ಸಿಎಂ ಸರಿಯಾಗಿ ಆಡಳಿತ ನಡೆಸುತ್ತಿರೋದು ನಿಜವಾದ್ರೆ ಈಶ್ವರಪ್ಪನವರನ್ನು ವಜಾ ಮಾಡಲಿ…! ಸರ್ಕಾರಕ್ಕೆ ಡಿಕೆಶಿ ಸವಾಲು..!!

ರಾಜ್ಯ ಸರ್ಕಾರದಲ್ಲಿ ಸೃಷ್ಟಿಯಾಗಿರುವ ಆತಂರಿಕ ಭಿನ್ನಮತ ಕಾಂಗ್ರೆಸ್ ಟೀಕೆಗೆ ವಿಷಯ ಸಿಕ್ಕಂತಾಗಿದ್ದು, ಸಿಎಂ ಬಿಎಸ್ವೈ ಸೂಕ್ತವಾಗಿ ಆಡಳಿತ ನಡೆಸುತ್ತಿರುವುದು ನಿಜವಾದರೇ ಹಿರಿಯ ಸಚಿವರ ಈಶ್ವರಪ್ಪ   ಅವರನ್ನು ಸಚಿವ ಸ್ಥಾನದಿಂದ ಹಾಗೂ ಸಂಪುಟದಿಂದ ವಜಾ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಹಾಗೂ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ಆಡಳಿತದಲ್ಲಿರುವ ಸರ್ಕಾರ, ಸಿಎಂ ಕಾರ್ಯವೈಖರಿ ಬಗ್ಗೆ ನೇರವಾಗಿ ಅಸಮಧಾನ ವ್ಯಕ್ತಪಡಿಸಿ ಅವರದ್ದೇ ಸರ್ಕಾರದ ಸಚಿವರು ರಾಜ್ಯಪಾಲರಿಗೆ ಪತ್ರ ಬರೆದ ಉದಾಹರಣೆಯೇ ಇಲ್ಲ. ಇಂತಹದೊಂದು ಆರೋಪವನ್ನು, ಪತ್ರವನ್ನು ಹಿರಿಯ ಸಚಿವ ಈಶ್ವರಪ್ಪ ಬರೆದಿರೋದರು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿರೋದು ಮತ್ತು ಆಡಳಿತ ಯಂತ್ರ ಕುಸಿದಿರುವುದಕ್ಕೆ ಉದಾಹರಣೆ.

ಒಂದೊಮ್ಮೆ ಈಶ್ವರಪ್ಪನವರ ಆರೋಪ ಸುಳ್ಳು, ಸರ್ಕಾರ ಹಾಗೂ ಸಿಎಂ ನಿಯಮಬದ್ಧವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದಾದರೇ ಬಿಎಸ್ವೈ ಈಶ್ವರಪ್ಪನವರನ್ನು ಸಂಪುಟದಿಂದ ವಜಾಮಾಡುವ ಮೂಲಕ ಇದನ್ನು ನಿರೂಪಿಸಲಿ ಎಂದು ಸವಾಲು ಹಾಕಿದ್ದಾರೆ. ಒಂದೊಮ್ಮೆ ಈಶ್ವರಪ್ಪನವರನ್ನು ವಜಾ ಮಾಡಲಿಲ್ಲ ಎಂದಾದರೇ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಡಿಕೆಶಿ ಆಗ್ರಹಿಸಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ತೆರಳುವ ವೇಳೆ ವಿಮಾನನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.  ಸಿಎಂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಣಕ್ಕಾಗಿ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ.

ಇದೆಲ್ಲ ಸುಳ್ಳು ಎಂದಾದರೇ ಸಿಎಂ ಈಶ್ವರಪ್ಪನವರನ್ನು ವಜಾ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಉಪಚುನಾವಣೆ ಹಾಗೂ ಪಂಚ ರಾಜ್ಯ ಚುನಾವಣೆ ಎದುರಿನಲ್ಲಿ ಕರ್ನಾಟಕದ ಹಿರಿಯ ಸಚಿವ ಈಶ್ವರಪ್ಪ ಸಿಎಂ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದು,  ಬಿಜೆಪಿಗೆ ತೀವ್ರ ಮುಜುಗರ ತಂದಿದ್ದು, ವಿಪಕ್ಷಗಳಿಗೆ ಟೀಕಾಸ್ತ್ರ ಸಿಕ್ಕಂತಾಗಿದೆ. ಕಾಂಗ್ರೆಸ್ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದೆ.

Comments are closed.