ಮಡಿಕೇರಿ : ತನ್ನ ಕುಟುಂಬದ 6 ಮಂದಿಯ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಎರವರ ಮಂಜ ಎಂಬವನೇ ತನ್ನ ಕುಟುಂಬಸ್ಥರ ಮೇಲೆ ಬೆಂಕಿ ಹಚ್ಚಿದ ಆರೋಪಿ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯ ವಸಂತ(ಚಿಟ್ಟಿಯ್ಯಪ್ಪ) ಎಂಬವರ ಲೈನ್ ಮನೆಯಲ್ಲಿ ಎರವರ ಮಂಜು ವಾಸವಿದ್ದ, ಮನೆಯಲ್ಲಿ ಕುಟುಂಬದ ಐದಾರು ಮಂದಿ ಸದಸ್ಯರು ಬಂದು ತಂಗಿದ್ದರು. ಬೆಳಗ್ಗಿನ ಜಾವ ಸುಮಾರು 2 ಗಂಟೆ ವೇಳೆಯಲ್ಲಿ ಮಂಜು ಅವರ ತಂದೆ ಎರವರ ಬೋಜ ಪಾನಮತ್ತನಾಗಿ ಮನೆಯ ಹೊರ ಬಂದು ಎಲ್ಲಾ ಬಾಗಿಲು, ಕಿಟಕಿಗಳನ್ನು ಮುಚ್ಚಿದ್ದಾನೆ.
ಮನೆಯ ಮೇಲೇರಿ ಹಂಚು ತೆಗೆದು ಕುಟುಂಬದ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸೀತಾ (45 ವರ್ಷ ), ಬೇಬಿ (40 ವರ್ಷ), ಪ್ರಾರ್ಥನಾ(6 ವರ್ಷ ) ಮೂವರು ಸಜೀವ ದಹನ ವಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಾವನ್ನಪ್ಪಿದ್ದಾರೆ.
ಈ ಕುರಿತು ಪೊನ್ನಂಪೇಟೆ ಠಾಣೆಯ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.