Sukhant funeral: ಮುಂಬೈನಲ್ಲಿ ಹೀಗೊಂದು ‘ಸುಖಾಂತ’ ಸ್ಟಾರ್ಟ್ ಅಪ್; ದುಡ್ಡು ಕೊಟ್ಟರೆ ಅಂತ್ಯಸಂಸ್ಕಾರ ಕೂಡಾ ಮಾಡಿಕೊಡುತ್ತಂತೆ ಈ ಕಂಪೆನಿ

ಮುಂಬೈ; Sukhant funeral: ಹಣ ಕಂಡರೆ ಹೆಣ ಬಾಯಿ ಬಿಡುತ್ತೆ ಎಂಬ ಗಾದೆಮಾತೊಂದಿದೆ. ಆದರೆ ಮಹಾನಗರಿ ಮುಂಬೈನಲ್ಲಿ ಹಾಗಲ್ಲ. ನಿಮ್ಮ ಕೈಯಲ್ಲಿ ಹಣ ಇದ್ದರೆ ಹೆಣದ ಅಂತ್ಯಸಂಸ್ಕಾರನೇ ನಡೆದುಹೋಗುತ್ತೆ. ಇದಕ್ಕೆಂದೇ ಮುಂಬೈನಲ್ಲಿ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್ ಅಪ್ ಆಪ್ ಬಂದಿದೆಯಂತೆ. ಹಣ ಕೊಟ್ಟರೆ ಸಾಕು, ವಿಧಿವಿಧಾನವಾಗಿ ಅಂತ್ಯಸಂಸ್ಕಾರವನ್ನು ಮಾಡಿಕೊಡುತ್ತಂತೆ ಈ ಕಂಪೆನಿ.

ಇದನ್ನೂ ಓದಿ: Shraddha Walkar murder case : ನ್ಯಾಯಾಲಯಕ್ಕೆ ಅಫ್ತಾಬ್‌ನ ವಿಭಿನ್ನ ಹೇಳಿಕೆ : 4 ದಿನ ಪೊಲೀಸ್‌ ಕಸ್ಟಡಿ ವಿಸ್ತರಣೆ

ನಾಮಕರಣ, ಮದುವೆ ಸಮಾರಂಭ, ಹುಟ್ಟುಹಬ್ಬ, ಸೀಮಂತ ಮೊದಲಾದ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಹೆಗಲ ಮೇಲೆ ಹೊರಲಾಗದವರು ಇಂದು ಎಷ್ಟೋ ಮಂದಿ ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗಳ ಮೊರೆ ಹೋಗುತ್ತಾರೆ. ಅವರಿಗೆ ಅವರು ಕೇಳಿದಷ್ಟು ಹಣ ಕೊಟ್ಟರೆ ಸಾಕು, ಎಲ್ಲವನ್ನೂ ಅಚ್ಚುಕಟ್ಟಾಗಿ ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತಾರೆ. ಆದರೆ ಮುಂಬೈನಲ್ಲಿ ಅಂತ್ಯಸಂಸ್ಕಾರಕ್ಕೂ ಸಾರಥ್ಯ ವಹಿಸುವ ಸ್ಟಾರ್ಟ್ ಅಪ್ ಆರಂಭಗೊಂಡಿದೆ.

Sukhant Funeral MGMT PVT LMT ಎಂಬ ಹೆಸರಿನ ಕಂಪೆನಿಯು ದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಟ್ರೇಡ್ ಫೇರ್ ನಲ್ಲಿ ಕಾಣಿಸಿಕೊಂಡಿದೆ. ಇದನ್ನು ನೋಡಿದ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್ ನಲ್ಲಿ ಫೋಟೋ ಸಮೇತ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಕಂಡ ಟ್ವಿಟಿಗರು ಅಚ್ಚರಿಗೊಳಗಾಗಿದ್ದು, ಇಂಥ ಕಂಪೆನಿ ಕೂಡಾ ಇರಲು ಸಾಧ್ಯವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ಕೆಲವರು ಇಂಥ ಕಂಪೆನಿಯ ಅಗತ್ಯವಿತ್ತೇ..? ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು ಈಗಿನ ಜನತೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವಂಂತೆ ಕಾಣುತ್ತಾರೆ. ಆದರೆ ನೈಜ ಬದುಕಿನಲ್ಲಿ ವಾದ, ಜಗಳಗಳಿಂದ ಮುಕ್ತವಾಗಿ ಅಂತಿಮ ಯಾತ್ರೆಯನ್ನಾದರೂ ಗೌರವದಿಂದ ಪೂರೈಸಲಿ ಬಿಡಿ ಎಂದಿದ್ದಾರೆ. ಇನ್ನೂ ಹೆಚ್ಚಿನ ಕಾಮೆಂಟ್ ಗಳು ಹೆಚ್ಚುತ್ತಿರುವ ಜನಸಂಖ್ಯೆ, ಪಾಶ್ಚಾತ್ಯ ಸಂಸ್ಕøತಿಯ ಪ್ರಭಾವ, ನಿರುದ್ಯೋಗ, ಕೆಲಸದ ನಿಮಿತ್ತ ವಲಸೆ, ಮಾಹಿತಿ ತಂತ್ರಜ್ಞಾನದ ಪ್ರಭಾವ, ಪೀಳಿಗೆಗಳ ಅಂತರ ಮುಂತಾದ ವಿಷಯಗಳ ಬಗ್ಗೆ ಚರ್ಚೆಗಳು ನಡೆದಿವೆ.

ಇದನ್ನೂ ಓದಿ: Mangaluru blast update: ಹಿಂದೂ ವೇಷ ಧರಿಸಿ ಮಂಗಳೂರಿಗೆ ಬಂದಿದ್ದ ಶಾರೀಖ್‌ : ತನಿಖೆ ವೇಳೆ ಬಯಲಾಯ್ತು ಸ್ಪೋಟಕ ಮಾಹಿತಿ

ಅಂದಹಾಗೆ ಈ ಕಂಪೆನಿಯ ಸದಸ್ಯತ್ವ ಶುಲ್ಕ 37,500 ರೂ. ಅಂತೆ. ಮನುಷ್ಯನ ಅಂತಿಮಯಾತ್ರೆಯು ಗೌರವದಿಂದ ಕೂಡಿರಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಈ ಕಂಪೆನಿ ಸ್ಥಾಪಿಸಲಾಗಿದೆಯಂತೆ. ಅಂತಿಮ ಸಂಸ್ಕಾರಕ್ಕೂ ಮುನ್ನ ನಡೆಯುವ ವಿಧಿ ವಿಧಾನಗಳು, ಅಂತ್ಯಸಂಸ್ಕಾರ ಮತ್ತು ಶೃದ್ಧಾಂಜಲಿ ಕಾರ್ಯಕ್ರಮವನ್ನು ಈ ಕಂಪೆನಿ ಆಯೋಜಿಸುತ್ತದೆ.

Sukhant funeral: Start-up company in Mumbai providing funeral services goes viral

Comments are closed.