Mangaluru blast FSL Report: ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಬೆಚ್ಚಿಬೀಳಿಸಿದ ಎಫ್‌ಎಸ್‌ಎಲ್‌ ವರದಿ

ಮಂಗಳೂರು: (Mangaluru blast FSL Report) ಮಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ್ಕೆ ಬಿಗ್‌ ಟ್ವಿಸ್ಟ್‌ ದೊರೆತಿದೆ. ಶನಿವಾರ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಬೆಂಕಿ ಮತ್ತು ದಟ್ಟವಾದ ಹೊಗೆ ಉಂಟಾಗಿದ್ದು, ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಸುಟ್ಟ ಗಾಯಗಳಾಗಿತ್ತು. ಇದೀಗ ಈ ಪ್ರಕರಣದ ಕುರಿತು ಎಫ್‌ಎಸ್‌ಎಲ್‌ನ ಪ್ರಾಥಮಿಕ ವರದಿ ಭಯಾನಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದೆ.

ಶಾರೀಖ್‌ ಬಾಂಬ್‌ ಸ್ಫೋಟ (Mangaluru blast FSL Report)ಕ್ಕೆ ಮೊದಲೇ ತಯಾರಿ ಮಾಡಿಕೊಂಡಿದ್ದ. ಬಾಂಬ್‌ ಬ್ಲಾಸ್ಟ್‌ ಗೆಂದು ಮೂರು ಕುಕ್ಕರ್‌ ಅನ್ನು ಸಹ ಖರೀದಿ ಕೂಡ ಮಾಡಿದ್ದ. ಮೈಸೂರಿನಲ್ಲಿ ಮೂರು ಕುಕ್ಕರ್‌ ಖರೀದಿ ಮಾಡಿದ್ದ.ಆದರೆ ಒಂದು ಕುಕ್ಕರ್‌ ಬಳಸಿ ಬಾಂಬ್‌ ತಯಾರಿಸಿದ್ದ. ಮೂರು ಕುಕ್ಕರ್‌ ನಲ್ಲಿ ಒಂದು ಕುಕ್ಕರ್‌ನಲ್ಲಿ ಬಾಂಬ್‌ ತಯಾರಿಸಿ ಅದನ್ನು ಮಾತ್ರ ಮಂಗಳೂರಿಗೆ ತಂದಿದ್ದ.

ಎಫ್‌ಎಸ್‌ಎಲ್‌ ವರದಿ ಬಿಚ್ಚಿಟ್ಟಿದೆ ಭಯಾನಕ ಸತ್ಯ..!
ಬಾಂಬ್‌ ಸ್ಫೋಟವಾದ ದಿನದಂದು ಆಟೋದಲ್ಲಿ ಸಿಕ್ಕ ವಸ್ತುಗಳನ್ನು ಎಫ್‌ಎಸ್‌ಎಲ್‌ ತನಿಖೆಗೆ ಕಳುಹಿಸಲಾಗಿದ್ದು, ಇದೀಗ ಅದರ ಕುರಿತಾಗಿ ಎಫ್‌ಎಸ್‌ಎಲ್‌ ಪ್ರಾಥಮಿಕ ವರದಿ ಭಯಾನಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದೆ. ಎಫ್‌ಎಸ್‌ಎಲ್‌ ವರದಿಯ ಪ್ರಕಾರ ಶಾರೀಖ್‌ ತಯಾರಿಸಿದ ಕುಕ್ಕರ್‌ ತುಂಬಾ ಪವರ್ ಫುಲ್‌ ಆಗಿತ್ತು. ಇಡೀ ಬಸ್‌ ಸ್ಫೋಟಿಸುವ ಸಾಮರ್ಥ್ಯವನ್ನು ಈ ಬಾಂಬ್‌ ಹೊಂದಿತ್ತು. ಮೂರು ಲೀಟರ್‌ ಕುಕ್ಕರ್‌ನ ತುಂಬಾ ಸ್ಫೋಟಕ್‌ ಜೆಲ್‌ ತುಂಬಿದ್ದು, ಫ್ಲಸ್‌, ಮೈನಸ್‌ ಕನೆಕ್ಟ್‌ ಆಗದೇ ಇದ್ದಿದ್ದರ ಪರಿಣಾಮ ಶಾರ್ಟ್‌ ಸರ್ಕ್ಯೂಟ್‌ ಆಗಿತ್ತು . ಶಾರ್ಟ್‌ ಸರ್ಕ್ಯೂಟ್‌ ಆದಾಗ ಕುಕ್ಕರ್‌ ನಲ್ಲಿದ್ದ ಜೆಲ್‌ ಗೆ ಬೆಂಕಿ ತಗುಲಿ ಬ್ಲಾಸ್ಟ್‌ ಅಗಿದ್ದು, ದಟ್ಟ ಹೊಗೆ ಆವರಿಸಿದೆ. ಕುಕ್ಕರ್‌ ಜೊತೆಗೆ ಡಿನೋನೇಟರ್‌ ಕೂಡ ಇದ್ದಿದ್ದು,ಅದಕ್ಕೆ ಪವರ್‌ ಹೋಗಿರಲಿಲ್ಲ. ಒಂದು ವೇಳೆ ಡಿನೋನೇಟರ್‌ ಗೆ ಪವರ್‌ ಹೋಗಿ ಬೆಂಕಿ ತಗುಲಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಆತ ಅಂದುಕೊಂಡಂತೆ ಸ್ಫೋಟವೇನಾದರೂ ನಡೆದಿದ್ದರೆ ಇಡೀ ಕರಾವಳಿಯಲ್ಲಿ ರಕ್ತದೋಕುಳಿ ತಾಂಡವ ಆಡುತ್ತಿತ್ತು.

ಇದನ್ನೂ ಓದಿ : Mangalore blast: ಫ್ರಾನ್ಸ್‌ ಸ್ಪೂರ್ತಿ… ಮಂಗಳೂರಿನಲ್ಲಿ ಟ್ರಯಲ್‌..!

ಇದನ್ನೂ ಓದಿ : Mangaluru auto blast: ಆಟೋ ಬ್ಲಾಸ್ಟ್ ಪ್ರಕರಣ : ನಾಳೆ ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ

ಏನಿದು ಬಾಂಬ್‌ ಸ್ಫೋಟ ಪ್ರಕರಣ..?
ಶನಿವಾರ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಬೆಂಕಿ ಮತ್ತು ದಟ್ಟವಾದ ಹೊಗೆ ಉಂಟಾಗಿದ್ದು, ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಸುಟ್ಟ ಗಾಯಗಳಾಗಿವೆ. ಆಟೋ ಚಾಲಕನ ಹೇಳಿಕೆಯ ಪ್ರಕಾರ, ಪ್ರಯಾಣಿಕನ ಬ್ಯಾಗ್‌ನಲ್ಲಿ ಏನೋ ಬೆಂಕಿ ಕಾಣಿಸಿಕೊಂಡು ನಂತರ ವಾಹನಕ್ಕೆ ವ್ಯಾಪಿಸಿದೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ನಿಂತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಈ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

(Mangaluru blast FSL Report) In connection with the Mangaluru bomb blast case, the explosion has got a big twist. On Saturday, a moving autorickshaw exploded, causing fire and thick smoke, leaving both the driver and the passenger with burn injuries. Now the FSL’s preliminary report on this case has revealed some shocking information.

Comments are closed.