Varaha Rupam song : ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ಧ್ವನಿಯಾದ ಜರ್ಮನ್‌ ಅಂಧ ಗಾಯಕಿ

ನಟ ರಿಷಬ್‌ ಶೆಟ್ಟಿ ಅಭಿನಯದ “ಕಾತಾಂರ” ಸಿನಿಮಾ ಸೌತ್‌ ಸಿನಿರಂಗದಲ್ಲೇ ಹೊಸ ಸಂಚಲನವನ್ನು (Varaha Rupam song) ಮೂಡಿಸಿದೆ. ಈ ಸಿನಿಮಾದ ಕಥೆಯಂತೆ ಎಲ್ಲಾ ಹಾಡುಗಳು ಕೂಡ ಸೂಪರ್‌ ಹಿಟ್‌ ಆಗಿದೆ. ಅದರಲ್ಲೂ ಈ ಸಿನಿಮಾದ ” ವರಾಹ ರೂಪಂ” ಹಾಡು ಸಖತ್ ವೈರಲ್‌ ಆಗಿತ್ತು. ಹಾಗೆ ಸಾಕಷ್ಟು ವಿವಾದಕ್ಕೂ ಗುರಿಯಾಗಿತ್ತು. ಇದೇ ಹಾಡನ್ನು ಜರ್ಮನ್‌ನ ಅಂಧ ಗಾಯಕಿ ಹಾಡಿದ್ದು, ಆಕೆ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಾಕವಾಗಿ ಸದ್ದು ಮಾಡುತ್ತಿದೆ.

ಕರಾವಳಿ ಸೊಗಡಿನ ಕಥಾಹಂದರವನ್ನು ಒಳಗೊಂಡ ಕಾಂತಾರ ಸಿನಿಮಾವು ದೇಶ ವಿದೇಶಗಳಲ್ಲಿ ಅಭಿಮಾನಿಗಳನ್ನು ರಂಜಿಸಿರುತ್ತದೆ. “ಕಾಂತಾರ” ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿಗಟ್ಟಲೇ ಕಲೆಕ್ಷನ್‌ ಮಾಡಿದ್ದು, ಈಗ 400ಕೋಟಿ ರೂಪಾಯಿ ಗಳಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಇನ್ನೂ ಈ ಸಿನಿಮಾದ “ಸಿಂಗಾರ ಸಿರಿಯೇ” ಹಾಗೂ “ವರಾಹ ರೂಪಂ” ಹಾಡುಗಳಿಗೆ ಅಭಿಮಾನಿಗಳು ಮಾರು ಹೋಗಿದ್ದಾರೆ. ಈ ಸಿನಿಮಾದ ಹಾಡುಗಳು ದೇಶದಾದ್ಯಂತ ಮಾತ್ರವಲ್ಲದೇ ವಿದೇಶಗಳಲ್ಲಿ ಕೂಡ ಅಭಿಮಾನಿಗಳ ಮನಗೆದ್ದಿದೆ. ಇದರಲ್ಲಿ ಜರ್ಮನ್‌ ಅಂಧ ಗಾಯಕಿ ಈ ಹಾಡನ್ನು ಇಷ್ಟಪಟ್ಟು ತಮ್ಮ ಕಂಠದಿಂದ ಅದ್ಭುತವಾಗಿ ಹಾಡಿದ್ದಾರೆ.

https://www.youtube.com/watch?v=DihK6wNhHXE

ಜರ್ಮನ್‌ ಖ್ಯಾತ ಗಾಯಕಿ ಕ್ಯಾಸ್ಮಾ ಆಗಾಗ ಬೇರೆ ಬೇರೆ ದೇಶದ ಹಾಡುಗಳನ್ನುಹಾಡುತ್ತಿರುತ್ತಾರೆ. ಹುಟ್ಟಿನಿಂದಲೇ ಅಂಧತ್ವದೊಂದಿಗೆ ಬಾಳುತ್ತಿರುವ ಗಾಯಕಿ ಕ್ಯಾಸ್ಮಾ ಕನ್ನಡ ಕಾಂತಾರ ಸಿನಿಮಾದ “ವರಾಹ ರೂಪಂ” ಹಾಡನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಶೇರ್‌ ಮಾಡಿಕೊಂಡ ವಿಡಿಯೋ ಈಗಾಗಲೇ ೮೫ ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.ಜರ್ಮನ್‌ ಅಂಧ ಗಾಯಕಿಯ ಬಾಯಲ್ಲೂ ಕನ್ನಡದ ಹಾಡನ್ನು ಕೇಳಿ ಕನ್ನಡಿಗರು ಫಿದಾ ಆಗಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಜರ್ಮನ್‌ ಅಂಧ ಗಾಯಕಿ ಹಾಡಿದ ಹಾಡು ಸಖತ್‌ ಸದ್ದು ಮಾಡುತ್ತಿದೆ.

ಇದನ್ನೂ ಓದಿ : Drishyam 2 Box Office : ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ದಾಖಲೆ ಬರೆಯುತ್ತಿದೆ ದೃಶ್ಯಂ 2

ಇದನ್ನೂ ಓದಿ : Aindrila Sharma no more: 20 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ನಟಿ ಐಂದ್ರಿಲಾ ಶರ್ಮಾ ಕೊನೆಯುಸಿರು

ಇದನ್ನೂ ಓದಿ : Amulya Jagdish couple : ತಿರುಪತಿ ತಿಮ್ಮಪ್ಪನಿಗೆ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್‌ ದಂಪತಿ

ಕಾಂತಾರ ಸಿನಿಮಾವು ಐವತ್ತು ದಿನಗಳನ್ನು ಪೂರೈಸಿ ಯಶಸ್ಸಿಯಾಗಿ ಮುನ್ನುಗ್ಗುತ್ತಿದ್ದು, ಈವರೆಗೂ 400ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕವೊಂದರಲ್ಲೇ 170 ಕೋಟಿಗೂ ಅಧಿಕ ಹಣ ಬಾಕ್ಸ್‌ ಆಫೀಸ್‌ಗೆ ಕಲೆಕ್ಷನ್‌ ಆಗಿದೆ ಎಂದು ಹೇಳಲಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ವಿದೇಶದಿಂದ ಬಂದ ಹಣವನ್ನು ಒಟ್ಟಾಗಿಸಿದರೆ ಸಿನಿಮಾದ ಒಟ್ಟು ಗಳಿಕೆ 400ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಡಿಮೆ ಬಜೆಟ್‌ನಲ್ಲಿ ತಯಾರಾದ ಸಿನಿಮಾ ಈ ಪ್ರಮಾಣದಲ್ಲಿ ಗಳಿಕೆ ಮಾಡಿರುವುದು ಒಂದು ರೀತಿಯ ದಾಖಲೆಯಾಗಿರುತ್ತದೆ.

A German blind singer who lent her voice to the song Varaha Rupam in the movie Kantara

Comments are closed.