KL Rahul in No.5 : ಏಕದಿನ ಕ್ರಿಕೆಟ್‌ನಲ್ಲಿ ರಾಹುಲ್‌ಗೆ 5ನೇ ಕ್ರಮಾಂಕ ಸೂಕ್ತವೇ? ಅಂಕಿ ಅಂಶಗಳು ಏನು ಹೇಳುತ್ತವೆ?

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (KL Rahul in No.5) ಅವರಿಗೆ ಏಕದಿನ ಕ್ರಿಕೆಟ್’ನಲ್ಲಿ 5ನೇ ಕ್ರಮಾಂಕ ಸೂಕ್ತವೇ? ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ರಾಹುಲ್ 5ನೇ ಕ್ರಮಾಂಕದಲ್ಲೇ ಆಡಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ರಾಹುಲ್ ಅವರೇ 5ನೇ ಕ್ರಮಾಂಕದ ಆಟಗಾರ. ಶ್ರೀಲಂಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ (India Vs Sri Lanka ODI series) ಅಜೇಯ 64 ರನ್ ಗಳಿಸಿ ಭಾರತವನ್ನು ಗೆಲ್ಲಿಸಿದ ನಂತರ 5ನೇ ಕ್ರಮಾಂಕದಲ್ಲಿ ರಾಹುಲ್ ಫಿಕ್ಸ್ ಆಗಿದ್ದಾರೆ.

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 216 ರನ್’ಗಳ ಟಾರ್ಗೆಟ್ ಬೆನ್ನಟ್ಟಿದ್ದ ಭಾರತ ಒಂದು ಹಂತದಲ್ಲಿ 86 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಪೆವಿಲಿಯನ್ ಸೇರಿಕೊಂಡಿದ್ದರು.ಭಾರತ 62 ರನ್ನಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ರಾಹುಲ್ ಕೊನೆಯವರೆಗೂ ಅಜೇಯವಾಗಿ ನಿಂತು 103 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ಅಜೇಯ 64 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದ್ದರು.

ರಾಹುಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ 43.2 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ 4 ವಿಕೆಟ್’ಗಳ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿತ್ತು.ಆರಂಭಿಕ ಆಟಗಾರನಾಗಿದ್ದ ರಾಹುಲ್ ಅವರನ್ನು ಏಕದಿನ ಕ್ರಿಕೆಟ್’ನಲ್ಲಿ 5ನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ. ಭಾರತ ಪರ 5ನೇ ಕ್ರಮಾಂಕದಲ್ಲಿ ಇಲ್ಲಿಯವರೆಗೆ 16 ಇನ್ನಿಂಗ್ಸ್’ಗಳನ್ನಾಡಿರುವ ರಾಹುಲ್ 54.25ರ ಅಮೋಘ ಸರಾಸರಿಯಲ್ಲಿ ಒಂದು ಶತಕ ಹಾಗೂ 6 ಅರ್ಧಶತಕಗಳೊಂದಿಗೆ 102.03ರ ಸ್ಟ್ರೈಕ್’ರೇಟ್’ನಲ್ಲಿ 651 ರನ್ ಕಲೆ ಹಾಕಿದ್ದಾರೆ.

5ನೇ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್ :

  • ಇನ್ನಿಂಗ್ಸ್: 16
  • ರನ್: 651
  • ಸರಾಸರಿ: 54.25
  • ಸ್ಟ್ರೈಕ್’ರೇಟ್: 102.03
  • 100/50: 01/06

5ನೇ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್ ಗಳಿಸಿರುವ ರನ್ :
7(8), 80(52), 88(64), 112(113), 12(15), 76(66), 5(11), 62(43), 7(18), 73(70), 14(28), 8(10), 39(29), 64*(103).

ಇದನ್ನೂ ಓದಿ : ಕನ್ನಡಿಗ ಸುನಿಲ್ ಜೋಶಿ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಆಯ್ಕೆ

ಇದನ್ನೂ ಓದಿ : Shreyas Iyer ruled out : ನ್ಯೂಜಿಲೆಂಡ್ ಏಕದಿನ ಸರಣಿಯಿಂದ ಶ್ರೇಯಸ್ ಅಯ್ಯರ್ ಔಟ್

ಇದನ್ನೂ ಓದಿ : Rishabh Pant First Reaction: “ನಿಮ್ಮ ಸಹಾಯವನ್ನು ಜೀವನ ಪರ್ಯಂತ ಮರೆಯಲ್ಲ” ಪ್ರಾಣ ಕಾಪಾಡಿದ ಹುಡುಗರಿಗೆ ರಿಷಭ್ ಪಂತ್ ಥ್ಯಾಂಕ್ಸ್

ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಗೆಲ್ಲಿಸಿದ ನಂತರ ಮಾತನಾಡಿರುವ ರಾಹುಲ್, 5ನೇ ಕ್ರಮಾಂಕದಲ್ಲಿ ಆಡುತ್ತಿರುವ ಅನುಭವವನ್ನು ಹಂಚಿಕೊಂಡಿದ್ದಾರೆ.
“ಏಕದಿನ ಕ್ರಿಕೆಟ್’ನಲ್ಲಿ ನಾನು 5ನೇ ಕ್ರಮಾಂಕದಲ್ಲೇ ಆಡಬೇಕೆಂದು ನಾಯಕ ರೋಹಿತ್ ಶರ್ಮಾ ಸ್ಪಷ್ಟವಾಗಿ ತಿಳಿಸಿದ್ದಾರೆ. ಆ ಕ್ರಮಾಂಕದಲ್ಲಿ ಆಡುತ್ತಿರುವುದು ನನ್ನ ಆಟವನ್ನು ಇನ್ನೂ ಹೆಚ್ಚಾಗಿ ಅರ್ಥ ಮಾಡಿಕೊಳ್ಳಲು ನನಗೆ ಸಹಕಾರಿಯಾಗುತ್ತಿದೆ. ನನಗೆ ನಾನೇ ಚಾಲೆಂಜ್ ಮಾಡಿಕೊಂಡು ಆಡುವ ಮೂಲಕ 5ನೇ ಕ್ರಮಾಂಕಕ್ಕೆ ಹೊಂದಿಕೊಳ್ಳುತ್ತಿದ್ದೇನೆ” ಎಂದು ರಾಹುಲ್ ತಿಳಿಸಿದ್ದಾರೆ.

KL Rahul in No.5 : Is No.5 suitable for Rahul in ODI cricket? What do the numbers say?

Comments are closed.