Live in Relationship Murder Case‌ : ಲಿವ್‌ ಇನ್‌ ರಿಲೇಷನ್‌ ಶಿಪ್‌ : ಪ್ರಿಯತಮೆಯನ್ನು ಚಾಕುನಿಂದ ಇರಿದು ಕೊಂದ ಪ್ರಿಯಕರ

ನವದೆಹಲಿ : ಪ್ರೀತಿಸಿದ ಹುಡುಗಿಯೊಂದಿಗೆ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿ (Live in Relationship Murder Case‌) ಇರುವ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯನ್ನು ಚಾಕುನಿಂದ ಇರಿದು ಹತ್ಯೆಗೈದಿದ್ದಾನೆ. ಪಶ್ಚಿಮ ದಿಲ್ಲಿಯ ತಿಲಕ್‌ ನಗರದಲ್ಲಿ 35 ವರ್ಷದ ಮಹಿಳೆ ಆಕೆಯ ಪ್ರಿಯತಮನಿಂದಲೇ ಚಾಕುವಿನಿಂದ ಇರಿತಕೊಳ್ಳಗಾಗಿ ಸಾವನ್ನಪ್ಪಿದ್ದಾಳೆ.

ಮೃತ ಮಹಿಳೆ 15 ವರ್ಷಗಳಿಂದ ತನ್ನ 16 ವರ್ಷದ ಮಗಳೊಂದಿಗೆ ಗಣೇಶ್ ನಗರದಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ರೇಖಾರಾಣಿ ಎಂದು ಗುರುತಿಸಲಾಗಿದೆ. ಮೃತ ರೇಖಾ ರಾಣಿ ಚಾಕುನಿಂದ ಇರಿತಕ್ಕೆ ಒಳಗಾಗಿರುವ ಆಕೆಯ ಶವವನ್ನು ಆಕೆಯ ಮನೆಯಲ್ಲಿಯೇ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಲಿವ್‌ ಇನ್‌ ರಿಲೇಷನ್‌ ಶಿಪ್‌ ವ್ಯಕ್ತಿ 45ವರ್ಷದ ಮನ್‌ಪ್ರೀತ್ ಸಿಂಗ್‌ನ್ನು ಕೊಲೆ ಮಾಡಿದ್ದಕ್ಕಾಗಿ ಪಂಜಾಬ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವಾಗಲೂ ಹಣಕ್ಕಾಗಿ ತನ್ನ ತಾಯಿ ಮತ್ತು ವ್ಯಕ್ತಿ ಜಗಳವಾಡುತ್ತಿದ್ದರು ಎಂದು ಮಗಳು ಪೊಲೀಸರಿಗೆ ತಿಳಿಸಿದ್ದಾಳೆ. ತಿಲಕ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಧ್ಯಾಹ್ನ 12.38 ಕ್ಕೆ ಕರೆ ಬಂದಿದ್ದು, ತಂಡವನ್ನು ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಗಿಲಿಗೆ ಬೀಗ ಹಾಕಿರುವುದು ಕಂಡು ಬಂದ ತಂಡ ಅದನ್ನು ತೆರೆದಾಗ ರೇಖಾರಾಣಿ ಶವ ಪತ್ತೆಯಾಗಿದೆ. ಸಂತ್ರಸ್ತೆಯ ಮಗಳು ತಾನು ಅಸ್ವಸ್ಥನಾಗಿದ್ದರಿಂದ ಔಷಧಿ ಸೇವಿಸಿದ ನಂತರ ತನ್ನ ಕೋಣೆಯಲ್ಲಿ ಮಲಗಿದ್ದು, ತಾಯಿಯ ಕೊಲೆಯಾಗಿರುವುದು ತಿಳಿಯದೇ ಇನ್ನೊಂದು ಕೋಣೆಯಲ್ಲಿ ಇರಬಹುದು ಎಂದು ಭಾವಿಸಿ ಸಿಂಗ್‌ ಬಳಿ ತಾಯಿಯ ಬಗ್ಗೆ ವಿಚಾರಿಸುತ್ತಾಳೆ.

ಆಗ ಸಿಂಗ್‌ ರೇಖಾ ಹೊರಗೆ ಹೋಗಿದ್ದಾಳೆ ಎಂದು ಹೇಳುತ್ತಾನೆ. ಹಾಗೆ ಸಂತ್ರಸ್ತೆಯ ಮಗಳಿಗೆ ಮನೆಯಿಂದ ಹೊರಗೆ ಹೋಗುವುದಕ್ಕೆ ಹೇಳುತ್ತಾನೆ. ರೇಖಾಳ ಮಗಳು ಹೊರಗೆ ಹೋದ ಮೇಲೆ ಸಿಂಗ್‌ ಮನೆಯನ್ನು ಲಾಕ್‌ ಮಾಡಿ ಹೊರಟು ಹೋಗಿದ್ದಾನೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ಮಹಿಳೆಗೆ ಹರಿತವಾದ ಆಯುಧದಿಂದ ಎರಡು ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಒಂದು ಆಕೆಯ ದವಡೆ, ಕುತ್ತಿಗೆಗೆ ಮತ್ತು ಇನ್ನೊಂದು ಕೈಗೆ ಎಂದು ಪೊಲೀಸ್ ಉಪ ಆಯುಕ್ತ (ಪಶ್ಚಿಮ) ಘನಶ್ಯಾಮ್ ಬನ್ಸಾಲ್ ಹೇಳಿದ್ದಾರೆ.

ಸಂತ್ರಸ್ತೆಯ ಮಗಳ ದೂರಿನ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷ್ಯಾಧಾರಗಳು ಕಣ್ಮರೆಯಾಗುವುದು ಅಥವಾ ಅಪರಾಧಿಗಳಿಗೆ ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು. 2015 ರಲ್ಲಿ ಸಿಂಗ್ ರಾಣಿಯನ್ನು ಭೇಟಿಯಾದರು ಮತ್ತು ಅವರು ಗಣೇಶ್ ನಗರದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Student Rape: ವಿದ್ಯಾರ್ಥಿನಿಯನ್ನು ಅಪಹರಿಸಿ ಯುವಕರಿಂದ ಅತ್ಯಾಚಾರ: ಆರೋಪಿಗಳಿಗಾಗಿ ಹುಡುಕಾಟ

ಇದನ್ನೂ ಓದಿ : Fake suicide drama: ಅಪ್ಪ- ಅಮ್ಮನ ಸಾವಿಗೆ ಸೇಡು ತೀರಿಸಿಕೊಳ್ಳಲು ಮಗಳು ಮಾಡಿದ್ದು ಖತರ್ನಾಕ್ ಪ್ಲ್ಯಾನ್: ಈಕೆಯ ಮಾಸ್ಟರ್ ಮೈಂಡ್ ಹಿಂದಿತ್ತು ಹಿಂದಿ ಸೀರಿಯಲ್..!

ಇದನ್ನೂ ಓದಿ : Mine collapse: ಛತ್ತೀಸ್‌ಗಢ ಗಣಿ ಕುಸಿತ: 7 ಸಾವು

“ಕ್ರಮೇಣ, ರೇಖಾ ಸಿಂಗ್ ಬಗ್ಗೆ ಅಸುರಕ್ಷಿತ ಭಾವನೆ ಹೊಂದಿದ್ದಳು. ಅವಳು ಅವನ ಕುಟುಂಬ ಸದಸ್ಯರನ್ನು ಸಂಪರ್ಕಿಸದಂತೆ ಅವನನ್ನು ತಡೆದಳು. ಸಿಂಗ್ ಹತಾಶೆಗೊಂಡು ಅವಳನ್ನು ಕೊಲ್ಲಲು ಯೋಜಿಸಿದನು” ಎಂದು ವಿಶೇಷ ಸಿಪಿ (ಅಪರಾಧ) ರವೀಂದ್ರ ಯಾದವ್ ಹೇಳಿದರು. ಶುಕ್ರವಾರ ಪಟಿಯಾಲಾದಿಂದ ಬಂಧಿಸಲ್ಪಟ್ಟಿರುವ ಸಿಂಗ್, ಸುಲಿಗೆಗಾಗಿ ಅಪಹರಣ ಮತ್ತು ಕೊಲೆ ಯತ್ನ ಸೇರಿದಂತೆ ಆರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದರು.

Live in Relationship Murder Case : Lover who stabbed his beloved to death

Comments are closed.