Maravante Beach : ಮರವಂತೆ ಬೀಚ್‌ನಲ್ಲಿ ಯುವಕ ನೀರುಪಾಲು : ಪ್ರವಾಸಿಗರ ನಿರ್ಲಕ್ಷ್ಯಕ್ಕೆ ಬೀಳುತ್ತಿಲ್ಲ ಬ್ರೇಕ್‌

ಕುಂದಾಪುರ : Maravante Beach : ಸಮುದ್ರಕ್ಕೆ ಸ್ನಾನಕ್ಕೆಂದು ಇಳಿದಿದ್ದ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಕರಾವಳಿಯ ಪ್ರಸಿದ್ದ ಮರವಂತೆ ಬೀಚ್‌ನಲ್ಲಿ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವಂಡಿ ಗ್ರಾಮದ ನಿವಾಸಿ ಪೀರ್‌ ನದಾಫ್‌ ಎಂಬಾತನೇ ಸಮುದ್ರ ಪಾಲಾಗಿರುವ ಯುವಕ. ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

kundapura Young man splashes water at Maravante beach
ಮರವಂತೆ ಬೀಚ್‌ನಲ್ಲಿ ನೀರುಪಾಲಾದ ಯುವಕನಿಗಾಗಿ ಹುಡುಕಾಟ

ಟ್ಯಾಂಕರ್ ನಲ್ಲಿ ಬಂದಿದ್ದ ಗದಗ ಮೂಲದ ಮೂವರು ಯುವಕರ ಪೈಕಿ ಇಬ್ಬರು ಸಮುದ್ರಕ್ಕೆ ಇಳಿದಿದ್ದಾರೆ. ಈ ವೇಳೆಯಲ್ಲಿ ಪೀರ್‌ ನದಾಫ್‌ ನೀರು ಪಾಲಾಗಿದ್ದಾನೆ. ಕೂಡಲೇ ಸ್ಥಳಕ್ಕೆ ಬೀಚ್‌ ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿಯ ಸಮುದ್ರ ದಡದಲ್ಲಿಯೇ ನಿಂತು ಶೋಧ ಕಾರ್ಯವನ್ನು ನಡೆಸಿದ್ದಾರೆ. ಆದರೆ ಯುವಕ ಸುಳಿವು ದೊರೆಯೇ ಇಲ್ಲ. ಪೀರ್‌ ನಧಾಪ್‌ ರಕ್ಷಣೆಗಾಗಿ ಅಂಗಲಾಚಿದ್ದಾನೆ. ಆದರೆ ಸಮುದ್ರದ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ ಯಾರಿಗೂ ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ.

kundapura Young man splashes water at Maravante beach
ನೀರುಪಾಲಾದ ಯುವಕ ಪ್ರಯಾಣಿಸಿದ್ದ ಟ್ಯಾಂಕರ್‌ ಚಿತ್ರ : ವಿಜಯ್‌ ವಡ್ಡರ್ಸೆ

ಪ್ರವಾಸಿಗರ ನಿರ್ಲಕ್ಷ್ಯದಿಂದಲೇ ಪ್ರಾಣ ಹಾನಿ :
ಮರವಂತೆ ಬೀಚ್‌ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಮಳೆಗಾಲದ ಆರಂಭದಿಂದಲೂ ಬೀಚ್‌ನಲ್ಲಿ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕಾ ಫಲಕಗಳನ್ನು ಅಳವಡಿಸಿದ್ದರು ಕೂಡ ಪ್ರವಾಸಿಗರು ಸೆಲ್ಪಿ ಹುಚ್ಚಿಗಾಗಿ ಸಮುದ್ರದ ಬಂಡೆಗಳ ಮೇಲೆ ನಿಂತು ಪೋಟೋ ಕ್ಲಿಕಿಸುತ್ತಿದ್ದಾರೆ. ಇನ್ನೂ ಹಲವರು ಸೂಚನೆಗಳನ್ನು ನಿರ್ಲಕ್ಷಿಸಿ ಸಮುದ್ರಕ್ಕೆ ಸ್ನಾನಕ್ಕೆಂದು ಇಳಿಯುತ್ತಿದ್ದಾರೆ. ಇದರಿಂದಲೇ ಪ್ರವಾಸಿರ ಪ್ರಾಣಕ್ಕೆ ಕುತ್ತು ಬರುತ್ತಿದೆ.

kundapura Young man splashes water at Maravante beach
ಮರವಂತೆ ಬೀಚ್‌ನಲ್ಲಿ ಯುವಕನಿಗಾಗಿ ಶೋಧ ಕಾರ್ಯ

ಕಳೆದ ಒಂದು ತಿಂಗಳ ಹಿಂದೆಯೇ ಈ News Next ಕುರಿತು ವರದಿಯನ್ನು ಪ್ರಕಟಿಸಿತ್ತು. ಆದರೂ ಕೂಡ ಹೆಚ್ಚುವರಿ ರಕ್ಷಣಾ ಸಿಬ್ಬಂದಿಗಳನ್ನು ಜಿಲ್ಲಾಡಳಿತ ನಿಯೋಜನೆ ಮಾಡಿಲ್ಲ. ಅಲ್ಲದೇ ಪ್ರವಾಸಿಗರು ಜೀವದ ಜೊತೆಗೆ ಚೆಲ್ಲಾಟವಾಡುವುದಕ್ಕೆ ಬ್ರೇಕ್‌ ಹಾಕಿಲ್ಲ. ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರು ಅಪಾಯದ ಅರಿವಿಲ್ಲದೇ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಇದರಿಂದಾಗಿಯೇ ಪ್ರಾಣಕ್ಕೆ ಕುತ್ತು ಬರುತ್ತಿದೆ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ : Bihar News‌ : ತನ್ನ ಪ್ರಿಯಕರನನ್ನು ಭೇಟಿಯಾಗಲು ಇಡೀ ಹಳ್ಳಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪ್ರಿಯತಮೆ

ಇದನ್ನೂ ಓದಿ : Maravanthe Beach : ಕಡಲ್ಕೊರೆತದ ಭೀತಿಯಲ್ಲಿ ಮರವಂತೆ ಬೀಚ್‌ : ಆತಂಕದಲ್ಲಿ ಪ್ರವಾಸಿಗರು

Comments are closed.