Maharashtra shocker : ಹಲ್ಲಿಯ ಮೇಲೆ ಅತ್ಯಾಚಾರ ನಡೆಸಿದ ಕಾಮಾಂಧರು: ನಾಲ್ವರ ಬಂಧನ

Maharashtra shocker : ದೇಶದಲ್ಲಿ ಮಹಿಳೆಯರ ಮೇಲೆ, ಬಾಲಕಿಯರ ಮೇಲೆ ಹಾಗೂ ವೃದ್ಧೆಯರ ಮೇಲೆ ಅತ್ಯಾಚಾರದಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಸಾಕಷ್ಟು ಕಾನೂನು ಕ್ರಮಗಳ ಬಳಿಕವು ಮಹಿಳೆಯರನ್ನು ರಕ್ಷಿಸುವಲ್ಲಿ ದೇಶದ ಕಾನೂನು ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕು ಎಂಬುದರಲ್ಲಿ ತಪ್ಪಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಸಹ್ಯಾದ್ರಿ ಹುಲಿ ಯೋಜನೆಯಲ್ಲಿ ಮಾನಿಟರ್​ ಹಲ್ಲಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಅರಣ್ಯ ಇಲಾಖೆಯು ನಾಲ್ವರನ್ನು ಬಂಧಿಸಿದೆ .


ಗೋಠಾಣೆಯ ಗಾಭಾ ಪ್ರದೇಶದಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ ಸಾಂಗ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶಸ್ತ್ರಸಜ್ಜಿತ ವ್ಯಕ್ತಿಗಳು ಕಾಡಿನಲ್ಲಿ ಸಂಚರಿಸುತ್ತಿರುವುದನ್ನು ಸಿಸಿ ಟಿಟಿ ದೃಶ್ಯಾವಳಿಗಳು ತೋರಿಸಿವೆ ಎಂದು ಹೇಳಿದರು.


ಬಂಧನಕ್ಕೊಳಗಾದ ಆರೋಪಿಗಳು ಬೇಟೆಗಾರರು ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸಂರಕ್ಷಿತ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಹಾವಿಟ್​ ಗ್ರಾಮದ ಓರ್ವ ಶಂಕಿತನನ್ನು ಬಂಧಿಸಿದ್ದರು. ಈ ಸಂದರ್ಭದಲ್ಲಿ ಉಳಿದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದರು.


ಬಂಧಿತ ವ್ಯಕ್ತಿಯ ಮೊಬೈಲ್​ ಪರಿಶೀಲಿಸಿದ ಅರಣ್ಯಾಧಿಕಾರಿಗಳಿಗೆ ಈ ಭೀಕರ ಘಟನೆ ತಿಳಿದಿದೆ. ಇದೇ ಮೊಬೈಲ್​​ನಿಂದ ಹೇಯ ಕೃತ್ಯವನ್ನು ಚಿತ್ರೀಕರಿಸಲಾಗಿತ್ತು. ಆತನ ಫೋನ್​​ನಲ್ಲಿ ಅಮಾನವೀಯ ಕೃತ್ಯದ ಫೋಟೋ ಹಾಗೂ ವಿಡಿಯೋಗಳು ವೈರಲ್​ ಆಗಿವೆ.


ಆ ಫೋನ್​​ನಲ್ಲಿ ಮಾನಿಟರ್​ ಹಲ್ಲಿಯ ಮೇಲೆ ಎಸಗಲಾದ ಹೇಯ ಕೃತ್ಯದ ಸಂಪೂರ್ಣ ದೃಶ್ಯಾವಳಿಗಳು ಇದ್ದವು. ಅಲ್ಲದೇ ಆ ಫೋನ್​ನಲ್ಲಿ ಮೊಲಗಳು, ಮುಳ್ಳು ಹಂದಿ ಹಾಗೂ ಜಿಂಕೆಗಳ ಫೋಟೋ ಕೂಡ ಇತ್ತು ಎನ್ನಲಾಗಿದೆ.
ಸುಳಿವಿನ ಮೇರೆಗೆ ಇತರ ಆರೋಪಿಗಳನ್ನು ರತ್ನಗಿರಿ ಜಿಲ್ಲೆಯಿಂದ ಹಿಡಿದು ಎರಡು ದ್ವಿಚಕ್ರವಾಹನಗಳೊಂದಿಗೆ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.


ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಿಭಾಗೀಯ ಅರಣ್ಯಾಧಿಕಾರಿ ವಿಶಾಲ ಮಾಳಿ ತಿಳಿಸಿದ್ದಾರೆ.

ಇದನ್ನು ಓದಿ : Andhra Pradesh : ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿದುರಂತ : 6 ಬಲಿ, 12 ಕ್ಕೂ ಅಧಿಕ ಮಂದಿಗೆ ಗಾಯ

ಇದನ್ನೂ ಓದಿ : Santhosh Patil Suicide Case: ಸಂತೋಷ್‌ ಪಾಟೀಲ್‌ ಆತ್ಮಹತ್ಯೆ : ಸಚಿವ ಕೆ.ಎಸ್.‌ ಈಶ್ವರಪ್ಪ ವಿರುದ್ದ ಉಡುಪಿಯಲ್ಲಿ ಪ್ರಕರಣ ದಾಖಲು

Maharashtra shocker: 4 arrested for allegedly raping Bengal Monitor Lizard

Comments are closed.