B.K.S. Varma death: ಖ್ಯಾತ ಚಿತ್ರ ಕಲಾವಿದ ಬಿ.ಕೆ.ಎಸ್‌. ವರ್ಮಾ ಹೃದಯಾಘಾತದಿಂದ ನಿಧನ

ಬೆಂಗಳೂರು: (B.K.S. Varma death) ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದಿದ್ದ ಖ್ಯಾತ ಚಿತ್ರ ಕಲಾವಿದ ಬಿ.ಕೆ.ಎಸ್.ವರ್ಮಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಎರಡು ದಿನಗಳಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತ(B.K.S. Varma death)ಪಟ್ಟಿದ್ದಾರೆ.

ತಮ್ಮ ಆರನೇ ವಯಸ್ಸಿನಲ್ಲಿಯೇ ತಮ್ಮನ್ನು ತಾನು ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿರುವ ಇವರ ಕಲೆಯು ದೇಶ ವಿದೇಶಗಳಲ್ಲಿ ಪ್ರದರ್ಶನಗಳನ್ನು ಕಂಡಿವೆ. ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದಿದ್ದ ಇವರು ತೈಲವರ್ಣದಲ್ಲಿ ಚಿತ್ರಗಳನ್ನು ಬಿಡಿಸುತ್ತಿದ್ದರು. ಕನ್ನಡ ತಾಯಿ ಭುವನೇಶ್ವರಿ, ಭಾರತಮಾತೆ, ಪೂಜೆಯಲ್ಲಿ ಮೈಮರೆತ ರಾಘವೇಂದ್ರ ಸ್ವಾಮಿ, ಈಶ್ವರ ಕುಟುಂಬ ಕಲಾಕೃತಿಗಳು ವಿಶ್ವಮಟ್ಟದಲ್ಲಿ ಜನಪ್ರಿಯವಾಗಿದ್ದಲ್ಲದೇ ಮನೆಮನೆಗಳಲ್ಲೂ ಪೂಜೆಗೊಳ್ಳುತ್ತಿದ್ದವು. ಇದಲ್ಲದೇ 1986 ರಲ್ಲಿ ವರ್ಮಾ (B.K.S. Varma death) ಅವರ ಮೊದಲ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ ನಡೆದಿತ್ತು.

ಹಿಂದಿನ ದಿನಗಳಲ್ಲಿ ಬ್ಲೇಡಿನಿಂದ, ಉಗುರಿನಿಂದ, ಎಂಬಾಸಿಂಗ್‌, ಥ್ರೇಡ್‌ ಪೇಂಟಿಂಗ್‌ಗಳನ್ನು ಮಾಡಿ ಹಣಗಳಿಸುತ್ತಿದ್ದು, ಕೈಗಳನ್ನೇ ಬಳಸಿ ಸುಂದರವಾದ ಚಿತ್ತಾರಗಳನ್ನು ಮೂಡಿಸುತ್ತಿದ್ದರು. ಇವರು (B.K.S. Varma death) ಚಿತ್ರಗಳನ್ನು ಬಿಡಿಸುವ ಪರಿ ನೋಡುಗರ ಕಣ್ಣಿಗೆ ಆನಂದ ತರಿಸುವಂತಿರುತ್ತಿತ್ತು. ಇವರ ಓಂಗಣೇಶ ಚಿತ್ತಾರ ಜನರಲ್ಲಿ ಆಸಕ್ತಿ ಕೆರಳಿಸಿದ್ದು, ಸೂಪರ್‌ ಸ್ಟಾರ್‌ ರಜನಿಕಾಂತ್‌, ಮೇರುನಟ ಡಾ. ರಾಜ್‌ ಕುಮಾರ್‌, ಅಂತರಾಷ್ಟ್ರೀಯ ಸುಪ್ರಸಿದ್ದ ಕಲಾವಿದ ಡಾ. ರೋರಿಕ್‌ ಹಾಗೂ ದೇವಿಕಾರಣಿ ದಂಪತಿಗಳು ಇವರು ಎರಡೇ ನಿಮಿಷಗಳಲ್ಲಿ ಬಿಡಿಸುವ ಸುಂದರವಾದ ಚಿತ್ರಕಲೆಯನ್ನು ಮೆಚ್ಚಿ ಸ್ವಾಗತಿಸಿದ ಕಲಾವಿದರಲ್ಲಿ ಮುಖ್ಯರು.

ಒಂದೊಮ್ಮೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜಾ ರವಿವರ್ಮಾ ಅವರ ಪೇಂಟಿಂಗ್‌ ಗಳನ್ನು ವೀಕ್ಷಿಸುತ್ತಿದ್ದು, ಇದರಿಂದ ತನ್ಮಯರಾಗಿ ಚಿತ್ರಕಲೆಯೇ ಸ್ಪೂರ್ತಿಯಾಗಿ ತಾನೂ ರವಿವರ್ಮನಂತೆ ಪರಿಪೂರ್ಣ ಕಲಾವಿದನಾಗಬೇಕೆಂಬ ಆಸೆಯಿಂದ ತಮ್ಮ ಹೆಸರನ್ನು ಬಿ.ಕೆ. ಶ್ರೀನಿವಾಸ್‌ ವರ್ಮಾ (B.K.S. Varma death) ಎಂದು ಬದಲಿಸಿಕೊಂಡರು. ಇದರ ನಂತರ ಅವರ ಜೀವನದ ದಿಶೆಯೇ ಬದಲಾಯಿತೆಂದು ಹೇಳುತ್ತಾರೆ. ಇವರ ಮೂಲ ಹೆಸರು ಶ್ರೀನಿವಾಸ ಆಚಾರ್ಯ.

ಇದಷ್ಟೇ ಅಲ್ಲದೇ ಹಲವಾರು ಚಲನಚಿತ್ರಗಳಿಗೆ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿರುವ ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಬೆಂಗಳೂರು ವಿವಿ ಇವರಿಗೆ ಡಾಕ್ಟರೇಟ್‌ ನೀಡಿ ಗೌರವಿಸಿದ್ದು, ಕಾಯಕಯೋಗಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : “ಕನ್ನಡತಿ” ಮುಗೀತು : ಶೀಘ್ರದಲ್ಲಿ ನಿಮ್ಮನ್ನು ರಂಜಿಸಲು ಬರುತ್ತೇನೆ ಎಂದ ‘ಕನ್ನಡ ಟೀಚರ್’

ಇದನ್ನೂ ಓದಿ : “ಘೋಷ್ಟ್” ಶಿವಣ್ಣನ ಜೊತೆ ವಿಜಯ್ ಸೇತುಪತಿ? ಆ ಭೇಟಿಯ ಸೀಕ್ರೆಟ್ ರಿವೀಲ್ ಆಯ್ತು!

ಇದೀಗ ಅವರ (B.K.S. Varma death) ಮರಣ ಕಲಾಕ್ಷೇತ್ರಕ್ಕೆ ಮರೆಯರಾದ ನಷ್ಟವೇ ಸರಿ. ಇವರ ಕಲಾಕೃತಿಗಳನ್ನು ಮೆಚ್ಚಿ ಕೊಂಡಾಡಿದ ಪ್ರತಿಯೊಬ್ಬ ಕಲಾವಿದರು, ಅವರ ಅಭಿಮಾನಿಗಳು ಇಂದು ಅವರ ಸಾವಿನ ವಿಚಾರವನ್ನು ಕೇಳಿ ಭಾವುಕರಾಗಿದ್ದಾರೆ. ಮೃತ ವರ್ಮಾ ಅವರ ಅಂತ್ಯ ಸಂಸ್ಕಾರವು ಇಂದು ನಡೆಯಲಿದ್ದು, ಮಧ್ಯಾಹ್ನ 2:30 ರ ವೇಳೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

B.K.S. Varma death: Famous film artist B.K.S. Verma died of heart attack

Comments are closed.