Namaz In Open Space : ‘ತೆರೆದ ಸ್ಥಳಗಳಲ್ಲಿ ನಮಾಜ್​ ಮಾಡುವಂತಿಲ್ಲ’ – ಹರಿಯಾಣ ಸಿಎಂ ಖಟ್ಟರ್​

2018ರ ಆದೇಶದಂತೆ ಗೊತ್ತುಪಡಿಸಲಾದ ಸ್ಥಳಗಳಲ್ಲಿ ಪ್ರಾರ್ಥನೆ (Namaz In Open Space)ಸಲ್ಲಿಸುತ್ತಿರುವ ಮುಸ್ಲಿಮ್​ ಜನತೆಗೆ ಬಲಪಂಥೀಯ ಸಂಘಟನೆ ಕಿರುಕುಳ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಎರಡು ಸಮುದಾಯಗಳ ನಡುವಿನ ಜಗಳದಲ್ಲಿ ಮಧ್ಯಪ್ರವೇಶಿಸಿದ ಖಟ್ಟರ್​ ಈ ಹೇಳಿಕೆಯನ್ನು ನೀಡಿದ್ದಾರೆ.


ಗುರ್ಗಾಂವ್​ ಆಡಳಿತಾಧಿಕಾರು ಎಲ್ಲಾ ಪಕ್ಷ ಹಾಗೂ ಸಮುದಾಯದ ನಾಯಕರ ಜೊತೆ ಮರು ಮಾತುಕತೆ ನಡೆಸುತ್ತಿದ್ದಾರೆ. ಯಾವ ಧರ್ಮ ಹಾಗೂ ಹಕ್ಕುಗಳಿಗೆ ಚ್ಯುತಿ ಬಾರದಂತಹ ಸೌಹಾರ್ದಯುತ ಪರಿಹಾರ ಕಂಡುಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದು ಸಿಎಂ ಖಟ್ಟರ್​ ಹೇಳಿದ್ದಾರೆ. ಈ ಪರಿಹಾರ ಕಂಡುಹಿಡಿಯುವವರೆಗೆ ಮುಸ್ಲಿಂ ಬಾಂಧವರು ಶುಕ್ರವಾರದಂದು ತಮ್ಮ ತಮ್ಮ ನಿವಾಸ ಹಾಗೂ ಪೂಜಾ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸತಕ್ಕದ್ದು ಎಂದು ಖಟ್ಟರ್​ ಹೇಳಿದ್ದಾರೆ.

ಗುರುಗಾಂವ್​ನಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಪಕ್ಷಗಳೊಂದಿಗೆ ಅಧಿಕಾರಿಗಳು ಮರು ಮಾತುಕತೆ ನಡೆಸಲಿದ್ದಾರೆ. ಹಾಗೂ ಯಾವುದೇ ಧರ್ಮ ಹಾಗೂ ಯಾರದ್ದೂ ಹಕ್ಕಿಗೆ ಚ್ಯುತಿ ಬಾರದಂತೆ ಪರಿಹಾರವನ್ನು ಕಂಡುಹಿಡಿಯಲಾಗುತ್ತದೆ ಎಂದು ಹರಿಯಾಣ ಮುಖ್ಯಮಂತ್ರಿ ಖಟ್ಟರ್​ ವಿಶ್ವಾ ಸವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಹರಿಯಾಣ ಸಿಎಂ ಖಟ್ಟರ್​, ನಾನು ಪೊಲೀಸರೊಂದಿಗೆ ಈ ವಿಚಾರವಾಗಿ ಮಾತನಾಡಿದ್ದೇನೆ. ಹಾಗೂ ಆದಷ್ಟು ಬೇಗ ಇದನ್ನು ಪರಿಹರಿಸುವಂತೆ ಕೇಳಿಕೊಂಡಿದ್ದಾನೆ. ನಮಗೆ ಯಾರು ಯಾವುದೇ ಸ್ಥಳದಲ್ಲಿ ಪ್ರಾರ್ಥನೆ ಮಾಡಿದರೂ ಸಮಸ್ಯೆಯಿಲ್ಲ. ಏಕೆಂದರೆ ಆ ಸ್ಥಳಗಳನ್ನು ಪ್ರಾರ್ಥನೆ ಸಲ್ಲಿಸಲೆಂದೇ ನಿರ್ಮಿಸಲಾಗಿದೆ ಎಂದು ಹೇಳಿದರು.

ಜೋರಾಗಿ ಹಾಡು ಕೇಳಿದ್ದಕ್ಕೆ ನೆರಮನೆಯವನನ್ನೇ ಕೊಂದ ಪಾಪಿ

ಅಕ್ಕ ಪಕ್ಕದ ಮನೆ ಅಂದರೆ ಸಾಕು. ಅಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೂ ಕಿರಿಕ್​ ಆಗ್ತಾನೇ ಇರುತ್ತೆ. ನೀರಿಗಾಗಿ, ಕಸಕ್ಕಾಗಿ, ಕರೆಂಟ್​ಗಾಗಿ , ಜೋರಾಗಿ ಶಬ್ದ ಮಾಡಿದ್ದಕ್ಕಾಗಿ ಹೀಗೆ ನಾನಾ ಕಾರಣಗಳಿಗೆ ಜಗಳ ಉಂಟಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ನೆರೆ ಮನೆಯಾತ ಜೋರಾಗಿ ಹಾಡು ಕೇಳುತ್ತಿದ್ದ ಎಂಬ ಕಾರಣಕ್ಕೆ ನೆರೆ ಮನೆಯವನನ್ನು ಬರ್ಬರವಾಗಿ ಕೊಲೆಗೈದಿದ್ದಾನೆ.

25 ವರ್ಷದ ಮುಂಬೈನ ವ್ಯಕ್ತಿಯು ಜೋರಾಗಿ ಹಾಡನ್ನು ಕೇಳುತ್ತಿದ್ದ ನೆರೆಮನೆಯಾತನಿಗೆ ಧ್ವನಿ ಸಣ್ಣ ಮಾಡುವಂತೆ ಕೇಳಿದ್ದಾನೆ. ಆದರೆ ಇದಕ್ಕೆ ನೆರೆಮನೆಯಾತ ಒಪ್ಪಿರಲಿಲ್ಲ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿಯು ನೆರೆ ಮನೆಯವನನ್ನೇ ಕೊಲೆ ಮಾಡಿದ್ದಾನೆ. ಮುಂಬೈನ ಮಾಲ್ವಾನಿ ಏರಿಯಾದಲ್ಲಿ ಈ ಘಟನೆ ಸಂಭವಿಸಿದೆ. ಸುರೇಂದ್ರ ಕುಮಾರ್​​​ ತನ್ನ ಮನೆಯ ಹೊರಗಡೆ ಕುಳಿತು ಸುಮ್ಮನೇ ಹಾಡು ಕೇಳುತ್ತಿದ್ದ ಎನ್ನಲಾಗಿದೆ. ಪಕ್ಕದ ಮನೆಯಾತ ಸೈಫ್​ ಅಲಿ ಚಾಂದ್​ ಅಲಿ ಶೇಖ್​​ ಇದರಿಂದ ಕಿರಿಕಿರಿಗೊಂಡಿದ್ದ. ಹಾಗೂ ಸುರೇಂದ್ರ ಕುಮಾರ್​ ಬಳಿ ಧ್ವನಿ ಸಣ್ಣ ಮಾಡುವಂತೆ ಕೇಳಿದ್ದಾನೆ. ಆದರೆ ಸೈಫ್​ ಮಾತನ್ನು ಸುರೇಂದ್ರ ಕುಮಾರ್​ ಕಿವಿಗೆ ಹಾಕಿಕೊಂಡಿರಲಿಲ್ಲ.

ಇದರಿಂದ ಕೆರಳಿದ ಸೈಫ್​​ ಸುರೇಂದ್ರ ಕುಮಾರ್​ನನ್ನು ನೆಲಕ್ಕೆ ತಳ್ಳಿದ್ದಾನೆ. ಬಿದ್ದ ರಭಸಕ್ಕೆ ಸುರೇಂದ್ರ ಕುಮಾರ್​ಗೆ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸುರೇಂದ್ರನನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸುರೇಂದ್ರ ಕುಮಾರ್​ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Vinod Kambli : ಸೈಬರ್​ ವಂಚಕರ ಜಾಲದಲ್ಲಿ ಸಿಲುಕಿದ ಮಾಜಿ ಕ್ರಿಕೆಟಿಗ ವಿನೋದ್​ ​ ಕಾಂಬ್ಳಿ..!

ಇದನ್ನೂ ಓದಿ: Atmanirbhar DMK MP Kanimozhi : ಈ ಕಾರಣಕ್ಕೆ ಸಂಸತ್ತಿನಲ್ಲಿ ತಮಿಳು ಭಾಷೆಯಲ್ಲಿ ಭಾಷಣ ಮಾಡಿದ ಡಿಎಂಕೆ ಸಂಸದೆ..!

Offering Namaz In Open Space Won’t Be Tolerated: Haryana Chief Minister

Comments are closed.