NIMHANS Recruitment 2022 : ನಿಮ್ಹಾನ್ಸ್‌ನ ಕೌನ್ಸಿಲರ್ ಹಾಗೂ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (NIMHANS)ನಲ್ಲಿ ಖಾಲಿ ಇರುವ ಕೌನ್ಸೆಲರ್ ಹಾಗೂ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಹುದ್ದೆಗಳಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು (NIMHANS Recruitment 2022) ಆಹ್ವಾನಿಸಿದೆ. ಬೆಂಗಳೂರು ಹಾಗೂ ಧಾರವಾಡದ ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್‌ 07, 2022ರ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ನಿಮ್ಹಾನ್ಸ್‌ (NIMHANS)ನಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್)
ಹುದ್ದೆಗಳ ಸಂಖ್ಯೆ : 34 ಹುದ್ದೆಗಳು
ಉದ್ಯೋಗ ಸ್ಥಳ : ಬೆಂಗಳೂರು-ಧಾರವಾಡ
ಹುದ್ದೆಯ ಹೆಸರು : ಕೌನ್ಸಿಲರ್, ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್
ವೇತನ : ರೂ.25000-110000/- ಪ್ರತಿ ತಿಂಗಳು

ನಿಮ್ಹಾನ್ಸ್‌ (NIMHANS)ನಲ್ಲಿ ಖಾಲಿ ಇರುವ ಹುದ್ದೆಗಳ ಹೆಸರು ಹಾಗೂ ಸಂಖ್ಯೆಯ ವಿವರ :
ಹಿರಿಯ ಸಲಹೆಗಾರ ಮನೋವೈದ್ಯರು : 2 ಹುದ್ದೆಗಳು
ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ : 4 ಹುದ್ದೆಗಳು
ಕ್ಲಿನಿಕಲ್ ಸೈಕಾಲಜಿಸ್ಟ್ / ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ : 6 ಹುದ್ದೆಗಳು
ಸಲಹೆಗಾರ : 20 ಹುದ್ದೆಗಳು
ತಾಂತ್ರಿಕ ಸಂಯೋಜಕರು/ಪ್ರಾಜೆಕ್ಟ್ ಸಂಯೋಜಕರು : 2 ಹುದ್ದೆಗಳು

ನಿಮ್ಹಾನ್ಸ್‌ (NIMHANS)ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಹುದ್ದೆವಾರು ವಿದ್ಯಾರ್ಹತೆ ವಿವರ :
ಹಿರಿಯ ಸಲಹೆಗಾರ ಮನೋವೈದ್ಯ : ಎಮ್‌. ಡಿ, ಡಿ.ಎನ್.ಬಿ
ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ : ಎಮ್‌.ಡಿ, ಡಿ.ಎನ್.ಬಿ, ಡಿ.ಪಿ.ಎಮ್
ಕ್ಲಿನಿಕಲ್ ಸೈಕಾಲಜಿಸ್ಟ್/ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ : ಎಂ.ಫಿಲ್
ಸಲಹೆಗಾರ : ಎಮ್.‌ ಎ, ಎಮ್‌.ಎಸ್‌.ಸಿ, ಎಮ್‌.ಎಸ್‌.ಡ್ಲೂ
ತಾಂತ್ರಿಕ ಸಂಯೋಜಕರು/ಪ್ರಾಜೆಕ್ಟ್ ಸಂಯೋಜಕರು : ಡಿಪ್ಲೊಮಾ, ಬಿ.ಇ ಅಥವಾ ಬಿ.ಟೆಕ್, ಎಮ್.‌ಸಿ.ಎ
ಮೇಲೆ ತಿಳಿಸಿದ ಎಲ್ಲಾ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಉತ್ತೀರ್ಣರಾಗಿರಬೇಕು.

ನಿಮ್ಹಾನ್ಸ್‌ (NIMHANS)ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಹುದ್ದೆವಾರು ವಯೋಮಿತಿ ವಿವರ :
ಹಿರಿಯ ಸಲಹೆಗಾರ ಮನೋವೈದ್ಯ : 50ವರ್ಷ
ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ : 40ವರ್ಷ
ಕ್ಲಿನಿಕಲ್ ಸೈಕಾಲಜಿಸ್ಟ್/ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ : 40ವರ್ಷ
ಸಲಹೆಗಾರ : 35ವರ್ಷ
ತಾಂತ್ರಿಕ ಸಂಯೋಜಕರು/ಪ್ರಾಜೆಕ್ಟ್ ಸಂಯೋಜಕರು : 35ವರ್ಷ

ವಯೋಮಿತಿ ಸಡಿಲಿಕೆ:
ನಿಮ್ಹಾನ್ಸ್‌ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆಯನ್ನು ಸಂಸ್ಥೆಯ ಪ್ರಕಾರ ಮಾಡಲಾಗುತ್ತದೆ.

ಅರ್ಜಿ ಶುಲ್ಕ:
ನಿಮ್ಹಾನ್ಸ್‌ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ:
ನಿಮ್ಹಾನ್ಸ್‌ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ನಿಮ್ಹಾನ್ಸ್‌ (NIMHANS)ನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ಸಂಬಳದ ವಿವರ :
ಹಿರಿಯ ಸಲಹೆಗಾರ ಮನೋವೈದ್ಯರು : ರೂ.110000/-
ಸಲಹೆಗಾರ ಮನೋವೈದ್ಯ : ರೂ.80000/-
ಕ್ಲಿನಿಕಲ್ ಸೈಕಾಲಜಿಸ್ಟ್/ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ : ರೂ.40000/-
ಸಲಹೆಗಾರ : ರೂ.25000/-
ತಾಂತ್ರಿಕ ಸಂಯೋಜಕರು/ಯೋಜನಾ ಸಂಯೋಜಕರು : ರೂ.40000/-

ನಿಮ್ಹಾನ್ಸ್‌ (NIMHANS)ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :
ನಿಮ್ಹಾನ್ಸ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ,ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ) ಡಿಸೆಂಬರ್‌ 07, 2022ರ ಮೊದಲು ನಿಮ್ಹಾನ್ಸ್‌ನ ಅಧಿಕೃತ ವೆಬ್‌ಸೈಟ್ ಆದ nimhans.ac.in ನ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.

ಇದನ್ನೂ ಓದಿ : Police Constable Posts : ಪೊಲೀಸ್‌ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನ

ಇದನ್ನೂ ಓದಿ : Job Opportunity:ಪಿಹೆಚ್‌ಡಿ ಪೂರ್ಣಗೊಳಿಸಿದವರಿಗೆ ಇಲ್ಲಿದೆ ಉದ್ಯೋಗಾವಕಾಶ

ಇದನ್ನೂ ಓದಿ : Govt job opportunity:ಡಿಪ್ಲೊಮಾ ಪೂರ್ಣಗೊಳಿಸಿದವರಿಗೆ ಸರಕಾರಿ ಹುದ್ದೆಯ ಅವಕಾಶ

ಪ್ರಮುಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16-11-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-12-2022

NIMHANS Recruitment 2022 : Application Invitation for Counselor and Consultant Psychiatrist Posts of NIMHANS

Comments are closed.