ವಾಣಿ ಜಯರಾಂ ಸಾವು ಪ್ರಕರಣ : ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟಕ ವಿಚಾರ ಬಹಿರಂಗ

ಭಾರತೀಯ ಸಂಗೀತ ಲೋಕದ ಹೆಸರಾಂತ ಹಿನ್ನಲೆ ಗಾಯಕಿ ವಾಣಿ ಜಯರಾಂ ಶನಿವಾರ (ಫೆಬ್ರವರಿ 04) ಸಾವನ್ನಪ್ಪಿದ್ದರು. ಒಂಟಿಯಾಗಿಯೇ ವಾಸವಿದ್ದ ಗಾಯಕಿಯ ಸಾವಿನ ಬಗ್ಗೆ ಅನುಮಾನಗಳು (Vani Jayaram death case) ಮೂಡಿದ್ದವು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಗಾಯಕಿ ವಾಣಿ ಜಯರಾಂ ಸಾವಿನ ಬಗ್ಗೆ ಅನುಮಾನ ಮೂಡಲು ಹಲವು ಕಾರಣಗಳಿತ್ತು. ವಾಣಿ ಜಯರಾಂ ತಲೆಗೆ ಪೆಟ್ಟಾಗಿತ್ತು. ಅಲ್ಲದೆ ಗಾಯಕಿ ಬಿದ್ದಿದ್ದ ಸ್ಥಳ ರಕ್ತದ ಕಲೆಗಳು ಬಿದ್ದಿದ್ದವು. ಹೀಗಾಗಿ ಪೋಲಿಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು.

ಈ ಹಿನ್ನೆಲೆಯಲ್ಲಿ ಗಾಯಕಿ ವಾನಿ ಜಯರಾಂ ಅವರ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ನಿನ್ನೆ( ಫೆಬ್ರವರಿ 05) ಗಾಯಕಿ ಮರಣೋತ್ತರ ವರದಿ ಬಂದಿದ್ದು, ಇದರಲ್ಲಿ ಗಾಯಕಿ ಸಾವಿನ ಬಗ್ಗೆ ಯಾವುದೇ ರೀತಿಯ ಅನುಮಾನಗಳು ಇಲ್ಲ ಎಂದು ಹೇಳಲಾಗಿದೆ. ಇನ್ನೊಂದು ಕಡೆ ಅಕ್ಕ ಪಕ್ಕದ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲನೆ ಮಾಡಿದ್ದರು. ಅದರಲ್ಲೂ ಕೂಡ ಯಾರೂ ವಾಣಿ ಜಯರಾಂ ಅವರ ಮನೆಗೆ ಹೋಗಿದ್ದಾಗಲಿ ಅಥವಾ ಅವರ ಮನೆಯಿಂದ ಬಂದಿದ್ದಾಗಲಿ ಕಂಡು ಬಂದಿಲ್ಲ. ಹೀಗಾಗಿ ಗಾಯಕಿಯ ಸಾವನ್ನು ಸಹಜ ಸಾವು ಎಂಬ ತೀರ್ಮಾನಕ್ಕೆ ಪೊಲೀಸ್‌ ಅಧಿಕಾರಿಗಳು ಬಂದಿದ್ದಾರೆ.

ವಾಣಿ ಜಯರಾಂ ಅವರು ಮಲಗಿದ್ದ ಮಂಚದ ಪಕ್ಕದಲ್ಲಿ ಮರದ ಟೇಬಲ್ ಇತ್ತು. ಈ ಟೇಬಲ್ ಮೇಲೆ ವಾಣಿ ಜಯರಾಂ ಬಿದ್ದಿದ್ದ ಪರಿಣಾಮ ತಲೆಗೆ ಬಲವಾದ ಏಟಾಗಿದೆ. ಕೂಡಲೇ ಅವರಿಗೆ ರಕ್ತಸ್ರಾವವಾಗಿದೆ. ಗಾಯಕಿಯ ಸಾವು ಹೃದಯಾಘಾತದಿಂದ ಆಗಿದ್ದು, ಬೇರೆ ಯಾವುದೇ ಅನುಮಾನವಿಲ್ಲ ಎಂದು ಪೊಲೀಸರು ಗಾಯಕಿ ಸಾವಿನ ಬಗ್ಗೆ ಎದ್ದಿದ್ದ ಅನುಮಾನಗಳನ್ನು ಬಗೆಹರಿಸಿದ್ದಾರೆ.

ವಾಣಿ ಜಯರಾಂ ಚೆನ್ನೈನ ನುಂಗಂಬಾಕ್ಕಂನ ಹಡ್ಡೋಸ್ ರಸ್ತೆಯಲ್ಲಿರುವ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಹೀಗಾಗಿ ಅವರ ಸಹಾಯಕ್ಕೆಂದು ಪ್ರತಿದಿನ ಮನೆ ಕೆಲಸ ಮಾಡಲು ಬರುತ್ತಿದ್ದರು.ಎಂದಿನಂತೆ ಬೆಳಗ್ಗೆ ಮನೆಕೆಲಸದವರು ಎಷ್ಟು ಪ್ರಯತ್ನ ಪಟ್ಟರೂ ಗಾಯಕಿ ಬಾಗಿಲು ತೆರೆದಿರಲಿಲ್ಲ. ಆಗಲೇ ಪಕ್ಕದ ಮನೆತವರಿಗೆ ತಿಳಿಸಿ, ಆ ಬಳಿಕ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆ ಕರೆದುಕೊಂಡು ಹೋಗಿದ್ದರು.

ಇದನ್ನೂ ಓದಿ : B.K.S. Varma death: ಖ್ಯಾತ ಚಿತ್ರ ಕಲಾವಿದ ಬಿ.ಕೆ.ಎಸ್‌. ವರ್ಮಾ ಹೃದಯಾಘಾತದಿಂದ ನಿಧನ

ಇದನ್ನೂ ಓದಿ : “ಕನ್ನಡತಿ” ಮುಗೀತು : ಶೀಘ್ರದಲ್ಲಿ ನಿಮ್ಮನ್ನು ರಂಜಿಸಲು ಬರುತ್ತೇನೆ ಎಂದ ‘ಕನ್ನಡ ಟೀಚರ್’

ಇದನ್ನೂ ಓದಿ : “ಘೋಷ್ಟ್” ಶಿವಣ್ಣನ ಜೊತೆ ವಿಜಯ್ ಸೇತುಪತಿ? ಆ ಭೇಟಿಯ ಸೀಕ್ರೆಟ್ ರಿವೀಲ್ ಆಯ್ತು!

ವಾಣಿ ಜಯರಾಂ ತಮಿಳಿನ ವಲ್ಲೂರಿನಲ್ಲಿ ಜನಿಸಿದ್ದರು. ತಾಯಿ ಕೂಡ ಶಾಸ್ತ್ರೀಯ ಸಂಗೀತ ಕಲಿತಿದ್ದರಿಂದ, ವಾಣಿ ಜಯರಾಂ ಕೂಡ ಗಾಯನದ ಕಡೆಗೆ ವಾಲಿದ್ದರು. ತಮಿಳಿನಲ್ಲಿ ಅತೀ ಹೆಚ್ಚ ಹಾಡುಗಳನ್ನು ಹಾಡಿದ್ದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಓಡಿಯಾ, ಗುಜರಾತಿ, ಬಂಗಾಳಿ ಸೇರಿದಂತೆ ಭಾರತೀಯ ನಾನಾ ಭಾಷೆಗಳ ಸಿನಿಮಾಗಳಿಗೆ ಇವರು ಧ್ವನಿ ನೀಡಿದ್ದರು. ಕನ್ನಡದಲ್ಲಿ 50 ಹೆಚ್ಚು ಸಿನಿಮಾಗಳಿಗೆ ಹಾಡಿದ್ದು, ಅನುಭವ, ಶಿವ ಮೆಚ್ಚಿದ ಕಣ್ಣಪ್ಪ, ರಣರಂಗ, ಮಲಯ ಮಾರುತ, ಒಲವಿನ ಉಡುಗೊರೆಯಂತಹ ಸಿನಿಮಾದ ಹಾಡುಗಳಿಗೆ ಹಾಡಿದ್ದಾರೆ.

Vani Jayaram death case: Explosive issue revealed in postmortem examination

Comments are closed.