Attempt to suicide: ಹೋಮ್‌ ವರ್ಕ್‌ ಮಾಡದಿದ್ದಕ್ಕೆ ಶಿಕ್ಷಕರಿಂದ ಕಿರುಕುಳ: ಶಾಲಾ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ, ಸ್ಥಿತಿ ಗಂಭೀರ

ಅಲಿಗಢ: (Attempt to suicide) ತರಗತಿ ಶಿಕ್ಷಕರಿಂದ ಶಿಕ್ಷೆಗೆ ಗುರಿಯಾದ 8ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದಿದ್ದು, ಆತನ ಸೀತಿ ಗಂಭೀರವಾಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢದ ಶಾಲೆಯೊಂದರಲ್ಲಿ ನಡೆದಿದೆ. ಘಟನೆ ನಡೆದ ಕೂಡಲೇ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

ಶಿಕ್ಷಕನು ವಿದ್ಯಾರ್ಥಿಗೆ ಹೋಮ್‌ ವರ್ಕ್‌ ಮಾಡಿಬಂದಿಲ್ಲ ಎಂದು ಶಿಕ್ಷೆ ನೀಡಲಾಗಿದ್ದು, ಅದರಿಂದ ಭಯಗೊಂಡಿದ್ದ ವಿದ್ಯಾರ್ಥಿ ಕಟ್ಟಡದಿಂದ ಜಿಗಿದಿದ್ದಾನೆ (Attempt to suicide). ವರದಿಗಳ ಪ್ರಕಾರ, ಮನೆಗೆ ನೀಡಿದ ಕೆಲಸಗಳನ್ನು ವಿದ್ಯಾರ್ಥಿ ಪೂರ್ಣಗೊಳಿಸಿಲ್ಲ, ಬದಲಾಗಿ ಮೊಬೈಲ್‌ ನಲ್ಲಿ ರೀಲ್ಸ್‌ ಮಾಡಿದ್ದ. ಇದನ್ನು ತಿಳಿದ ಶಿಕ್ಷಕರು ಆತನಿಗೆ ಶಿಕ್ಷೆ ನೀಡಿದ್ದರು ಎನ್ನಲಾಗಿದೆ.

ಸಿಸಿಟಿವಿ ದೃಶ್ಯಗಳಲ್ಲಿ ವಿದ್ಯಾರ್ಥಿ ಶಿಕ್ಷೆಗೊಳಗಾಗಿ ನೆಲದ ಮೇಲೆ ಕುಳಿತಿರುವುದು ಕಂಡುಬಂದಿದ್ದು, ನಂತರದಲ್ಲಿ ತರಗತಿಯಿಂದ ಎದ್ದು ಹೋಗಿ ಶಾಲೆಯ ಕಟ್ಟಡದಿಂದ ಜಿಗಿದಿದ್ದಾನೆ. ಆತ ಕಟ್ಟಡದಿಂದ ಜಿಗಿಯುವುದನ್ನು ಕಂಡ ಆತನ ಸ್ನೇಹಿತರು ಶಿಕ್ಷಕರಿಗೆ ಘಟನೆಯನ್ನು ತಿಳಿಸಿದ್ದು, ಎಲ್ಲರೂ ಆತನನ್ನು ರಕ್ಷಿಸಲು ಧಾವಿಸಿದ್ದಾರೆ.

ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದರಿಂದ ಗಂಭೀರವಾಗಿದೆ. ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶಾಲಾ ನಿರ್ದೇಶಕರು ತಿಳಿಸಿದ್ದಾರೆ. ಈ ನಡುವೆ ಸ್ಪೋರ್ಟ್ಸ್ ಟ್ರಯಲ್ಸ್ ನಲ್ಲಿ ಭಾಗವಹಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕ ಹಾಗೂ ಕೆಲ ಹಿರಿಯ ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ : Student Rape: ವಿದ್ಯಾರ್ಥಿನಿಯನ್ನು ಅಪಹರಿಸಿ ಯುವಕರಿಂದ ಅತ್ಯಾಚಾರ: ಆರೋಪಿಗಳಿಗಾಗಿ ಹುಡುಕಾಟ

ಇದನ್ನೂ ಓದಿ : Fake suicide drama: ಅಪ್ಪ- ಅಮ್ಮನ ಸಾವಿಗೆ ಸೇಡು ತೀರಿಸಿಕೊಳ್ಳಲು ಮಗಳು ಮಾಡಿದ್ದು ಖತರ್ನಾಕ್ ಪ್ಲ್ಯಾನ್: ಈಕೆಯ ಮಾಸ್ಟರ್ ಮೈಂಡ್ ಹಿಂದಿತ್ತು ಹಿಂದಿ ಸೀರಿಯಲ್..!

(Attempt to suicide) An 8th class student who was punished by the class teacher jumped from the second floor of the school building and his death was serious in a school in Aligarh, Uttar Pradesh. Immediately after the incident, the student was admitted to the hospital and his condition is critical.

Comments are closed.