Kerala dowry death: ಕೇರಳ ವಿಸ್ಮಯ ಸಾವು ಪ್ರಕರಣ: ಪತಿಗೆ 10 ವರ್ಷ ಜೈಲು, 12.55 ಲಕ್ಷ ರೂ ದಂಡ

ಕೇರಳ : Kerala dowry death: ಕೇರಳದಲ್ಲಿ ವ್ಯಾಪಕ ಸಂಚಲನ ಮೂಡಿಸಿದ್ದ ವಿಸ್ಮಯ ಆತ್ಮಹತ್ಯೆ ಪ್ರಕರಣದದಲ್ಲಿ ಪತಿ ಹಾಗೂ ಆರೋಪಿ ಕಿರಣ್​ ಕುಮಾರ್​ರನ್ನು ಕೊಲ್ಲಂ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್​ ಕೋರ್ಟ್ನ ನ್ಯಾಯಾಧೀಶರು ದೋಷಿ ಎಂದು ತೀರ್ಪು ನೀಡಿದ್ದಾರೆ. ನಾಲ್ಕು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ವಿಸ್ಮಯ ಪತಿ ಕಿರಣ್​​ರನ್ನು ಸೋಮವಾರ ದೋಷಿ ಎಂದು ತೀರ್ಪು ನೀಡಿದ್ದ ನ್ಯಾಯಾಲಯವು ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.


2021ರ ಜೂನ್​ ತಿಂಗಳಲ್ಲಿ ತನ್ನ ಪತಿಯ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾಳ ಮೃತದೇಹ ಪತ್ತೆಯಾಗಿತ್ತು .ವಿಸ್ಮಯಾಳಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಪತಿ ಕಿರಣ್​ ಕುಮಾರ್​ರನ್ನು ಬಂಧಿಸಲಾಗಿತ್ತು. ಇದೀಗ ಪತಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 12.55 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.


ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿಯಲ್ಲಿ ಕಿರಣ್​ ಕುಮಾರ್​​ಗೆ ಐಪಿಎಸ್​ ಸೆಕ್ಷನ್​ 304, ಐಪಿಸಿ ಸೆಕ್ಷನ್​ 306 ಅಡಿಯಲ್ಲಿ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ದಂಡವನ್ನು ಪಾವತಿಸಲು ಅಪರಾಧಿಯು ವಿಫಲನಾದರೆ ಆತನಿಗೆ ದಂಡದ ಬದಲಾಗಿ ಇನ್ನೂ 6 ತಿಂಗಳುಗಳ ಕಾಲ ಸೆರೆವಾಸ ಮುಂದುವರಿಸಲಾಗುತ್ತದೆ.

ಕೌಟುಂಬಿಕ ದೌರ್ಜನ್ಯಕ್ಕಾಗಿ ಪತಿ ಕಿರಣ್‌ಕುಮಾರ್‌ಗೆ ಐಪಿಸಿ 498ಎ ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 0.5 ಲಕ್ಷ ರೂ. ದಂಡ ಪಾವತಿಸಲು ವಿಫಲವಾದರೆ ಇನ್ನೂ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.


ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಕಿರಣ್ ಕುಮಾರ್ ಗೆ ಆರು ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ಪಾವತಿಸಲು ವಿಫಲವಾದರೆ ಇನ್ನೂ 18 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ಪಾವತಿಸಲು ವಿಫಲವಾದರೆ ಇನ್ನೂ 15 ದಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ವಿಧಿಕೆಯಾಗಲಿದೆ.


ಅಪರಾಧಿಯು ಒಟ್ಟು 12.55 ಲಕ್ಷ ರೂಪಾಯಿ ದಂಡ ಪಾವತಿ ಮಾಡಬೇಕಿದ್ದು ಇದರಲ್ಲಿ ಎರಡು ಲಕ್ಷ ರೂಪಾಯಿ ವಿಸ್ಮಯಾ ಪೋಷಕರಿಗೆ ಪರಿಹಾರ ರೂಪದಲ್ಲಿ ನೀಡಲಾಗುತ್ತದೆ.
ನನ್ನ ತಂದೆಯು ಅನಾರೋಗ್ಯ ಪೀಡಿತರಾಗಿದ್ದಾರೆ. ಅಲ್ಲದೇ ನಾನು ಸಂಪೂರ್ಣ ಕುಟುಂಬಕ್ಕೆ ಏಕೈಕ ಅನ್ನದಾತ ಹಾಗೂ ನನ್ನ ವಯಸ್ಸು ಕೇವಲ 31. ಹೀಗಾಗಿ ನನ್ನ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಬೇಕು. ಅಲ್ಲದೇ ನಾನು ಯಾವುದೇ ಕ್ರಿಮಿನಲ್​ ಹಿನ್ನೆಲೆಯನ್ನು ಹೊಂದಿಲ್ಲ. ಈ ಹಿಂದೆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ನ್ಯಾಯಾಲಯದ ಎದುರು ಕಿರಣ್​ ಕುಮಾರ್​ ಹೇಳಿದ್ದಾನೆ .


ವರದಕ್ಷಿಣೆ ಎನ್ನುವುದು ಸಾಮಾಜಿಕ ಪಿಡುಗಾಗಿದೆ. ವರದಕ್ಷಿಣೆಗೆ ಪೀಡಿಸಿರುವ ವ್ಯಕ್ತಿಯು ಒಬ್ಬ ಸರ್ಕಾರಿ ನೌಕರನಾಗಿದ್ದಾನೆ. ವಿಸ್ಮಯಾ ಆತ್ಮಹತ್ಯೆಯು ಕೊಲೆಗೆ ಸಮನಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ನೀಡುವ ತೀರ್ಪು ಇಡೀ ಸಮಾಜಕ್ಕೆ ಮಾದರಿ ಎನಿಸಬೇಕು ಎಂದು ಪ್ರಾಸಿಕ್ಯೂಷನ್​ ವಾದಿಸಿತ್ತು.

ಇದನ್ನು ಓದಿ : Heavy Rain Yellow Alert : ತಮಿಳುನಾಡಲ್ಲಿ ಮೇಲ್ಮೈ ಸುಳಿಗಾಳಿ ಕರ್ನಾಟಕದಲ್ಲಿ ಬಾರೀ ಮಳೆ : ಉಡುಪಿ, ದ.ಕ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್‌

ಇದನ್ನೂ ಓದಿ : BY Vijayendra : ಬಿ.ವೈ.ವಿಜಯೇಂದ್ರ ಸಂಪುಟ ಸೇರ್ಪಡೆಗೆ ನೊರೆಂಟು ವಿಘ್ನ : ಬೇರೆಯದೇ ಲೆಕ್ಕಾಚಾರದಲ್ಲಿದೆ ಹೈಕಮಾಂಡ್

Kerala dowry death: Husband sentenced to 10 years in jail for driving wife to suicide

Comments are closed.