Madurai govt bus accident: ಮರಕ್ಕೆ ಢಿಕ್ಕಿ ಹೊಡೆದ ಸರ್ಕಾರಿ ಬಸ್: 10ಕ್ಕೂ ಹೆಚ್ಚು ಮಂದಿಗೆ ಗಾಯ

ಮಧುರೈ: (Madurai govt bus accident) ಸರ್ಕಾರಿ ಬಸ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಧುರೈ ಬಳಿಯಲ್ಲಿ ನಡೆದಿದೆ. ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದ್ದು, ಬ್ರೇಕ್ ಕೆಲಸ ಮಾಡದ ಕಾರಣ ಪಕ್ಕದಲ್ಲಿದ್ದ ಮರಕ್ಕೆ ಬಸ್‌ ಢಿಕ್ಕಿ ಹೊಡೆದಿದೆ.

ಮಧುರೈ ಪೆರಿಯಾರ್ ಬಸ್ ನಿಲ್ದಾಣದಿಂದ ವಾಡಿಪಟ್ಟಿ ಬಳಿಯ ರಾಮರಾಜಪುರಂ ಗ್ರಾಮಕ್ಕೆ ಐಷಾರಾಮಿ ಬಸ್ ಹೊರಟಿತ್ತು. ಮಧುರೈ ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ದುವರಿಮಾನ್ ಬಳಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದ್ದು, ಬ್ರೇಕ್ ಕೆಲಸ ಮಾಡದ ಕಾರಣ ಪಕ್ಕದಲ್ಲಿದ್ದ ಮರಕ್ಕೆ ಬಸ್‌ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್‌ ನಲ್ಲಿದ್ದ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ನಾಗಮಲೈ ಪುದುಕೊಟ್ಟೈ ಪೊಲೀಸರು ಅಪಘಾತದ ಸ್ಥಳಕ್ಕೆ ಧಾವಿಸಿದ್ದು, ಎಲ್ಲಾ ಗಾಯಾಳುಗಳನ್ನು ಆಂಬ್ಯುಲೆನ್ಸ್‌ ಮೂಲಕ ಮಧುರೈ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಪಘಾತಕ್ಕೊಳಗಾದ ಬಸ್‌ ಐಷಾರಾಮಿ ಬಸ್ ಆಗಿದ್ದು, ಅಪಘಾತದ ವೇಳೆ ಹೆಚ್ಚಿನ ಪ್ರಯಾಣಿಕರಿಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

ಸದ್ಯ ಘಟನೆಯ ಕುರಿತು ನಾಗಮಲೈ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Assam gang rape: ಕೈ ಕಾಲುಗಳನ್ನು ಕಟ್ಟಿಹಾಕಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಅರೆಸ್ಟ್

ಕೈ ಕಾಲುಗಳನ್ನು ಕಟ್ಟಿಹಾಕಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಅರೆಸ್ಟ್

ಅಸ್ಸಾಂ: ಅಪ್ರಾಪ್ತ ಬಾಲಕಿಯ ಕೈ ಕಾಲುಗಳನ್ನು ಕಟ್ಟಿಹಾಕಿ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಅಸ್ಸಾಂನ ದಿಬ್ರುಗಢದಲ್ಲಿ ನಡೆದಿದೆ. ಇದೀಗ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಕಾಮುಕರನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ಭಾಯಿಜಾನ್ ಅಲಿ ಮತ್ತು ಸಫರ್ ಅಲಿ ಎಂದು ಗುರುತಿಸಲಾಗಿದೆ

ಇದನ್ನೂ ಓದಿ : Sexual assault on girl: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಕರಾಟೆ ತರಬೇತುದಾರನಿಗೆ 10 ವರ್ಷ ಜೈಲು ಶಿಕ್ಷೆ

ಭಾಯಿಜಾನ್ ಅಲಿ ಮತ್ತು ಸಫರ್ ಅಲಿ ಎನ್ನುವ ಇಬ್ಬರು ಕಾಮುಕರು ಹನ್ನೆರಡು ವರ್ಷದ ಬಾಲಕಿಯ ಕೈಕಾಲುಗಳನ್ನು ಕಟ್ಟಿಹಾಕಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮೂರು ದಿನಗಳಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಅಥಾಬರಿ ಚಹಾ ತೋಟದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ದಿಬ್ರುಗಢ ಎಸ್ಪಿ ಶ್ವೇತಾಂಕ್ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : Turkey Building collapse: ಭೂಕಂಪನಕ್ಕೆ ಕುಸಿದ 34 ಕಟ್ಟಡ: 10 ಮಂದಿ ಸಾವು

Madurai govt bus accident: Government bus hit a tree: More than 10 injured

Comments are closed.