ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಅಪಹರಣದ ನಾಟಕವಾಡಿದ ಬಾಲಕಿ

ಕೋಲ್ಕತ್ತಾ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು, ತನ್ನ ಪೋಷಕರಗೆ ಭಯ ಬಿದ್ದ 16 ವರ್ಷದ ಬಾಲಕಿಯೊಬ್ಬಳು ತನ್ನ ಆರು ವರ್ಷದ ಸಹೋದರಿಯೊಂದಿಗೆ ಪರಾರಿಯಾಗಿ ತಾನು ಅಪಹರಣಕ್ಕೆ (Kidnapping drama) ಒಳಗಾಗಿದ್ದೇನೆ ಎಂದು ನಾಟಕ ಮಾಡಿದ್ದಾಳೆ ಎಂದು ವರದಿ ಆಗಿದೆ.

ಬಾಲಕಿಯು ಕೇವಲ ಅಪಹರಣದ ನಾಟಕ ಮಾತ್ರ ಆಡದೇ, ತನ್ನ ತಂದೆಯಿಂದ ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಕೂಡ ಇಟ್ಟಿದ್ದಾಳೆ ಎನ್ನಲಾಗಿದೆ. ತನ್ನ ತಂದೆಗೆ ಈ ಸಂಬಂಧ ಎಸ್‌ಎಂಎಸ್‌ ಮಾಡಿದ್ದು, ಬಾಲಕಿಯು ನಿಮ್ಮ ಮಕ್ಕಳನ್ನು ಬಿಡುಗಡೆ ಮಾಡಬೇಕಿದ್ದರೆ ಒಂದು ಕೋಟಿ ರೂಪಾಯಿ ಒತ್ತೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಳು.

ಶುಕ್ರವಾರ ಪಶ್ಚಿಮ ಬಂಗಾಳ ಪ್ರೌಢಶಾಲೆ ಶಿಕ್ಷಣ ಮಂಡಳಿಯು ಎಸ್‌ಎಸ್‌ಎಲ್‌ಸಿ ಮಾಧ್ಯಮಿಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ದಕ್ಷಿಣ ಕೋಲ್ಕತ್ತಾದ ಬನ್ಸ್‌ಡ್ರೋನಿ ಪ್ರದೇಶದ ಆ ಬಾಲಕಿಯೂ ಪರೀಕ್ಷೆಗೆ ಹಾಜರಾಗಿದ್ದಳು. ಫಲಿತಾಂಶ ಪ್ರಕಟವಾದ ನಂತರ ಬಾಲಕಿಯು ತನ್‌ ಆರು ವರ್ಷದ ತಂಗಿಯೊಂದಿಗೆ ಫಲಿತಾಂಶದ ಅಂಕಪಟ್ಟಿಯನ್ನು ಪಡೆಯಲು ಸೈಬರ್‌ ಕೆಫೆಗೆ ಹೋಗಿದ್ದಳು. ಆಕೆ ತುಂಬಾ ಸಮಯವಾದರೂ ಮರಳಿ ಬಾರದೇ ಇದ್ದಾಗ, ಆಕೆಯ ಪೋಷಕರು ಆಕೆಗೆ ಕರೆ ಮಾಡಲು ಯತ್ನಿಸಿದ್ದಾರೆ. ಆದರೆ ಆಕೆ ಕರೆಯನ್ನು ಸ್ವೀಕರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸಿದಾಗ ನಾಪತ್ತೆಯಾಗಿದ್ದ ಬಾಲಕಿಯರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ. ನಂತರ ಶೋಧ ಕಾರ್ಯ ಕೈಗೊಂಡಿದ್ದ ಪೊಲೀಸರಿಗೆ ಸ್ಥಳೀಯ ಮೆಟ್ರೋ ನಿಲ್ದಾಣವೊಂದರ ಬಳಿ ಆಕೆಯ ಸ್ಕೂಟಿ ಪತ್ತೆಯಾಗಿದೆ. ಇದೇ ಸಂದರ್ಭದಲ್ಲಿ ಬಾಲಕಿಯ ಪೋಷಕರು ಎಸ್‌ಎಂಎಸ್‌ ಒಂದನ್ನು ಸ್ವೀಕರಿಸಿದ್ದು, ಆ ಸಂದೇಶದಲ್ಲಿ ನಿಮ್ಮ ಮಕ್ಕಳನ್ನು ಅಪಹರಣ ಮಾಡಲಾಗಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡಲು ಒಂದು ಕೋಟಿ ರೂಪಾಯಿ ಒತ್ತೆ ಹಣ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಅಲ್ಲದೇ ಅವರಗೆ ಹಣದೊಂದಿಗೆ ನೇಪಾಳ್‌ ಗಂಹ್‌ ಪ್ರದೇಶದ ಬಳಿ ಬರಲು ಸೂಚಿಸಲಾಗಿತ್ತು.

ತನಿಖೆಯ ಸಂದರ್ಭದಲ್ಲಿ ಪೊಲೀಸರು ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಸಹೋದರಿ ಸೀಲ್ಡಾ ರೈಲ್ವೆ ನಿಲ್ದಾಣದಿಂದ ಕೃಷ್ಣಾನಗರ ಸ್ಥಳೀಯ ರೈಲು ಹತ್ತಿರಬಹುದು ಎಂದು ಶಂಕಿಸಿದ್ದಾರೆ. ನಂತರ ಸರಕಾರಿ ರೈಲ್ವೆ ಪೊಲೀಸರು ಹಾಗೂ ಕೃಷ್ಣಾನಗರ ಜಿಲ್ಲಾ ಪೊಲೀಸರೊಂದಿಗೆ ಸಂವಹನ ನಡೆಸಿದ ಕೋಲ್ಕತ್ತಾ ಪೊಲೀಸರು, ನಾಪತ್ತೆಉಆಗಿರುವ ಬಾಲಕಿಯರ ಪತ್ತೆಗಾಗಿ ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೂಡಲೇ, ಕೃಷ್ಣಾನಗರ ಜಿಲ್ಲಾ ಪೊಲೀಸರು ಇಬ್ಬರು ಬಾಲಕಿಯರನ್ನು ನದಿಯಾ ಜಿಲ್ಲೆಯ ಡಿವೈನ್‌ ನರ್ಸಿಂಗ್‌ ಹೋಮ್‌ ಬಳಿ ಪತ್ತೆ ಹಚ್ಚಿದ್ದಾರೆ. ಇದರ ಬೆನ್ನಿಗೆ ಆ ಇಬ್ರು ಬಾಲಕಿಯರನ್ನು ರಕ್ಷಿಸಿರುವ ಪೊಲೀಸರು, ಅವರಿಬ್ಬರನ್ನೂ ಪೊಲೀಸ್‌ ಠಾಣೆಗೆ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ : ಪೊಲೀಸ್ ಪೇದೆ ಹಾಗೂ ಪತ್ನಿ ಮೇಲೆ ಗುಂಡಿನ ದಾಳಿ : ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : ಸರಕಾರಿ ಕಛೇರಿಯ ನೆಲಮಾಳಿಗೆಯಲ್ಲಿ 2.31 ಕೋಟಿ ರೂ., 1 ಕೆಜಿ ಚಿನ್ನದ ಗಟ್ಟಿ ಪತ್ತೆ

“ವಿಚಾರಣೆಯ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ 10ನೇ ತರಗತಿ ಪರೀಕ್ಷೆಯಲಲಿ ಶೇ. 31 ಅಂಕ ಗಳಿಸಿರುವುದು ಕಂಡು ಬಂದಿತು. ಇದರಿಂದ ಬಾಲಕಿಯ ತೀವ್ರ ಬೇಸರಗೊಂಡಿದ್ದಳು. ಆಕೆ ತನ್ನ ಪೋಷಕರಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಭರವಸೆ ನೀಡಿದ್ದರೂ, ಅದರಲ್ಲಿ ವಿಫಲಳಾಗಿದ್ದಳು” ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ.

Kidnapping drama: A girl who staged a kidnapping drama for getting low marks in the exam

Comments are closed.