Indonesia Tsunami Alert : ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪ: 7.6 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

ಇಂಡೋನೇಷಿಯಾದಲ್ಲಿ ಮಂಗಳವಾರ 7.6 ತೀವ್ರತೆಯ ಭೂಕಂಪ (Indonesia Earthquake) ಸಂಭವಿಸಿದೆ. ಇಂಡೋನೇಷಿಯಾದ ಅಧಿಕಾರಿಗಳು ಭೂಕಂಪದ ಪ್ರಮಾಣವನ್ನು 7.5 ಎಂದು ಅಂದಾಜಿಸಿದ್ದು, ಇದು ಫ್ಲೋರ್ಸ್ ಸಮುದ್ರದ ಪೂರ್ವ ನುಸಾ ಟೆಂಗರಾ ಪ್ರದೇಶವನ್ನು ಅಪ್ಪಳಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಹವಾಮಾನ ಇಲಾಖೆಯು ಸುನಾಮಿ ಎಚ್ಚರಿಕೆಯನ್ನು (Indonesia Tsunami Alert) ನೀಡಿದೆ.

ಮತ್ತೊಂದೆಡೆ, ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರವು 7.7 ರ ತೀವ್ರತೆಯನ್ನು ಅಂದಾಜಿಸಿದೆ. ಹಾಗೂ ಭೂಕಂಪವನ್ನು 5 ಕಿಮೀ ಆಳದಲ್ಲಿ ಇರಬಹುದು ಎಂದು ಹೇಳಲಾಗಿದೆ. ಅಮೇರಿಕಾ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಇಂಡೋನೇಷ್ಯಾದಲ್ಲಿ ಭೂಕಂಪದ ಕೇಂದ್ರಬಿಂದುವಿನಿಂದ 1,000 ಕಿಮೀ ವ್ಯಾಪ್ತಿಯಲ್ಲಿರುವ ಕರಾವಳಿಯಲ್ಲಿ “ಅಪಾಯಕಾರಿ” ಸುನಾಮಿ ಅಲೆಗಳು ಸಾಧ್ಯ ಎಂದು ಹೇಳಿದೆ.

ಇದು ಸಮುದ್ರದೊಳಗಿನ ಭೂಕಂಪದ ಕಾರಣದಿಂದ ತೀರ ಪ್ರದೇಶಗಳಲ್ಲಿ ಸಾವುನೋವುಗಳ ಸಾಧ್ಯತೆಗಳು ಕಡಿಮೆ ಎಂದು ಊಹಿಸಿದ್ದಾರೆ. “ಈ ಪ್ರದೇಶದಲ್ಲಿ ಇತ್ತೀಚಿನ ಭೂಕಂಪಗಳು ಸುನಾಮಿಗಳು ಮತ್ತು ಭೂಕುಸಿತಗಳಂತಹ ಅಪಾಯಗಳನ್ನು ಉಂಟುಮಾಡಿದೆ. ಅದು ಅಪಾರ ನಷ್ಟ ಉಂಟಾಗಲು ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಇಂಡೋನೇಷ್ಯಾವು ಪೆಸಿಫಿಕ್ “ರಿಂಗ್ ಆಫ್ ಫೈರ್” ನಲ್ಲಿ ಅದರ ಸ್ಥಾನದಿಂದಾಗಿ ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತಲೇ ಇರುತ್ತವೆ. ಇದು ತೀವ್ರವಾದ ಭೂಕಂಪನ ಚಟುವಟಿಕೆಯ ಪ್ರದೇಶವಾಗಿದೆ.

ಇಂಡೋನೇಷ್ಯಾದಲ್ಲಿ ಇದು ಮೊದಲ ಬಾರಿಯೇನಲ್ಲ, ಈ ಹಿಂದೆಯೂ ಹಲವು ಬಾರಿ ಭೂಕಂಪಕ್ಕೆ ತುತ್ತಾಗಿ ಹಲವು ನಾಶ ನಷ್ಟಗಳನ್ನು ಅನುಭವಿಸಿದೆ. 2004 ರಲ್ಲಿ ಸುಮಾತ್ರಾ ಕರಾವಳಿಯಲ್ಲಿ ವಿನಾಶಕಾರಿ 9.1-ಪ್ರಮಾಣದ ಕಂಪನವು ಸಂಭವಿಸಿತ್ತು. ಮತ್ತು ನಂತರ ಸುನಾಮಿ ಸಹ ಉಂಟಾಗಿತ್ತು. ಇದು ಇಂಡೋನೇಷ್ಯಾದಲ್ಲಿ ಸುಮಾರು 170,000 ಸೇರಿದಂತೆ ಪ್ರದೇಶದಾದ್ಯಂತ 220,000 ಜನರನ್ನು ಕೊಂದಿತು. ದಾಖಲಾದ ಇತಿಹಾಸದಲ್ಲಿ ಇದು ಇನ್ನೂ ಮಾರಣಾಂತಿಕ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.

2018 ರಲ್ಲಿ, ಮತ್ತೊಂದು ಬಾರೀ ಭೂಕಂಪವು ಲೊಂಬೋಕ್ ದ್ವೀಪವನ್ನು ಬೆಚ್ಚಿಬೀಳಿಸಿತು. ಮುಂದಿನ ಎರಡು ವಾರಗಳಲ್ಲಿ ಹಲವಾರು ಕಂಪನಗಳು ಸಂಭವಿಸಿದ್ದವು. ಇಲ್ಲಿನ ದ್ವೀಪ ಮತ್ತು ನೆರೆಯ ಸುಂಬಾವಾದಲ್ಲಿ 550 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅದೇ ವರ್ಷದಲ್ಲಿ, ಮತ್ತೊಂದು 7.5-ತೀವ್ರತೆಯ ಭೂಕಂಪ ಮತ್ತು ನಂತರದ ಸುನಾಮಿ ಸುಲಾವೆಸಿ ದ್ವೀಪದ ಪಾಲುದಲ್ಲಿ 4,300 ಕ್ಕೂ ಹೆಚ್ಚು ಜನರು ಸತ್ತರು ಅಥವಾ ಕಾಣೆಯಾಗಿದ್ದರು. ಅಂದಹಾಗೆ ಈ ಬಾರಿಯೂ ಇಂಡೋನೇಷ್ಯಾ ದಲ್ಲಿ ಸುನಾಮಿ ಸಂಭವಿಸುವ ಆತಂಕ ಎದುರಾಗಿದೆ.

ಇದನ್ನೂ ಓದಿ: Corona Mask Test: ಇನ್ಮುಂದೆ ಮಾಸ್ಕ್ ಮೂಲಕವೂ ಕೋವಿಡ್ ಪತ್ತೆಹಚ್ಚಬಹುದು

( Indonesia Tsunami Alert, Earthquake 7.3 magnitude tsunami possible)

Comments are closed.