ಕಿಶೋರ್ ಶೆಟ್ಟಿಯ ಮನೆಯಲ್ಲಿ ನಡೆದಿತ್ತು ಡ್ರಗ್ಸ್ ಪಾರ್ಟಿ : ಅಖಿಲ್ ನೌಶೀಲ್ ಸಾಥ್, ಖ್ಯಾತ ನಿರೂಪಕಿ ಪಾರ್ಟಿಯಲ್ಲಿ ಬಾಗಿ !

0

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಇದೀಗ ಕರಾವಳಿ ಮಂಗಳೂರಿಗೂ ಚಾಚಿದೆ.ಮಂಗಳೂರಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ಬಾಲಿವುಡ್ ನಟನೋರ್ವನನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂದಿತ ಕಿಶೋರ್ ಅಮನ್ ಶೆಟ್ಟಿ ಸಿಸಿಬಿ ಪೊಲೀಸರ ಮುಂದೆ ಮಹತ್ವದ ಮಾಹಿತಿಯನ್ನು ನೀಡಿದ್ದು, ನಿರೂಪಕಿಯೋರ್ವರು ಪಾರ್ಟಿಯಲ್ಲಿ ಭಾಗಿಯಾಗಿರೋದನ್ನು ಬಾಯ್ಬಿಟ್ಟಿದ್ದಾನೆ.

ಮಂಗಳೂರಿನಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬಂಧಿತನಾಗಿರುವ ಕಿಶೋರ್ ಶೆಟ್ಟಿ ತನ್ನ ಮನೆಯಲ್ಲಿಯೇ ಕೊಕೇನ್ ಪಾರ್ಟಿ ಆಯೋಜನೆ ಮಾಡಿದ್ದಾನೆ ಅನ್ನೋದು ಬಯಲಾಗಿದೆ. ಮಾತ್ರವಲ್ಲ ಕಿಶೋರ್ ಅಮನ್ ಶೆಟ್ಟಿ ಅಕೀಲ್ ನೌಶೀಲ್ ಎಂಬಾತ ಕೂಡ ಸಾಥ್ ಕೊಟ್ಟಿದ್ದು, ಪಾರ್ಟಿಯಲ್ಲಿ ಖ್ಯಾತ ನಟಿ ಕಂ ನಿರೂಪಕಿಯೂ ಭಾಗಿಯಾಗಿದ್ದಾಳೆ ಅನ್ನೋದು ಪತ್ತೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ಬಡತನದಲ್ಲಿ ಬೆಳೆದಿದ್ದ ಕಿಶೋರ್ ಶೆಟ್ಟಿ ಒಳ್ಳೆಯ ಡ್ಯಾನ್ಸರ್ ಆಗಿದ್ದ. ಡ್ಯಾನ್ಸಿಂಗ್ ಶೋ ಮೂಲಕವೇ ಬಾಲಿವುಡ್ ನಲ್ಲಿಯೂ ಅವಕಾಶವನ್ನು ಗಿಟ್ಟಿಸಿದ್ದ. ಬಾಲಿವುಡ್ ನ ಖ್ಯಾತ ಸಿನಿಮಾ ಎಬಿಸಿಡಿಯಲ್ಲಿಯೂ ನಟಿಸಿದ್ದ ಕಿಶೋರ್ ಅಮನ್ ಶೆಟ್ಟಿ, ಸಿನಿಮಾ ಆಫರ್ ಕಡಿಮೆಯಾಗುತ್ತಲೇ ಡ್ರಗ್ಸ್ ಸಪ್ಲೈ ಮಾಡುವ ದಂಧೆಯಲ್ಲಿ ಭಾಗಿಯಾಗಿದ್ದಾನೆ. ಬಾಲಿವುಡ್ ಲಿಂಕ್ ಬಳಸಿಕೊಂಡೇ ಕಿಶೋರ್ ಶೆಟ್ಟಿ ಪಾರ್ಟಿಯನ್ನು ಆಯೋಜನೆ ಮಾಡುತ್ತಿದ್ದ. ಮಂಗಳೂರು ನಗರದಲ್ಲಿರುವ ತನ್ನ ಮನೆಯಲ್ಲಿಯೇ ಕಿಶೋರ್ ಅಮನ್ ಶೆಟ್ಟಿ ಇತ್ತೀಚಿಗೆ 4 ರಿಂದ 5 ದಿನಗಳ ಕಾಲ ಕೊಕೇನ್ ಪಾರ್ಟಿ ಆಯೋಜಿಸಿದ್ದ ಅನ್ನುವ ಮಾಹಿತಿ ಲಭ್ಯವಾಗಿದೆ.

ಕಿಶೋರ್ ಶೆಟ್ಟಿ ಆಯೋಜಿಸಿದ್ದ ಪಾರ್ಟಿಯಲ್ಲಿ ಕನ್ನಡ ಸ್ಟಾರ್ ನಿರೂಪಕಿಯೋರ್ವರು ಭಾಗಿಯಾಗಿದ್ದಾರೆ. ನಟಿ ಕಂ ನಿರೂಪಕಿಗೆ ಡ್ರಗ್ಸ್ ಪಾರ್ಟಿ ಎಂಬ ಮಾಹಿತಿಯಿದ್ದೂ ಕೂಡ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ ಅಂತಾ ಕಿಶೋರ್ ಅಮನ್ ಶೆಟ್ಟಿಸಿಸಿಬಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಅಲ್ಲದೇ ಕಳೆದೈದು ವರ್ಷಗಳಿಂದಲೂ ಕಿಶೋರ್ ಅಮನ್ ಶೆಟ್ಟಿಜೊತೆಗೆ ನಟಿ ಕಂ ನಿರೂಪಕಿ ಸ್ನೇಹ ಹೊಂದಿದ್ದಾಳೆ. ಮಂಗಳೂರು ಮಾತ್ರವಲ್ಲದೇ ಮುಂಬೈ ಹಾಗೂ ವಿದೇಶಗಳಲ್ಲಿ ನಡೆದ ಪಾರ್ಟಿಯಲ್ಲಿಯೂ ಇಬ್ಬರು ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ.

ಇನ್ನು ಕಿಶೋರ್ ಶೆಟ್ಟಿ ನಡೆಸುತ್ತಿದ್ದ ಡ್ರಗ್ಸ್ ಪಾರ್ಟಿಗೆ ಅಕೀಲ್ ನೌಶೀಲ್ ಎಂಬಾತ ಕೂಡ ಸಾಥ್ ಕೊಟ್ಟಿದ್ದಾರೆ. ವಿದೇಶಗಳಲ್ಲಿ ಸೇಫ್ಟಿ ಆಫೀಸರ್ ಆಗಿದ್ದ ಅಖಿಲ್ ನೌಶೀಲ್ ಪಾರ್ಟಿಗಳಿಗೆ ಎಂಡಿಎಂಎ ಮಾತ್ರೆಗಳನ್ನು ಸಪ್ಲೈ ಮಾಡುತ್ತಿದ್ದ ಅನ್ನೋ ಮಾಹಿತಿಯನ್ನು ಕಿಶೋರ್ ಅಮನ್ ಶೆಟ್ಟಿ ಬಾಯ್ಬಿಟ್ಟಿದ್ದಾನೆ. ಕಿಶೋರ್ ಶೆಟ್ಟಿ ಬಂಧನದ ಬೆನ್ನಲ್ಲೇ ಇನ್ನಷ್ಟು ಮಂದಿಯ ಹೆಸರು ಬಹಿರಂಗವಾಗುವ ಸಾಧ್ಯತೆಯಿದೆ. ಮಂಗಳೂರಿನ ಯಾವೆಲ್ಲಾ ಕಡೆಗಳಲ್ಲಿ ಡ್ರಗ್ಸ್ ಪಾರ್ಟಿಯನ್ನು ಆಯೋಜನೆ ಮಾಡಲಾಗುತ್ತಿತ್ತು ಅನ್ನೋ ಕುರಿತು ಕೂಡ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆ ಹಾಕುತ್ತಿದ್ದಾರೆ.

Leave A Reply

Your email address will not be published.