27 ಮಹಿಳೆಯರೊಂದಿಗೆ ಮದುವೆಯಾಗಿದ್ದ ಭೂಪನಿಗೆ ಇಡಿ ಕಂಟಕ

ಒಡಿಶಾ : (Marriage with 27 women) ದೇಶದ ಹತ್ತು ರಾಜ್ಯಗಳಲ್ಲಿ ವ್ಯಕ್ತಿಯೋರ್ವ 27 ಮಹಿಳೆಯರೊಂದಿಗೆ ಮದುವೆಯಾದ ಭೂಪನಿಗೆ ಇದೀಗ ಇಡಿ ಸಂಕಷ್ಟ ಎದುರಾಗಿದೆ. ಈತ ಮದುವೆಯಾಗಿರುವ ಮಹಿಳೆಯರಿಗೆ ಕೋಟ್ಯಾಂತರ ರೂ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಒಡಿಶಾ ಮೂಲಕ ರಮೇಶ್‌ ಸ್ಪೈನ್‌ ಎಂಬಾತನ ವಿರುದ್ದ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲು ಮಾಡಿದೆ.

ಒಂದು ಮದುವೆ, ಎರಡು ಮದುವೆ ಆಗೋದು ಸಾಮಾನ್ಯ. ಆದರೆ ಈ ಆಸಾಮಿ ಬರೋಬ್ಬರಿ 27 ಮಹಿಳೆಯರನ್ನು ಮದುವೆಯಾಗಿದ್ದಾನೆ. ಅಷ್ಟು ಮಹಿಳೆಯರನ್ನು ಮದುವೆಯಾಗಿದ್ದಲ್ಲದೇ ಅವರನ್ನು ವಂಚಿಸಿದ್ದಾನೆ ಕೂಡ. ಹೌದು ದೇಶದ ಹತ್ತು ಬೇರೆ ಬೇರೆ ರಾಜ್ಯಗಳಲ್ಲಿನ 27 ಮಹಿಳೆಯರೊಂದಿಗೆ ಮದುವೆಯಾಗಿ ನಂತರ ಅವರೊಂದಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾನೆ. ಇದಷ್ಟೇ ಅಲ್ಲದೇ ಬ್ಯಾಂಕ್‌ ಗಳಲ್ಲಿ ಕೂಡ ಕೋಟ್ಯಾಂತರ ರೂಪಾಯಿ ವಂಚಿಸಿ ಬಂದಿಯಾಗಿದ್ದು ಇದೀಗ ಆತನಿಗೆ ಇಡಿ ಕಂಟಕ ಪ್ರಾರಂಭವಾಗಿದೆ.

2011 ರಲ್ಲಿ ಬಿಭು ಪ್ರಕಾಶ್‌ ಸ್ವೈನ್‌ ಎನ್ನುವಾತ ಹೈದರಾಬಾದ್‌ ನ ಜನರಲ್ಲಿ ತಮ್ಮ ಮಕ್ಕಳಿಗೆ ಎಂಬಿಬಿಎಸ್‌ ಸೀಟು ನೀಡುವುದಾಗಿ ಭರವಸೆ ನೀಡಿ ಎರಡು ಕೋಟಿ ರೂ ವಂಚನೆ ಮಾಡಿದ್ದ. ಇದಕ್ಕೂ ಮೊದಲು ಅಂದರೆ 2006 ರಲ್ಲಿ ಕೇರಳದ 13 ಬ್ಯಾಂಕ್‌ ಗಳಿಗೆ 128 ನಕಲಿ ಕ್ರೆಡಿಟ್‌ ಕಾರ್ಡ್‌ ಗಳ ಮೂಲಕವಾಗಿ ಎರಡು ಕೋಟಿ ರೂಪಾಯಿ ವಂಚಿಸಿದ್ದಾನೆ . ಈ ಎಲ್ಲಾ ಆರೋಪಗಳ ಮೇಲೆ ಸ್ವೈನ್‌ ಅನ್ನು ಬಂಧಿಸಲಾಗಿತ್ತು. ಈ ವಿಚಾರವಾಗಿ ಆರೋಪಿ ಸ್ವೈನ್‌ ಪತ್ನಿಯರಲ್ಲಿ ಒಬ್ಬರಾದ ಡಾ.ಕಮಲಾ ಸೇಥಿ ಹಾಗೂ ಅವರ ಮಲತಂಗಿ ಮತ್ತು ಚಾಲಕನನ್ನು ಬಂಧಿಸಲಾಗಿತ್ತು. ನಂತರದಲ್ಲಿ ಇವರಿಗೆ ಒರಿಸ್ಸಾದ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ : Mangaluru Crime : ಕೋಳಿ ಸಾರಿನ ವಿಚಾರಕ್ಕೆ ಮಗನನ್ನೇ ಕೊಂದ ತಂದೆ

ಎಂಟು ತಿಂಗಳ ಕಾಲ ಆತನ ಮೇಕೆ ಒಡಿಶಾ ಪೊಲೀಸರು ನಿಗಾ ಇರಿಸಿದ್ದು, ಫೆ. 13 ರಂದು ಮತ್ತೆ ಸ್ವೈನ್‌ ಅವರನ್ನು ಬಂಧಿಸಿದೆ. ಆತ ಮದುವೆಯಾಗಿದ್ದ 27 ಮಂದಿ ಮಹಿಳೆಯರಲ್ಲಿ ಒಬ್ಬರು ಇಂಡೋ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ ಸಹಾಯಕ ಕಾಮಾಂಡೆಂಟ್‌, ಛತ್ತೀಸ್‌ಗಢದ ಅಕೌಂಟೆಂಟ್‌, ಅಸ್ಸಾಂ ನ ವೈದ್ಯರು, ಇಬ್ಬರು ಸುಪ್ರೀಂ ಕೋರ್ಟ್‌ ಮತ್ತು ದೆಹಲಿ ಹೈಕೋರ್ಟ್‌ ವಕೀಲರು ಮತ್ತು ಕೇರಳ ಆಡಳಿತ ಅಧಿಕಾರಿಯೂ ಸೇರಿದ್ದಾರೆ.

Marriage with 27 women: ED thorn for one who was married to 27 women

Comments are closed.