KGF Chapter 2 : ಅಮುಲ್​​ ಕಾರ್ಟೂನ್​​ ರೂಪದಲ್ಲಿ ಮೂಡಿಬಂತು ರಾಕಿ ಭಾಯ್​ ಚಿತ್ರ

KGF Chapter 2 : ಅಮುಲ್​ ಟೇಸ್ಟ್​ ಆಫ್​ ಇಂಡಿಯಾ ಎಂಬ ಮಾತು ಎಷ್ಟು ಸತ್ಯವೋ.. ಸೋಶಿಯಲ್​ ಮೀಡಿಯಾದಲ್ಲಿ ಅಮುಲ್​ ತನ್ನ ಕ್ರಿಯೇಟಿವಿಟಿಯನ್ನು ಪದೇ ಪದೇ ಪ್ರೂವ್​ ಮಾಡುತ್ತೆ ಎನ್ನುವುದು ಕೂಡ ಅಷ್ಟೇ ಸತ್ಯ. ಕೆಲವು ದಿನಗಳ ಹಿಂದಷ್ಟೇ ಬ್ಲಾಕ್​ಬಸ್ಟರ್​​ನಲ್ಲಿ ಭರ್ಜರಿ ಸೌಂಡ್​ ಮಾಡಿದ್ದ ಆರ್​ಆರ್​ಆರ್​ ಹಾಗೂ ಪುಷ್ಪಾ : ದಿ ರೈಸ್​ ಸಿನಿಮಾಗಳಲ್ಲಿನ ಪಾತ್ರಗಳನ್ನು ಕಾಮಿಕ್​ ಮಾಡುವ ಮೂಲಕ ಅಮುಲ್​ ಸಿನಿಮಾ ಅಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ಬಾಕ್ಸಾಫೀಸಿನಲ್ಲಿ ಬಾದ್ಶಾ ಎನಿಸಿರುವ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಕೂಡ ಅಮುಲ್​​ ಚಿಂತನೆಯಲ್ಲಿ ಮೂಡಿ ಬಂದಿದೆ.


ಅಮುಲ್​ನ ಪ್ರಸಿದ್ಧ ಕಾಮಿಕ್​ ಪಾತ್ರವನ್ನು ರಾಕಿ ಭಾಯ್​ ರೂಪದಲ್ಲಿ ರಚಿಸಲಾಗಿದೆ. ಕೆಜಿಎಫ್​ 2 ಸಿನಿಮಾದಲ್ಲಿ ಯಶ್​ ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೋ ಅದೇ ರೀತಿಯಲ್ಲಿ ಈ ಕಾಮಿಕ್​ನ್ನು ರಚಿಸಲಾಗಿದೆ. ಈ ಪೋಸ್ಟ್​​ನಲ್ಲಿ ರಾಕಿ ಭಾಯ್​ ರಾಕಿ ಎಂದು ಬರೆಯಲಾದ ಬೈಕ್​ ಮೇಲೆ ಕುಳಿತು ಬ್ರೆಡ್​ & ಬಟರ್​ ಸವಿಯುತ್ತಿದ್ದಾರೆ. ಈ ಫೋಟೋದ ಮೇಲೆ ಕೋಲಾರದಲ್ಲಿ ಚಿನ್ನವಿಡಿ.ಅಮುಲ್​ ಇದನ್ನು ಯಶ್​ಗೆ ಹೇಳಿ ಎಂದು ಬರೆಯಲಾಗಿದೆ.


ಕೆಜಿಎಫ್​ ಚಾಪ್ಟರ್ 2 ಸಿನಿಮಾದ ಈವರೆಗಿನ ಸ್ಯಾಂಡಲ್​ವುಡ್​ ಇಂಡಸ್ಟ್ರಿಯಲ್ಲಿಯೇ ದೊಡ್ಡ ಬಜೆಟ್​ನ ಸಿನಿಮಾವಾಗಿದೆ. ಈ ಸಿನಿಮಾವನ್ನು 100 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಿಸಲಾಗಿದೆ. ಆದರೆ ಸಿನಿಮಾ ತೆರೆ ಕಂಡ ಕೇವಲ ಐದು ದಿನಗಳಲ್ಲಿ ಕೆಜಿಎಫ್​ ಚಾಪ್ಟರ್​ 2 ಸಿನಿಮಾ 500 ಕೋಟಿ ರೂಪಾಯಿಗಳನ್ನು ಗಳಿಸಿದೆ.


ಅಮುಲ್​​​ ಪೋಸ್ಟ್​ ಮಾಡಿರುವ ಈ ಫೋಟೋವು ಕೆಲವೇ ಕೆಲವು ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ 5 ಸಾವಿರಕ್ಕೂ ಅಧಿಕ ಲೈಕ್ಸ್​ ಸಂಪಾದಿಸಿದೆ. ಕಮೆಂಟ್​ ಸೆಕ್ಷನ್​​ನಲ್ಲಿಯೂ ಕೂಡ ಯಶ್​ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.


ಅಮುಲ್ ಇಂಡಿಯಾವು ವಿಶ್ವದಲ್ಲಿ ನಡೆಯುವು ಸೆನ್ಸೇಷನಲ್​​ ವಿಷಯಗಳನ್ನು ಕಾಮಿಕ್​ ರೂಪದಲ್ಲಿ ಪ್ರಕಟಿಸುತ್ತದೆ. ಅಮುಲ್​ ಇಂಡಿಯಾದ ಕ್ರಿಯೇಟಿವಿಟಿಯು ಎಲ್ಲರ ಗಮನ ಸೆಳೆಯುವಂತೆ ಮಾಡುತ್ತದೆ. ಕೆಲವು ದಿನಗಳ ಹಿಂದಷ್ಟೇ ಅಮುಲ್​ ಎಲಾನ್​ ಮಸ್ಕ್​ರನ್ನು ಚಿತ್ರಿಸಿತ್ತು. ಮಸ್ಕ್​​ ಕೈಯಲ್ಲಿ ಪಂಜರವನ್ನು ಹಿಡಿದು ಟ್ವಿಟರ್​​ನ ಹಕ್ಕಿಯನ್ನು ಅದರೊಳಗೆ ಹಾಕಲು ಯತ್ನಿಸುತ್ತಿರುವ ರೀತಿಯಲ್ಲಿ ಕಾಮಿಕ್​ನ್ನು ಬಿಡಿಸಲಾಗಿತ್ತು.


ಕೆಜಿಎಫ್​ ಚಾಪ್ಟರ್​ 2 ಸಿನಿಮಾವು ಏಪ್ರಿಲ್​ 14ರಿಂದ ಸಿನಿಮಾ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. 2018ರಲ್ಲಿ ಕೆಜಿಎಫ್​ ಸಿನಿಮಾ ತೆರೆ ಕಂಡಿತ್ತು. ಇದಾದ ಬಳಿಕ ಕೋವಿಡ್​ ಕಾರಣದಿಂದಾಗಿ ಸಾಕಷ್ಟು ಬಾರಿ ಮುಂದೂಡಿಕೆಯಾಗಿದ್ದ ಕೆಜಿಎಫ್​ 2 ಸಿನಿಮಾ ಕೊನೆಗೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಬಾಲಿವುಡ್​ ನಟರಾದ ಸಂಜಯ್​ ದತ್​ ಹಾಗೂ ರವೀನಾ ಟಂಡನ್​​ರಂತಹ ದಿಗ್ಗಜರು ಅಭಿನಯಿಸಿದ್ದಾರೆ.

ಇದನ್ನು ಓದಿ : Kajal Aggarwal : ಗಂಡು ಮಗುವಿಗೆ ಜನ್ಮ ನೀಡಿದ ನಟಿ ಕಾಜಲ್​ ಅರ್ಗವಾಲ್​​

KGF Chapter 2: Amul celebrates Yash-starrer film’s success with latest topical

Comments are closed.