Modi praised Karnataka’s lake : ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಕರ್ನಾಟಕದ ಕೆರೆಯನ್ನು ಹೊಗಳಿದ ಪ್ರಧಾನಿ ಮೋದಿ

ಬಾಗಲಕೋಟೆ: Modi praised Karnataka’s lake : ಪ್ರಧಾನಿ‌ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಬಿಲ್ ಕೆರೂರು ಗ್ರಾಮದ ಬಗ್ಗೆ ಶ್ಲಾಘಿಸಿದ್ದಾರೆ. ಗ್ರಾಮದಲ್ಲಿನ ಸುಮಾರು ಒಂದು ಎಕರೆ ಇಪ್ಪತ್ಮೂರು ಗುಂಟೆಯ ಸೇದುಬಾವಿ ಹೆಸರಿನ ಕೆರೆಯ ಬಗ್ಗೆ ಬಣ್ಣನೆ ಮಾಡಿರುವ ನಮೋ ಬಿಲ್ ಕೆರೂರು ಗ್ರಾಮದಲ್ಲಿ ಸುಂದರ ಅಮೃತ ಸರೋವರ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬೆಟ್ಟದಿಂದ ಹರಿದು ಬರುವ ನೀರಿನಿಂದ ಜನರಿಗೆ ಬಹಳ ತೊಂದರೆಯಾಗುತ್ತಿತ್ತು. ರೈತರ ಬೆಳೆಗೂ ಸಾಕಷ್ಟು ಹಾನಿಯಾಗುತ್ತಿತ್ತು. ಆದ್ರೆ ಇದೀಗ ಎಲ್ಲ ನೀರನ್ನು ಕಾಲುವೆ ಮೂಲಕ ಒಂದೆಡೆ ಹರಿಸಿ ಕೆರೆಗೆ ತುಂಬಿಸಲಾಗಿದೆ‌. ಈ ಮೂಲಕ ಅಮೃತ ಸರೋವರ ಅಭಿಯಾನ ಯಶಸ್ವಿಯಾಗಿದೆ. ಇದು ಮುಂದಿನ ಪೀಳಿಗೆಗೆ ಬಹಳ ಅನುಕೂಲ ಆಗಲಿದೆ ಎಂದು ಮೋದಿ‌ ತಮ್ಮ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ.

ಈ ಸೇದುಬಾವಿ ಹೆಸರಿನ ಕೆರೆಯನ್ನು 20 ಲಕ್ಷ ವೆಚ್ಚದಲ್ಲಿ ಮನರೆಗಾ ಯೋಜನೆಯಡಿಯಲ್ಲಿ ಅಭಿವೃದ್ದಿ‌ ಮಾಡಲಾಗಿದೆ. ಕೆರೆಯಿಂದಾಗಿ ಸುಮಾರು 200 ಹೆಕ್ಟೇರ್ ಪ್ರದೇಶದ ಭೂಮಿಯಲ್ಲಿ ಅಂತರ್ಜಲ ಹೆಚ್ಚಳವಾಗುವ ಸಾಧ್ಯತೆಯಿದೆ. ಇನ್ನು ಈ ಕೆರೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿರುವ ವಿಡಿಯೋವನ್ನು ಬಿ.ಜೆ‌.ಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ‌ ವೈರಲ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಸಿಎಂ ಬೊಮ್ಮಾಯಿಗೆ ನಡೆದಾಡುವ ರಾಜದೇವರು ಎಂದು ಬಿರುದಾಂಕಿತ

ನಾಡದೊರೆ ಬಸವರಾಜ್ ಬೊಮ್ಮಾಯಿ‌ ಅವರಿಗೆ ಚಿತ್ರದುರ್ಗ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ ನಡೆದಾಡುವ ರಾಜದೇವರು ಎಂಬ ಬಿರುದಾಂಕಿತವನ್ನು ನೀಡಿದ್ದಾರೆ. ತುಮಕೂರಿನ ಗಾಜಿನ ಮನೆಯಲ್ಲಿ ನಡೆದ ಭೋವಿ ಸಮಾಜದ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ ಸಿಎಂ ಬೊಮ್ಮಾಯಿ ಅವರನ್ನು ಸ್ವಾಮೀಜಿ ಹಾಡಿ ಹೊಗಳಿದ್ದಾರೆ. ಬಸವರಾಜು ಬೊಮ್ಮಾಯಿ ಅವರ ಮಾತು,ಕೃತಿ‌, ನಡೆ ತಂದೆ ಇದ್ದಹಾಗೆ, ಆದ್ರೆ ಸಿಎಂ‌ ಅವರದ್ದು ತಾಯಿ ಹೃದಯ ಎಂದು ಸ್ವಾಮೀಜಿ ಕೊಂಡಾಡಿದ್ದಾರೆ.

ಬಸವರಾಜ್ ಬೊಮ್ಮಾಯಿ‌ ಅವರ ಬಳಿ ಇರುವ ಕೋಪ ತಂದೆಯದ್ದು. ತಾಯಿ ಹೃದಯ, ತಾಯಿ ವಾತ್ಸಲ್ಯ, ತಾಯಿಯ ಮಿಡಿತ ಎಲ್ಲವೂ ಬಸವರಾಜ ಬೊಮ್ಮಾಯಿಯಲ್ಲಿದೆ ಎಂದು ಸ್ವಾಮೀಜಿ ತಮ್ಮ ಭಾಷಣದಲ್ಲಿ ಹೇಳಿದರು. ತಾಯಿ ತನ್ನ ಮಗುವನ್ನು ನೋಡಿಕೊಂಡಂತೆ ನಮ್ಮ ರಾಜ್ಯದಲ್ಲಿ ಇಂಥಹ ಮುಖ್ಯಮಂತ್ರಿ ಸಿಕ್ಕಿದ್ದಾರೆ, ತಾಯಿ ಹೃದಯ ಇರುವ ಮುಖ್ಯಮಂತ್ರಿ ಸಿಕ್ಕಿದ್ದು ನಮ್ಮ ಹೆಮ್ಮೆ‌ ಎಂದರು‌.

ಬೇರೆ ಅಧಿಕಾರಿಗಳನ್ನು ತಮ್ಮ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಿಕೊಳ್ಳುವಂತೆ ಒತ್ತಡ ಇತ್ತು. ಆದ್ರೆ ಮಂಜುನಾಥ್ ಪ್ರಸಾದ್ ಅವರನ್ನು ತಮ್ಮ ಪ್ರದಾನ ಕಾರ್ಯದರ್ಶಿ ಆಗಿ ಮಾಡಿದ್ದು ದೊಡ್ಡ ಗೌರವ ಎಂದರು. ಅದರಲ್ಲೂ ಭೋವಿ ಜನಾಂಗಕಕ್ಕೆ ಅವರು‌ ನ್ಯಾಯ ಕೊಟ್ಟಿದ್ದಾರೆ‌ ಎಂದರು. ಮೈಕ್ರೋ ಮೈನಾರಿಟಿ ಮಡಿವಾಳರಿಗೂ ಹುಡುಕಿ ಸಹಾಯ ಮಾಡಿದ್ದಾರೆ. ಈ ಮೂಲಕ ಸಾಮಾಜಿಕ ನ್ಯಾಯ ಕೊಟ್ಟ ಸಿಎಂ ಬಸವರಾಜ್ ಬೊಮ್ಮಾಯಿ. ಅಂಬೇಡ್ಕರರ ಸಂವಿಧಾನದ ಆಶಯದಂತೆ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ ಮುಖ್ಯಮಂತ್ರಿ ಎಂದರೆ ಅದು‌ ಬಸವರಾಜು ಬೊಮ್ಮಾಯಿ ಎಂದು ಸಂತೋಷ ವ್ಯಕ್ತಪಡಿಸಿದರು‌.

ಲಿಂಗಾಯತ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾದರೆ ಬೇರೆ ಸಮುದಾದ ಜನ ಮಾತನಾಡಿಸೋದು ಕಷ್ಟ ಎಂದು ಹೇಳುತ್ತಾರೆ. ಆದರೆ ಸಿಎಂ ಬಸವರಾಜು ಅದಕ್ಕೆ ಅಪವಾದ ಎಂದರು. ಅವರ ಸಮುದಾಯಕ್ಕಿಂತ ಬೇರೆ ಸಮುದಾಯದವರು ಅವರಿಂದ ಹೆಚ್ಚಿಗೆ ಲಾಭ ಪಡೆದಿದ್ದಾರೆ. ನಮಗೆ ಸಾಮಾಜಿಕ ನ್ಯಾಯ ಕೊಡುವ ಮುಖ್ಯಮಂತ್ರಿ ಲಭಿಸಿದ್ದಾರೆ ಎಂದರು.

ಇದನ್ನು ಓದಿ : Minister BC Nagesh : ಶಿಕ್ಷಣ ಇಲಾಖೆ ಮೇಲೆ ಆಧಾರಹಿತ ಆರೋಪ ಸಹಿಸುವುದಿಲ್ಲ : ಸಚಿವ ಬಿ.ಸಿ ನಾಗೇಶ್​

ಇದನ್ನೂ ಓದಿ : Congress to elect new president : ಎಐಸಿಸಿ ಅಧ್ಯಕ್ಷರ ಆಯ್ಕೆಗೆ ದಿನಾಂಕ ಫಿಕ್ಸ್​ : ಅ.17ರಂದು ಚುನಾವಣೆ

Siddarameshwar Swamiji who gave the title to CM Basavaraja Bommai

Comments are closed.