Nandini Milk Price Hike : ನಂದಿನಿ ಹಾಲು, ಮೊಸರು ದರ 2 ರೂ ಹೆಚ್ಚಳ : ನಾಳೆಯಿಂದಲೇ ಪರಿಷ್ಕೃತ ದರ

ಬೆಂಗಳೂರು : (Nandini Milk Price Hike) ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೆಎಂಎಫ್ ನಂದಿನಿ ಹಾಲು ಹಾಗೂ ಮೊಸರಿನ ದರದಲ್ಲಿ ಪ್ರತಿ ಲೀಟರ್ ಗೆ 2ರೂಪಾಯಿ ಹೆಚ್ಚಳ ಮಾಡಲು ಮುಂದಾಗಿದೆ. ನಾಳೆಯಿಂದಲೆ ಹೊಸ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (KMF ) ಪರಿಷ್ಕೃತ ದರಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲಾ ಮಾದರಿಯ ಹಾಲಿನ ದರದಲ್ಲಿಯೂ ಏರಿಕೆಯಾಗಲಿದೆ.

Nandini Milk Price Hike : ಪರಿಷ್ಕೃತ ಹಾಲಿನ ದರ

ಹಾಲು 37 ರೂ. ರಿಂದ 39 ರೂ.ಗೆ ಏರಿಕೆ
ಹೋಮೋಜಿನೈಸ್ಡ್ ಟೋನ್ಡ್ ಹಾಲು 38 ರೂ. ಯಿಂದ 40 ರೂ.ಗೆ ಏರಿಕೆ
ಹೋಮೋಜಿನೈಸ್ಡ್ ಹಸುವಿನ ಹಾಲು 42 ರೂ. ನಿಂದ 44 ರೂ.ಗೆ ಏರಿಕೆ
ಸ್ಪೆಷಲ್ ಹಾಲು 43 ರೂ. ನಿಂದ 45 ರೂ.ಗೆ ಏರಿಕೆ
ಶುಭಂ ಹಾಲು 43 ರೂ.ನಿಂದ 45 ರೂ.ಗೆ ಏರಿಕೆ
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರೂ. ನಿಂದ 46 ರೂ. ಗೆ ಏರಿಕೆ
ಸಮೃದ್ಧಿ ಹಾಲು 48 ರೂ. ನಿಂದ 50 ರೂ.ಗೆ ಏರಿಕೆ
ಸಂತೃಪ್ತಿ ಹಾಲು (ಹೋಮೋಜಿನೈಸ್ಡ್) 50 ರೂ.ನಿಂದ 52 ರೂ.ಗೆ ಏರಿಕೆ
ಡಬಲ್ ಟೋನ್ಡ್ ಹಾಲು 36 ರೂ.ನಿಂದ 38 ರೂ.ಗೆ ಏರಿಕೆ
ಮೊಸರು 45 ರೂ.ನಿಂದ 47 ರೂ.ಗೆ ಏರಿಕೆಯಾಗಲಿದೆ.

ಕೆಲ ದಿನಗಳ ಹಿಂದೆ ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸುವುದಾಗಿ ಘೋಷಿಸಿತ್ತು. ಇದಕ್ಕೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಬ್ರೇಕ್ ಹಾಕಿದ್ದು, ಇದಾದ ಬಳಿಕ ಸಭೆ ನಡೆಸಿ ಯಾವುದೇ ಸಮಸ್ಯೆಯಾಗದಂತೆ ಬೆಲೆ ಏರಿಕೆ ಮಾಡುವಂತೆ ಸೂಚಿಸಿ

ದರು. ಇದೀಗ ಬೊಮ್ಮಾಯಿ ದರ ಏರಿಕೆ ನಿರ್ಧಾರವನ್ನು ಕೆಎಮ್‌ಎಫ್‌ಗೆ ಬಿಟ್ಟಿದ್ದಾರೆ. ಸಿಎಂ ಸಲಹೆಯಂತೆ ಇಂದು ಹಾಲು ಮತ್ತು ಮೊಸರಿನ ದರ ಲೀಟರ್‌ಗೆ 2 ರೂಪಾಯಿ ಏರಿಕೆಯಾಗಿದೆ.

ಈ ನಿಟ್ಟಿನಲ್ಲಿ ಇಂದು ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಕುರಿತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಹಲವು ಅಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಹಾಲು ಮತ್ತು ಮೊಸರು ದರವನ್ನು ಲೀಟರ್‌ಗೆ 2 ರೂ. ರೈತರಿಗೆ ಬೆಲೆ ಏರಿಕೆಯ ಸೌಲಭ್ಯ ಸಿಗಲಿದೆ ಎಂದು ತಿಳಿಸಿದ್ದಾರೆ. ಇದರಿಂದ ಹಾಲು, ಮೊಸರಿನ ದರ ಏರಿಕೆಯಾಗಿದೆ

ಇದನ್ನೂ ಓದಿ : Poisonous Mushroom : ಬೆಳ್ತಂಗಡಿ ಬಳಿ ವಿಷಪೂರಿತ ಅಣಬೆ ಸೇವಿಸಿ : ಅಪ್ಪ – ಮಗನ ಸಾವು

ಇದನ್ನೂ ಓದಿ : Department of Tourism : ಟ್ಯಾಕ್ಸಿ ಖರೀದಿಗೆ ಸರಕಾರದಿಂದ 2 ಲಕ್ಷ ಸಹಾಯಧನ : ಸೌಲಭ್ಯ ಪಡೆಯಲು ಏನು ಮಾಡಬೇಕು

Nandini Milk Price Hike Nandini curd price increase by Rs 2 Revised price from tomorrow itself

Comments are closed.