Mangalore blast: ಫ್ರಾನ್ಸ್‌ ಸ್ಪೂರ್ತಿ… ಮಂಗಳೂರಿನಲ್ಲಿ ಟ್ರಯಲ್‌..!

ಮಂಗಳೂರು: (Mangalore blast) ಮಂಗಳೂರು ಬಂಬ್‌ ಬ್ಲಾಸ್ಟ್‌ ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪೊಲೀಸರು ಸೇರಿದಂತೆ ಅನೇಕ ಅಧಿಕಾರಿಗಳು ಈ ಪ್ರಕರಣಕ್ಕೆ ಕುರಿತಾದ ತೀವ್ರ ತನಿಖೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿದೆ. ಮಾಹಿತಿಗಳು ಹೊರಬೀಳುತ್ತಿದ್ದಂತೆ ಉಗ್ರ ಶಾರೀಕ್‌ ನ ಮನಸ್ಥಿತಿ ಬಯಲಾಗುತ್ತಿದೆ.

ಕರಾವಳಿಯಲ್ಲಿ ನಡೆಯಬೇಕಿದ್ದ ರಕ್ತದೋಕುಳಿ (Mangalore blast) ಕೆಲವೇ ಸೆಕೆಂಡುಗಳ ಅಂತರದಲ್ಲಿ ಜಸ್ಟ್‌ ಮಿಸ್‌ ಆಗಿತ್ತು. 2020 ರಲ್ಲಿ ನಟೋರಿಯಸ್‌ ಉಗ್ರ ಶಾರೀಖ್‌ ಬರೆದ ಉಗ್ರ ಪರ ಬರೆದ ಗೋಡೆ ಬರಹ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಈದೀಗ ಅವನು ನಡೆಸಿದ ಮಂಗಳೂರು ಬಾಂಬ್‌ ಬಾಸ್ಟ್‌ ಪ್ರಕರಣವೂ ಕೂಡ ಎಲ್ಲೆಡೆ ಸದ್ದು ಮಾಡುತ್ತಿದೆ. ಈತ ಈ ಪ್ರಕರಣವನ್ನು ನಡೆಸುವ ಮೊದಲೇ ಅದೊಂದು ಫ್ರಾನ್ಸ್‌ ಘಟನೆಯ ಪ್ರಚೋದನೆಯನ್ನು ಪಡೆದುಕೊಂಡಿದ್ದ ಎಂಬ ಅನುಮಾನಗಳು ಮೂಡಿಬರುತ್ತಿದೆ. ಆತ ನಡೆಸಿದ ಬಾಂಬ್‌ ಸ್ಫೋಟಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಟರೇ ಭಯಾನಕ ಮಾಹಿತಿಗಳು ಹೊರಬೀಳುತ್ತಿವೆ.

ಫ್ರಾನ್ಸ್‌ ಕೃತ್ಯವೇ ಶಾರೀಖ್‌ ಗೆ ಪ್ರೇರಣೆ..?
ಶಾರೀಖ್‌ ನಡೆಸಿದ ಬಾಂಬ್‌ ಸ್ಫೋಟಕ್ಕೆ ಕಾರಣಗಳನ್ನು ತಿಳಿಯಬೇಕೆಂದರೆ ನಾವು ಎರಡು ವರ್ಷಗಳ ಹಿಂದೆ ಹೋಗಬೇಕಾಗುತ್ತದೆ. ಅದೊಂದು ದಿನ ಫ್ರಾನ್ಸ್‌ ನಲ್ಲಿ ಪ್ರವಾಸಿ ಮೊಹಮ್ಮದ್‌ ನ ವ್ಯಂಗ್ಯ ಚಿತ್ರ ತೋರಿಸಿದ್ದಕ್ಕೆ ಇತಿಹಾಸ ಶಿಕ್ಷಕನ ಶಿರಚ್ಚೇದ ಮಾಡಲಾಗಿತ್ತು. ಇತಿಹಾಸ ಶಿಕ್ಷಕ ಧರ್ಮಾಂದತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸುವಾಗ ಪ್ರವಾದಿ ಹೆಸರನ್ನ ಪ್ರಸ್ತಾಪಿಸಿ ವ್ಯಂಗ್ಯ ಚಿತ್ರವೊಂದನ್ನ ತೋರಿಸಿದ್ದ ಕಾರಣಕ್ಕೆ ಮರುದಿನವೇ ಆ ಶಿಕ್ಷಕನ ಶಿರಚ್ಛೇದನ ಮಾಡಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕಿತನನ್ನು ಗುಂಡು ಹಾರಿಸಿ ಪೊಲೀಸರು ಕೊಂದಿದ್ದರು. ಶಿಕ್ಷಕರ ಕೊಲೆಗೆ ಬೃಹತ್‌ ಜಾಲವನ್ನೇ ಉಗ್ರರು ಸೃಷ್ಟಿಸಿಕೊಂಡಿದ್ದರು. ಅಲ್ಲಾ ಹು ಅಕ್ಬರ್‌ ಅಂತ ಹೇಳುತ್ತಲೇ ಶಿಕ್ಷಕನ ಕತ್ತು ಸೀಳಿದ್ದರು.

ಶಾರೀಖ್‌ ಗೆ ಪ್ರಚೋದನೇ ನೀಡಿತ್ತಾ 2020ರ ಫ್ರಾನ್ಸ್‌ ಸರ್‌ ತನ್‌ ಸೆ ಜುದಾ..?
ಶಾರೀಖ್‌ ಸಂಚಿಗೆ ಪ್ರಚೋದನೆಯಾಯ್ತಾ ಫ್ರಾನ್ಸ್‌ ನ ಘಟನೆ ಎಂಬ ಅನುಮಾನಗಳು ಈಗ ಕಾಡುತ್ತಿವೆ. ಫ್ರಾನ್ಸ್‌ ಘಟನೆ ಬಳಿಕ ಶಾರೀಖ್‌ ನ ಮನಸ್ಥಿತಿ ಉಗ್ರ ರೂಪಕ್ಕೆ ತಾಳಿತ್ತು. ಹೇಗಾದರೂ ಮಾಡಿ ವಿಧ್ವಂಸಕ ಕೃತ್ಯವನ್ನ ನಡೆಸಬೇಕು ಎಂಬ ಮನಸ್ಥಿತಿ ಹೆಚ್ಚಾಗಿತ್ತು. ಪ್ರವಾದಿ ವಿರುದ್ದ ಉಗ್ರರ ಪ್ರತಿಕಾರದ ಸಂಚು ಶಾರೀಖ್‌ ನ ತಲೆ ತುಂಬಾ ತುಂಬಿ ಹೋಗಿತ್ತು. ಇದೇ ಫ್ರಾನ್ಸ್‌ ಘಟನೆಯಿಂದ ಪ್ರೇರೇಪಣೆಗೊಂಡು ಗೋಡೆ ಬರಹವನ್ನು ಸಹ ಗೀಚಿದ್ದರು.

ಇದನ್ನೂ ಓದಿ : Mangaluru auto blast: ಆಟೋ ಬ್ಲಾಸ್ಟ್ ಪ್ರಕರಣ : ನಾಳೆ ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ

ಇದನ್ನೂ ಓದಿ : Mangaluru blast update: ಹಿಂದೂ ವೇಷ ಧರಿಸಿ ಮಂಗಳೂರಿಗೆ ಬಂದಿದ್ದ ಶಾರೀಖ್‌ : ತನಿಖೆ ವೇಳೆ ಬಯಲಾಯ್ತು ಸ್ಪೋಟಕ ಮಾಹಿತಿ

ಗೋಡೆ ಬರಹದ ಪ್ರಕರಣದಲ್ಲಿ ಬಂಧನಕ್ಕೀಡಾಗಿ ಎಂಟು ತಿಂಗಳ ನಂತರ ಬಿಡುಗಡೆಯಾಗಿದ್ದ ಶಾರೀಖ್ ನಂತರ ಇತ್ತೀಚೆಗೆ ಶಿವಮೊಗ್ಗದ ಕೋಮು ಗಲಭೆಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿದ ಪ್ರಕರಣದಲ್ಲಿಯೂ ಕೂಡ ಭಾಗಿಯಾಗಿದ್ದ. ಅಲ್ಲದೇ ತುಂಗಾ ನದಿ ತೀರದಲ್ಲಿ ಬಾಂಬ್‌ ಬ್ಲಾಸ್ಟ್‌ ಟ್ರಯಲ್‌ ಮಾಡಿ ನಂತರ ಪೊಲೀಸರಿಂದ ತಲೆಮರಿಸಿಕೊಂಡಿದ್ದ. ಇದೀಗ ಮಂಗಳೂರಿನಲ್ಲಿ ಭಯಾನಕ ಕೃತ್ಯವನ್ನು ನಡೆಸಲು ಶಾರೀಖ್‌ ಸಂಚು ರೂಪಿಸಿದ್ದ. ಆದರೆ ಒಂದು ರೋಡ್‌ ಹಂಪ್‌ ನಿಂದಾಗಿ ನಡೆಯಬೇಕಿದ್ದ ದೊಡ್ಡ ಅನಾಹುತ ತಪ್ಪಿ ಹೋಗಿತ್ತು.

ಏನಿದು ಬಂಬ್‌ ಸ್ಫೋಟ ಪ್ರಕರಣ..?
ಶನಿವಾರ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಬೆಂಕಿ ಮತ್ತು ದಟ್ಟವಾದ ಹೊಗೆ ಉಂಟಾಗಿದ್ದು, ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಸುಟ್ಟ ಗಾಯಗಳಾಗಿವೆ. ಆಟೋ ಚಾಲಕನ ಹೇಳಿಕೆಯ ಪ್ರಕಾರ, ಪ್ರಯಾಣಿಕನ ಬ್ಯಾಗ್‌ನಲ್ಲಿ ಏನೋ ಬೆಂಕಿ ಕಾಣಿಸಿಕೊಂಡು ನಂತರ ವಾಹನಕ್ಕೆ ವ್ಯಾಪಿಸಿದೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ನಿಂತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಈ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

(Mangalore blast) Mangalore bomb blast case has shocked the entire state. Many authorities, including the police, are conducting intensive investigations into this case, and explosive information is coming out regarding the case. As the information comes out, the mindset of the fierce Shariq is revealed.

Comments are closed.