Fittness Healthy Tips : ನೀವು ತುಂಬಾ ಸಣ್ಣ ಇದ್ದೀರಾ ? ದಪ್ಪ ಆಗ್ಬೇಕಾ ? ಬಳಸಿ ಈ ಡ್ರಿಂಕ್‌

ಪ್ರತಿಯೊಬ್ಬರು ಸುಂದರವಾದ ಮೈಕಟ್ಟನ್ನು ಹೊಂದಲು ಬಯಸುತ್ತಾರೆ. ದಪ್ಪ ಇರುವವರು ಸಣ್ಣ ಆಗಲು (Fittness Healthy Tips) ಪ್ರಯತ್ನಿಸಿದ್ದರೆ, ಇನ್ನೂ ಸಣ್ಣ ಇರುವವರು ದಪ್ಪವಾಗಲು ಪ್ರಯತ್ನಿಸುತ್ತಾರೆ. ಕೆಲವರಿಗೆ ಸ್ವಲ್ಪ ಆಹಾರ ತಿಂದರೆ ಸಾಕು ಹೊಟ್ಟೆ ತುಂಬಿದ ಅನುಭವಾಗುತ್ತದೆ. ಇನ್ನೂ ಕೆಲವರಿಗೆ ಎಷ್ಟೂ ತಿಂದರೂ ದಪ್ಪ ಆಗುವುದಿಲ್ಲ.

ಹೆಚ್ಚಾಗಿ ದಪ್ಪ ಇರುವವರಿಗೆ ಸಣ್ಣ ಆಗುವ ವಿಚಾರವನ್ನು ತಿಳಿಸಿದ್ದಾರೆ. ಆದರೆ ಸಣ್ಣ ಇರುವವರಿಗೆ ದಪ್ಪ ಆಗುವ ವಿಚಾರವನ್ನು ಹಂಚಿಕೊಂಡಿರುವುದು ಕಡಿಮೆ. ಹಾಗಾಗಿ ಸಣ್ಣ ಇರುವವರು ಸುಲಭವಾಗಿ ಹಾಗೂ ನೈಸರ್ಗಿಕವಾಗಿ ದಪ್ಪ ಆಗಲು ಮನೆಯಲ್ಲಿಯೇ ಆರೋಗ್ಯಕರ ಡ್ರಿಂಕ್‌ ಮಾಡಿಕೊಳ್ಳಬಹುದು. ಇದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಖರ್ಜೂರ
  • ಬಾದಾಮಿ
  • ಗೋಡಂಬಿ
  • ಬಾಳೆಹಣ್ಣು
  • ಹಾಲು

ಮಾಡುವ ವಿಧಾನ :
ಹಿಂದಿನ ದಿನ ನೆನೆಸಿ ಇಟ್ಟ ಎರಡು ಖರ್ಜೂರ, ಎರಡು ಬಾದಾಮಿ, ಎರಡು ಗೋಡಂಬಿಯನ್ನು ನೀರು ಸಮೇತ ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ನಂತರ ಅದಕ್ಕೆ ಎರಡು ಬಾಳೆಹಣ್ಣು (ಏಲಕ್ಕಿ ಬಾಳೆಹಣ್ಣು ಇದ್ದಲ್ಲಿ ಒಳ್ಳೆಯದು)ಯನ್ನು ಸಣ್ಣ ಸಣ್ಣ ತುಂಡು ಮಾಡಿ ಹಾಕಿಕೊಳ್ಳಬೇಕು. ಆಮೇಲೆ ಮಿಕ್ಸಿ ಜಾರಿಗೆ ಮುಕ್ಕಾಲು ಲೋಟ ಹಾಲನ್ನು (ಬಿಸಿ ಮಾಡಿದ ಹಾಲನ್ನು ಬಳಸಬಹುದು) ಹಾಕಿ ರುಬ್ಬಿಕೊಳ್ಳಬೇಕು.

ಹೀಗೆ ರುಬ್ಬಿದ ಮಿಶ್ರಣವನ್ನು ಮಿಕ್ಸಿ ಜಾರಿನಿಂದ ಒಂದು ಲೋಟಕ್ಕೆ ಸೊಸಿಕೊಂಡರೆ ರುಚಿಯಾದ ಹೆಲ್ತ್‌ ಡ್ರಿಂಕ್‌ ಕುಡಿಯುವುದಕ್ಕೆ ಸಿದ್ಧವಾಗುತ್ತದೆ. ಈ ಡ್ರಿಂಕ್‌ನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೇ ದಪ್ಪವಾಗಬಹುದು. ಮಾರುಕಟ್ಟೆಯಲ್ಲಿ ಸಿಗುವ ಪೌಡರ್‌ಗಳನ್ನು ತಿಂದು ದುಷ್ಪಾರಿಣಾಮವನ್ನು ಎದುರಿಸುವ ಬದಲು ಇತಂಹ ಆರೋಗ್ಯಕರ ಡ್ರಿಂಕ್‌ಗಳನ್ನು ಮನೆಯಲ್ಲೇ ಮಾಡಿ ಕುಡಿಯುವುದರಿಂದ ಆರೋಗ್ಯಕರ ಮೈಕಟ್ಟನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ : Sanitary Pad : “ಸ್ಯಾನಿಟರಿ ಪ್ಯಾಡ್‌” ಬಳಸುವ ಹದಿಯರೆಯದ ಹೆಣ್ಣುಮಕ್ಕಳೇ ಹುಷಾರ್ ! ನಿಮ್ಮನ್ನು ಕಾಡಲಿದೆ ಕ್ಯಾನ್ಸರ್‌, ಬಂಜೆತನ

ಇದನ್ನೂ ಓದಿ : Ginger Health Tips:ಶುಂಠಿರಸದಿಂದ ಸೈನಸ್‌, ಮೈಗ್ರೇನ್‌ ನಿವಾರಣೆ

ಇದನ್ನೂ ಓದಿ : Chemical Free Shampoo:ರಾಸಾಯನಿಕ ಮುಕ್ತ ಶಾಂಪೂ ಮನೆಯಲ್ಲಿಯೇ ತಯಾರಿಸಿಕೊಳ್ಳಿ

ಇದನ್ನೂ ಓದಿ : Coffee Powder Face Mask :ಬಿಸಿಲಿಗೆ ಟ್ಯಾನ್‌ ಆಗುವ ಚಿಂತೆಯೇ ? ಕಾಫಿ ಪೌಡರ್‌ ಫೇಸ್‌ ಮಾಸ್ಕ್‌ ಮುಖಕ್ಕೆ ಹಚ್ಚಿ

ಈ ಹೆಲ್ತ್‌ ಡ್ರಿಂಕ್‌ ಕುಡಿಯುವುದರಿಂದ ಹೊಟ್ಟೆಯನ್ನು ತುಂಬಿಸುವುದಷ್ಟೇ ಅಲ್ಲದೇ ತುಂಬಾ ಸಮಯದವರಗೆ ಹಸಿವುವನ್ನು ಕೂಡ ನಿಯಂತ್ರಣದಲ್ಲಿ ಇಡುತ್ತದೆ. ಈ ಹೆಲ್ತ್‌ ಡ್ರಿಂಕ್‌ನ್ನು ಯಾರು ಬೇಕಾದರೂ ಕುಡಿಯಬಹುದಾಗಿದೆ. ಶಾಲೆ ಹೋಗುವ ಮಕ್ಕಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೋಗುವ ಬದಲು ಇದನ್ನು ಕುಡಿಯುವುದರಿಂದ ಬೆಳಗ್ಗಿನ ತಿಂಡಿ ಬದಲು ಹೊಟ್ಟೆಯನ್ನು ತುಂಬಿಸುತ್ತದೆ. ಹಾಗೆ ಈ ಡ್ರಿಂಕ್‌ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶವಿರುವ ಆಹಾರ ಕೂಡ ಆಗುತ್ತದೆ.

Fitness Healthy Tips : Are you too short? Want to get fat? Use this drink

Comments are closed.