Mysore Gang Rape : ಮೈಸೂರು ಗ್ಯಾಂಗ್‌ರೇಪ್‌ ಪ್ರಕರಣದ 7ನೇ ಆರೋಪಿ ಬಂಧನ

ಮೈಸೂರು : ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಕೊನೆಗೂ ಏಳನೇ ಆರೋಪಿಯನ್ನು ಬಂಧಿಸಿದ್ದಾರೆ.

ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿ ಬಡಾವಣೆಯಲ್ಲಿ ವಿದ್ಯಾರ್ಥಿನಿಯೋರ್ವಳ ಮೇಲೆ ಏಳು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ತಲೆ ಮರೆಯಿಸಿಕೊಂಡಿದ್ದ ಏಳನೇ ಆರೋಪಿಯನ್ನೂತಮಿಳುನಾಡಿ ನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ಮೈಸೂರು ಮಾತ್ರವಲ್ಲದೇ ದೇಶದಾದ್ಯಂತ ಬಾರೀ ಸುದ್ದಿ ಮಾಡಿತ್ತು. ಸಂತ್ರಸ್ತೆ ದೂರು, ಮಾಹಿತಿ ನೀಡದೇ ಇದ್ದರೂ ಕೂಡ ಪೊಲೀಸರು ಕೇವಲ ಬಸ್‌ ಟಿಕೆಟ್‌, ಮೊಬೈಲ್‌ ಲೊಕೇಷನ್‌ ಆಧರಿಸಿ ಆರು ಮಂದಿ ಆರೋಪಿಗಳನ್ನು ಅತೀ ಶೀಘ್ರದಲ್ಲಿಯೇ ಬಂಧಿಸಿದ್ದರು. ಇದೀಗ ಏಳನೇ ಆರೋಪಿಯನ್ನೂ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ : ಪೊಲೀಸರ ಮುಂದೆ ಸಂತ್ರಸ್ತೆಯ ಸ್ನೇಹಿತನ ಹೇಳಿದ್ದೇನು ಗೊತ್ತಾ ?

ಇದನ್ನೂ ಓದಿ : ಮೈಸೂರು ಸಾಮೂಹಿಕ ಅತ್ಯಾಚಾರ : ಆರೋಪಿಗಳ ಸುಳಿವು ಪತ್ತೆ ಹಚ್ಚಿದ ಪೊಲೀಸರು !

( Mysore Gangrape Case, 7th accused Arrest Tamil Nadu )

Comments are closed.