‌ ರೋಡ್‌ನಲ್ಲಿರುವ ಗೋಡಾನ್‌ಗಳಲ್ಲಿಯೂ ಪರಿಶೀಲನಾ ಕಾರ್ಯವನ್ನು ನಡೆಸುತ್ತಿದ್ದಾರೆ. ವಿವಿಪುರಂ, ಗಿರಿನಗರ, ಶಂಕರಪುರ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು ನೂರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

ಸ್ಪೋಟಕ್ಕೆ ಕಾರಣವಾಯ್ತಾ ಪೊಟಾಷಿಯಂ ನೈಟ್ರೇಟ್‌ ?

ಇನ್ನು ಪಟಾಕಿ ತಯಾರಿಕೆಗೆ ಸಾಮಾನ್ಯವಾಗಿ ಪೊಟಾಷಿಯಂ ನೈಟ್ರೇಟ್‌, ಸಲ್ಪರ್‌ ಡೈ ಆಕ್ಸೈಡ್‌, ಸೆಲ್ಯುಲೋಸ್‌ ನೈಟ್ರೇಟ್‌ ಬಳಕೆ ಮಾಡಲಾಗುತ್ತಿದೆ. ಆದರೆ ಪಟಾಕಿ ತಯಾರಿಕೆಯ ವೇಳೆಯಲ್ಲಿ ಕೆಮಿಕಲ್ಸ್‌ ಬಳಕೆಯನ್ನು ಸರಿಯಾಗಿ ಮಾಡದೇ ಇರುವುದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಪಟಾಕಿಯಲ್ಲಿ ಪೊಟಾಷಿಯಂ ನೈಟ್ರೇಟ್‌ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿರುವುದೇ ದುರಂತಕ್ಕೆ ಕಾರಣವೆನ್ನಲಾಗುತ್ತಿದೆ.

ಏನು ಹೇಳುತ್ತೆ ತಜ್ಞರ ಪ್ರಾಥಮಿಕ ತನಿಖಾ ವರದಿ ?

ಪಟಾಕಿ ಸ್ಪೋಟ ಸಂಭವಿಸಿರುವ ನ್ಯೂ ತರಗು ಪೇಟೆಗೆ ತಜ್ಞರ ತಂಡ ಭೇಟಿ ನೀಡಿದೆ. ದುರಂತದ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯ, ಶ್ವಾನದಳ, ಬಾಂಬ್‌ ನಿಷ್ಕ್ರೀಯ ದಳದ ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿದ್ದಾರೆ. ಸ್ಥಳದಲ್ಲಿ ಸಿಕ್ಕಿರುವ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದಾರೆ. ಸ್ಪೋಟಕ್ಕೆ ಪ್ರಮುಖವಾಗಿ ಪಟಾಕಿಯಲ್ಲಿ ಬಳಕೆ ಮಾಡಿರುವ ಕೆಮಿಕಲ್ಸ್‌ ಕಾರಣ ಅನ್ನೋದನ್ನು ತಜ್ಞರು ಪ್ರಾಥಮಿಕ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಪಟಾಕಿ ಸ್ಪೋಟದ ತೀವ್ರತೆಗಿಂತ ಹೆಚ್ಚಿನ ತೀವ್ರತೆ ಘಟನಾ ಸ್ಥಳದಲ್ಲಿ ಕಂಡು ಬಂದಿದೆ. ತಜ್ಞರು ಮೇಲ್ನೋಟಕ್ಕೆ ಇದೊಂದು ಪಟಾಕಿ ಕೆಮಿಕಲ್ಸ್‌ ಸ್ಪೋಟ ಎಂದು ಹೇಳುತ್ತಿದ್ದಾರೆ. ಆದರೆ ಅಂತಿಮ ವರದಿ ಬಂದ ನಂತರವಷ್ಟೇ ನಿಖರವಾದ ಕಾರಣ ತಿಳಿಯಲಿದೆ ಎಂದು ಎಫ್‌ಎಸ್‌ಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಪೋಟದ ಬಗ್ಗೆ ಮೂಡಿದೆ ಹಲವು ಅನುಮಾನ !

ಬೆಂಗಳೂರಿನ ನ್ಯೂ ತರಗು ಪೇಟೆಯಲ್ಲಿ ನಡೆದಿರುವ ಸ್ಪೋಟ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ ಪಟಾಕಿ ಸ್ಪೋಟವಾದಾಗ ಇಷ್ಟೊಂದು ದೊಡ್ಡಮಟ್ಟದ ಸ್ಪೋಟ ಸಂಭವಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲದೇ ತಮಿಳುನಾಡಿನಿಂದ ಪಟಾಕಿಯ ಜೊತೆಗೆ ಅಕ್ರಮವಾಗಿ ಸ್ಪೋಟಗಳ ಸಾಗಣಿಕೆಯ ಶಂಕೆ ವ್ಯಕ್ತವಾಗಿದೆ. ಸ್ಪೋಟ ನಡೆದ ವೇಳೆಯಲ್ಲಿ ಯಾವುದೇ ರೀತಿಯ ಪಟಾಕಿಯ ವಾಸನೆ ಕಂಡುಬಂದಿರಲಿಲ್ಲ. ಅಲ್ಲದೇ ಏಕಾಏಕಿ ದೊಡ್ಡಮಟ್ಟದಲ್ಲಿ ಸ್ಪೋಟದ ಸದ್ದು ಕೇಳಿಬಂದಿತ್ತು. ತರಗು ಪೇಟೆಯಲ್ಲಿನ ಗೋಡಾನ್‌ಗಳಲ್ಲಿ ಅಕ್ರಮವಾಗಿ ಸ್ಪೋಟಕಗಳನ್ನು ಇಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಇದೇ ಹಿನ್ನೆಲೆಯಲ್ಲಿಯೇ ಪರಿಶೀಲನಾ ಕಾರ್ಯ ನಡೆಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Tharagupet Blast :ನಿಗೂಢ ಸ್ಪೋಟ : FSL, ಬಾಂಬ್‌ ಸ್ಕ್ವಾಡ್ ಭೇಟಿ

ಇದನ್ನೂ ಓದಿ : ನ್ಯೂ ತರಗುಪೇಟೆ ಸ್ಪೋಟಕ್ಕೆ ಪಟಾಕಿಯೇ ಕಾರಣಾನಾ ? ಏನ್‌ ಹೇಳುತ್ತೆ ಪೊಲೀಸರ ತನಿಖೆ

( The cause of the Tharagupet blast is still a mystery: the explosion has raised many doubts )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular