Man Dead in Gym: ಜಿಮ್‌ ನಲ್ಲಿ ಕಸರತ್ತು ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು

ಚಂಡೀಗಢ: (Man Dead in Gym) ಜಿಮ್‌ ನಲ್ಲಿ ತಾಲೀಮು ಮಾಡುವಾಗ ಅಥವಾ ತಾಲೀಮು ನಂತರದಲ್ಲಿ ಯುವಕರು ಹಠಾತ್ತನೇ ಕುಸಿದು ಬಿದ್ದು ಸಾಯುವ ಘಟನೆಗಳು ಹೆಚ್ಚುತ್ತಿವೆ. ಅನೇಕ ಮಂದಿ ನಟರು ಕೂಡ ವರ್ಕ್‌ ಔಟ್‌ ಮಾಡುವಾಗ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಇಂತಹದೇ ಘಟನೆಯೊಂದು ಚಂಡೀಗಢದಲ್ಲಿ ನಡೆದಿದ್ದು, ತಾಲೀಮು ಮುಗಿಸಿ ಸ್ನೇಹಿತನೊಂದಿಗೆ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತರನ್ನು ರಾಮ್ ರಾಣಾ (33 ವರ್ಷ) ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ಜಿಮ್‌ ನಲ್ಲಿ ವ್ಯಾಯಾಮ ಮುಗಿಸಿ ನಂತರದಲ್ಲಿ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಿರುವಾಗ ತನ್ನ ಎರಡು ತೋಳುಗಳನ್ನು ಹಿಂದಕ್ಕೆ ಚಾಚುತ್ತಾರೆ. ಈ ಸಂದರ್ಭದಲ್ಲಿ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ (Man Dead in Gym). ಕೂಡಲೇ ಅವರ ಸ್ನೇಹಿತರು ಜಿಎಂಎಸ್‌ಎಚ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರಿಶೀಲಿಸಿದ ವೈದ್ಯರು ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಮೃತ ವ್ಯಕ್ತಿ ರಾಣಾ ಅವರಿಗೆ ವಿವಾಹವಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ವ್ಯಾಯಾಮಗಳು ಹೃದಯಾಘಾತವನ್ನು ಪ್ರಚೋದಿಸಬಹುದೇ?
ಪ್ರತಿದಿನ ವ್ಯಾಯಾಮ ಮಾಡುವುದರಿಂದ ಹೃದಯದ ಆರೋಗ್ಯವನ್ನು ಹೆಚ್ಚಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಜಿಮ್‌ಗೆ ಹೋಗುವವರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಮುಂಬೈನ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕನ್ಸಲ್ಟೆಂಟ್ ಕಾರ್ಡಿಯಾಕ್ ಸರ್ಜನ್ ಡಾ ಬಿಪೀನ್‌ಚಂದ್ರ ಭಾಮ್ರೆ ಮಾತನಾಡುತ್ತಾ, “ವ್ಯಾಯಾಮದ ಸಮಯದಲ್ಲಿ ಭಾರ, ಎಡ ಭುಜದ ನೋವು, ಗಂಟಲು ಮುಂತಾದ ಹೃದಯ ನೋವಿನ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ನೋವು, ಬೆನ್ನು ನೋವಿನಂತಹ ರೋಗಲಕ್ಷಣಗಳನ್ನು ಹೊಂದಿದ್ದರೆ, ಖಂಡಿತವಾಗಿಯೂ ನೀವು ವ್ಯಾಯಾಮವನ್ನು ನಿಲ್ಲಿಸಬೇಕು.” ಎಂದಿದ್ದಾರೆ.

ಇದನ್ನೂ ಓದಿ : Student hanging in hostel: ಹಾಸ್ಟೆಲ್‌ ಕೊಠಡಿಯಲ್ಲಿ ಕೈ ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

ವಿಶೇಷವಾಗಿ ಚಳಿಗಾಲದಲ್ಲಿ ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಶೀತ ಹವಾಮಾನವು ಹೃದಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ನವದೆಹಲಿಯ ಮ್ಯಾಕ್ಸ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಮನೋಜ್ ಕುಮಾರ್ ಅವರು, “ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಾಗುತ್ತದೆ, ವಯಸ್ಸಾದವರು ಹೃದಯಾಘಾತಕ್ಕೆ ಒಳಗಾಗುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಇದು ಯುವಕರಲ್ಲಿಯೂ ಕಂಡುಬರುತ್ತದೆ. ಇದನ್ನು ತಪ್ಪಿಸಲು, ಚಳಿಗಾಲದಲ್ಲಿ ಹೊರಾಂಗಣದಲ್ಲಿ ಸೂರ್ಯೋದಯಕ್ಕೆ ಮೊದಲು ಓಡಾಡುವುದನ್ನು ತಪ್ಪಿಸಬೇಕು.” ಎಂದಿದ್ದಾರೆ.

Man Dead in Gym: A man died after collapsing while exercising in the gym

Comments are closed.