Mangaluru auto blast: ಆಟೋ ಬ್ಲಾಸ್ಟ್ ಪ್ರಕರಣ : ನಾಳೆ ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ

ಮಂಗಳೂರು: (Mangaluru auto blast) ಮಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಳು ತೀವ್ರಗೊಳ್ಳುತ್ತಿದ್ದು, ನಾಳೆ ಮಂಗಳೂರಿನಲ್ಲಿ ಪ್ರಕರಣದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳ ಮಹತ್ವದ ಸಭೆಯನ್ನು ನಡೆಸಲಿದ್ದಾರೆ. ಮಂಗಳೂರಿಗೆ ಆಗಮಿಸಲಿರುವ ಆರಗ ಜ್ಞಾನೇಂದ್ರ ಅವರು ಸ್ಪೋಟದಲ್ಲಿ ಗಾಯಗೊಂಡ ಆಟೋ ಚಾಲಕನ್ನು ಕೂಡ ಭೇಟಿ ಮಾಡಲಿದ್ದಾರೆ.

ಮಂಗಳೂರು ಬಾಂಬ್‌ ಬ್ಲಾಸ್ಟ್‌(Mangaluru auto blast) ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್‌ ಸಿಗುತ್ತಿದ್ದು, ತನಿಖೆ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಉಗ್ರ ಶಾರೀಖ್‌ ನ ಹಿಂದಿರುವ ಜಾಡನ್ನು ಪತ್ತೆ ಹಚ್ಚಲು ಕರಾವಳಿ ಪೊಲೀಸ್‌ ತಂಡ ಹರಸಾಹಸ ನಡೆಸುತ್ತಿದೆ. ಈ ಪ್ರಕರಣದ ಕುರಿತು ನಾಳೆ ಮಂಗಳೂರಿನಲ್ಲಿ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಸಭೆಯ ನೇತ್ರತ್ವವನ್ನು ವಹಿಸಿಕೊಳ್ಳಲಿದ್ದಾರೆ.

ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡ ಆಟೋ ಚಾಲಕ ಪುರುಷೋತ್ತಮ್‌ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆಟೋ ಚಾಲಕನನ್ನು ಬೇಟಿ ಮಾಡಲಿದ್ದಾರೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯಲಿರುವ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ಡಿಜಿಪಿ ಪ್ರವೀಣ್‌ ಸೂದ್‌ ಹಾಗೂ ಎಜಿಡಿಪಿ ಅಲೋಕ್‌ ಕುಮಾರ್‌ ಕೂಡ ಭಾಗಿಯಾಗಲಿದ್ದಾರೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಬಾಂಬ್‌ ಸ್ಪೋಟ ಪ್ರಕರಣವನ್ನು ಭೇದಿಸುವ ಕುರಿತಾಗಿ ಚರ್ಚೆ ನಡೆಯಲಿದೆ.

ಇದನ್ನೂ ಓದಿ : Mangaluru blast update: ಹಿಂದೂ ವೇಷ ಧರಿಸಿ ಮಂಗಳೂರಿಗೆ ಬಂದಿದ್ದ ಶಾರೀಖ್‌ : ತನಿಖೆ ವೇಳೆ ಬಯಲಾಯ್ತು ಸ್ಪೋಟಕ ಮಾಹಿತಿ

ಇದನ್ನೂ ಓದಿ : Mangaluru bomb Blast case: ಕರಾವಳಿಯಲ್ಲಿ ಎನ್‍ಐಎ ಕೇಂದ್ರ: ಸಂಸದ ತೇಜಸ್ವಿ ಸೂರ್ಯ

ಇದನ್ನೂ ಓದಿ : Shraddha Walkar murder case : ನ್ಯಾಯಾಲಯಕ್ಕೆ ಅಫ್ತಾಬ್‌ನ ವಿಭಿನ್ನ ಹೇಳಿಕೆ : 4 ದಿನ ಪೊಲೀಸ್‌ ಕಸ್ಟಡಿ ವಿಸ್ತರಣೆ

ಏನಿದು ಬಂಬ್‌ ಸ್ಫೋಟ ಪ್ರಕರಣ..?
ಶನಿವಾರ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಬೆಂಕಿ ಮತ್ತು ದಟ್ಟವಾದ ಹೊಗೆ ಉಂಟಾಗಿದ್ದು, ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಸುಟ್ಟ ಗಾಯಗಳಾಗಿವೆ. ಆಟೋ ಚಾಲಕನ ಹೇಳಿಕೆಯ ಪ್ರಕಾರ, ಪ್ರಯಾಣಿಕನ ಬ್ಯಾಗ್‌ನಲ್ಲಿ ಏನೋ ಬೆಂಕಿ ಕಾಣಿಸಿಕೊಂಡು ನಂತರ ವಾಹನಕ್ಕೆ ವ್ಯಾಪಿಸಿದೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ನಿಂತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಈ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

(Mangaluru auto blast) Investigations are intensifying in connection with the Mangalore bomb blast case, Home Minister Araga Gyanendra will hold an important meeting of the officials regarding the case in Mangalore tomorrow. Araga Gyanendra, who will arrive in Mangalore, will also meet the auto driver who was injured in the blast.

Comments are closed.