Udupi News : ಉಡುಪಿ: ಮಣಿಪಾಲ (Manipal) ದ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುವ ಸಲುವಾಗಿ ಅಪಾರ್ಟ್‌ಮೆಂಟ್ ವೊಂದರಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟ ಆರೋಪದ ಹಿನ್ನೆಲೆಯಲ್ಲಿ ಕೇರಳ ಮೂಲದ ವಿದ್ಯಾರ್ಥಿ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಕೇರಳದ ತಿರುವನಂತಪುರ ಮೂಲದ ವಿದ್ಯಾರ್ಥಿ ಸಿದ್ದಾರ್ಥ್ (22 ವರ್ಷ) ಎಂಬಾತನೇ ಬಂಧಿತ ಆರೋಪಿ. ಉಡುಪಿ ತಾಲೂಕಿನ ಹೆರ್ಗ ಗ್ರಾಮದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ 388 ಗ್ರಾಂ ಗಾಂಜಾ, 45 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್‌ನನ್ನು ಜಪ್ತಿ ಮಾಡಲಾಗಿದೆ.

ಜೂನ್ 5 ರಂದು ಸಂಜೆ 5 ಗಂಟೆಯ ಸುಮಾರಿಗೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ ನೇತೃತ್ವದಲ್ಲಿ ಪತ್ರಾಂಕಿತ ಅಧಿಕಾರಿ, ಉಡುಪಿ ತಾಲೂಕು ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಶಂಕರ ಹಾಗೂ ಮಣಿಪಾಲ ಠಾಣಾ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ, ಎಎಸ್‌ಐ ವಿವೇಕಾನಂದ, ಎಎಸ್‌ಐ ಶೈಲೇಶ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಸುಕುಮಾರ, ಅರುಣ ಕುಮಾರ್, ಚನ್ನೇಶ್, ಮಂಜುನಾಥ ಅವರನ್ನೊಳಗೊಂಡ ತಂಡ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿತ್ತು.
ಇದನ್ನೂ ಓದಿ : School Bus Accident ಉಡುಪಿ: ಶಾಲಾ ಬಸ್ ಚಾಲಕನಿಗೆ ಬಸ್ ಚಾಲನೆ ವೇಳೆ ಹೃದಯಾಘಾತ : ಚಾಲಕನ ಸಮಯ ಪ್ರಜ್ಷೆಯಿಂದ ವಿದ್ಯಾರ್ಥಿಗಳು ಪಾರು
ಈ ವೇಳೆಯಲ್ಲಿ ಆತ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ ಗಾಂಜಾವನ್ನು ಶೇಖರಣೆ ಮಾಡಿಟ್ಟಿರುವುದು ಬೆಳಕಿಗೆ ಬಂದಿದೆ. ರೂಮ್‌ನಲ್ಲಿದ್ದ ಸಿದ್ದಾರ್ಥ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಗಾಂಜಾವನ್ನು ಈ ವಿದ್ಯಾರ್ಥಿ ಶೇಖರಿಸಿ ಇಟ್ಟಿರುವುದು ತನಿಖೆಯಿಂದ ಕಂಡು ಬಂದಿದೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಮಣಿಪಾಲ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ನವಯುಗ ಟೋಲ್ ಹಗಲು ದರೋಡೆ: ಸರ್ವೀಸ್ ರೋಡ್ ನಲ್ಲೂ ಶುಲ್ಕ ಪಡಿತೀರೋ ಆರೋಪ
ಅಕ್ರಮ ಮದ್ಯ ಮಾರಾಟ ಆರೋಪಿಗಳು ಅರೆಸ್ಟ್
ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ದಶರಥ ನಗರ ಎಂಬಲ್ಲಿ ವಿಜಯ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಹಿಂಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳು ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರಜಾಕ್ (26 ವರ್ಷ), ಮುದುಕಪ್ಪ(39 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ.ಅಬ್ದುಲ್ ರಜಾಕ್ ನ ಬಳಿ ಮದ್ಯ ತುಂಬಿದ 60 ಟೆಟ್ರಾ ಪ್ಯಾಕೇಟ್ ಹಾಗೂ ಮುದುಕಪ್ಪ ನ ಬಳಿ ಮದ್ಯ ತುಂಬಿದ 15 ಟೆಟ್ರಾ ಪ್ಯಾಕೇಟ್‌ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : KMF Energy Drinks : ಕೆಎಂಎಫ್ ಎನರ್ಜಿ ಡ್ರಿಂಕ್ಸ್ ಮಾರುಕಟ್ಟೆಗೆ : ರಾಜ್ಯದ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ
Manipal Selling ganja to students, Accused arrested