Loud music Murder : ಜೋರಾಗಿ ಹಾಡು ಕೇಳಿದ್ದಕ್ಕೆ ನೆರಮನೆಯವನನ್ನೇ ಕೊಂದ ಪಾಪಿ..!

ಅಕ್ಕ ಪಕ್ಕದ ಮನೆ ಅಂದರೆ ಸಾಕು. ಅಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೂ ಕಿರಿಕ್​ ಆಗ್ತಾನೇ ಇರುತ್ತೆ. ನೀರಿಗಾಗಿ, ಕಸಕ್ಕಾಗಿ, ಕರೆಂಟ್​ಗಾಗಿ , ಜೋರಾಗಿ ಶಬ್ದ ಮಾಡಿದ್ದಕ್ಕಾಗಿ ಹೀಗೆ ನಾನಾ ಕಾರಣಗಳಿಗೆ ಜಗಳ ಉಂಟಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ನೆರೆ ಮನೆಯಾತ ಜೋರಾಗಿ ಹಾಡು ಕೇಳುತ್ತಿದ್ದ(Loud music Murder) ಎಂಬ ಕಾರಣಕ್ಕೆ ನೆರೆ ಮನೆಯವನನ್ನು ಬರ್ಬರವಾಗಿ ಕೊಲೆಗೈದಿದ್ದಾನೆ..!


25 ವರ್ಷದ ಮುಂಬೈನ ವ್ಯಕ್ತಿಯು ಜೋರಾಗಿ ಹಾಡನ್ನು ಕೇಳುತ್ತಿದ್ದ ನೆರೆಮನೆಯಾತನಿಗೆ ಧ್ವನಿ ಸಣ್ಣ ಮಾಡುವಂತೆ ಕೇಳಿದ್ದಾನೆ. ಆದರೆ ಇದಕ್ಕೆ ನೆರೆಮನೆಯಾತ ಒಪ್ಪಿರಲಿಲ್ಲ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿಯು ನೆರೆ ಮನೆಯವನನ್ನೇ ಕೊಲೆ ಮಾಡಿದ್ದಾನೆ. ಮುಂಬೈನ ಮಾಲ್ವಾನಿ ಏರಿಯಾದಲ್ಲಿ ಈ ಘಟನೆ ಸಂಭವಿಸಿದೆ. ಸುರೇಂದ್ರ ಕುಮಾರ್​​​ ತನ್ನ ಮನೆಯ ಹೊರಗಡೆ ಕುಳಿತು ಸುಮ್ಮನೇ ಹಾಡು ಕೇಳುತ್ತಿದ್ದ ಎನ್ನಲಾಗಿದೆ. ಪಕ್ಕದ ಮನೆಯಾತ ಸೈಫ್​ ಅಲಿ ಚಾಂದ್​ ಅಲಿ ಶೇಖ್​​ ಇದರಿಂದ ಕಿರಿಕಿರಿಗೊಂಡಿದ್ದ. ಹಾಗೂ ಸುರೇಂದ್ರ ಕುಮಾರ್​ ಬಳಿ ಧ್ವನಿ ಸಣ್ಣ ಮಾಡುವಂತೆ ಕೇಳಿದ್ದಾನೆ. ಆದರೆ ಸೈಫ್​ ಮಾತನ್ನು ಸುರೇಂದ್ರ ಕುಮಾರ್​ ಕಿವಿಗೆ ಹಾಕಿಕೊಂಡಿರಲಿಲ್ಲ.

ಇದರಿಂದ ಕೆರಳಿದ ಸೈಫ್​​ ಸುರೇಂದ್ರ ಕುಮಾರ್​ನನ್ನು ನೆಲಕ್ಕೆ ತಳ್ಳಿದ್ದಾನೆ. ಬಿದ್ದ ರಭಸಕ್ಕೆ ಸುರೇಂದ್ರ ಕುಮಾರ್​ಗೆ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸುರೇಂದ್ರನನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸುರೇಂದ್ರ ಕುಮಾರ್​ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅತ್ಯಾಚಾರ ನಡೆದ ಒಂದೇ ತಿಂಗಳಲ್ಲಿ ಆರೋಪಿಗೆ ಶಿಕ್ಷೆ

ನಮ್ಮಲ್ಲಿ ಯಾವುದೇ ಪ್ರಕರಣಗಳು ದಾಖಲಾದರೂ ಸಹ ಅದು ಕೋರ್ಟ್​ ಮೆಟ್ಟಿಲೇರಿ ವಿಚಾರಣೆ ನಡೆದು ತೀರ್ಪು ಬರುವಷ್ಟರಲ್ಲಿ ವರ್ಷಗಳೇ ಕಳೆದಿರುತ್ತದೆ. ಅತ್ಯಾಚಾರ ಪ್ರಕರಣಗಳಲ್ಲಂತೂ ಎಲ್ಲಾ ಸಾಕ್ಷ್ಯಗಳು ಎದುರಿಗಿದ್ದರೂ ಸಹ ತೀರ್ಪು ಬರುವುದು ಮಾತ್ರ ಐದಾರು ವರ್ಷಗಳ ಬಳಿಕವೇ ಎಂಬಂತಾಗಿದೆ. ಆದರೆ ಈ ಎಲ್ಲಾ ಮಾತಿಗೆ ವಿರುದ್ಧವಾಗಿ ಎಂಬಂತೆ ಗುಜರಾತ್​ನಲ್ಲಿಅತ್ಯಾಚಾರ ( rape )ನಡೆದ ಕೇವಲ 28 ದಿನಗಳಲ್ಲಿ ಆರೋಪಿಯನ್ನುದೋಷಿ ಎಂದು ಕೋರ್ಟ್ ಪರಿಗಣಿಸಿ ಮಹತ್ವದ ತೀರ್ಪು ನೀಡಿದೆ.

ಎರಡೂವರೆ ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಬಳಿ ಕೊಲೆಗೈದಿದ್ದ ವಲಸೆಕಾರ್ಮಿಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದರು. ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡ ಗುಜರಾತ್​ ವಿಶೇಷ ನ್ಯಾಯಾಲಯ ಘಟನೆ ನಡೆದ ಕೇವಲ 1 ತಿಂಗಳೊಳಗಾಗಿ ಆರೋಪಿಯನ್ನು ದೋಷಿ ಎಂದು ಪರಿಗಣಿಸಿದೆ. ಬಿಹಾರ ಮೂಲದ ವಲಸೆ ಕಾರ್ಮಿಕನಾಗಿದ್ದ ಸೂರತ್​ ನಗರದ ಪಾಂಡೇಸರ ಎಂಬಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದರು. ಬಿಹಾರ ಮೂಲದ ವಲಸೆ ಕಾರ್ಮಿಕ ದಂಪತಿಯ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ್ದ ಯಾದವ್​​​​ ಆಕೆಯ ಮೇಲೆ ಅತ್ಯಾಚಾರಗೈದು ಬಳಿಕ ಕೊಲೆ ಮಾಡಿದ್ದ. ನವೆಂಬರ್​ 4ರಂದು ಈ ಘಟನೆ ನಡೆದಿತ್ತು.

ಪಬ್ಲಿಕ್​ ಪ್ರಾಸಿಕ್ಯೂಟರ್​​ ನಯನ್​​ ಸುಖದ್ವಾಲಾ ಅತ್ಯಾಚಾರಿ ಯಾದವ್​​ಗೆ ಮರಣದಂಡನೆ ನೀಡುವಂತೆ ಆಗ್ರಹಿಸಿದ್ದರು. ಆದರೆ ಆತನಿಗೆ ಇಬ್ಬರು ಮಕ್ಕಳಿರುವ ಹಿನ್ನೆಲೆ ಅವರ ಭವಿಷ್ಯ ಅತಂತ್ರವಾಗದಂತೆ ನೋಡಿಕೊಳ್ಳುವ ಸಲುವಾಗಿ ಮರಣದಂಡನೆ ನೀಡದಂತೆ ಕೋರ್ಟ್​ ಎದುರು ಯಾದವ್​ ಪರ ವಕೀಲರು ಮನವಿ ಮಾಡಿದ್ದರು. ವಾದ – ವಿವಾದಗಳನ್ನು ಆಲಿಸಿದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಪಿ.ಎಸ್​​ ಕಲಾ ಆರೋಪಿ ಯಾದವ್​ನನ್ನು ದೋಷಿ ಎಂದು ಪರಿಗಣಿಸಿದ್ದು ತೀರ್ಪನ್ನು ಇಂದಿಗೆ ಕಾಯ್ದಿರಿಸಿದೆ.

ಇದನ್ನು ಓದಿ : Pakistan : ಮೊಸರು ತರಲೆಂದು ಮಾರ್ಗಮಧ್ಯದಲ್ಲಿ ರೈಲನ್ನೇ ನಿಲ್ಲಿಸಿದ ಚಾಲಕ..!

ಇದನ್ನೂ ಓದಿ: Vinod Kambli : ಸೈಬರ್​ ವಂಚಕರ ಜಾಲದಲ್ಲಿ ಸಿಲುಕಿದ ಮಾಜಿ ಕ್ರಿಕೆಟಿಗ ವಿನೋದ್​ ​ ಕಾಂಬ್ಳಿ..!

Loud music Murder : Mumbai man kills neighbour for playing loud music

Comments are closed.