Metro pillar collapse: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ: ಇಬ್ಬರಿಗೆ ಗಂಭೀರ ಗಾಯ

ಬೆಂಗಳೂರು: (Metro pillar collapse) ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್‌ ಕುಸಿತವಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹೆಣ್ಣೂರು ಕ್ರಾಸ್‌ ಬಳಿಯಲ್ಲಿ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಹೆಣ್ಣೂರು ಕ್ರಾಸ್‌ ಬಳಿ ಸಿಲ್ಕ್ ಬೋರ್ಡ್ ನಿಂದ ಏರ್ಪೋರ್ಟ್ ಗೆ ನಿರ್ಮಾಣ ಹಂತದ ಮೇಟ್ರೊ ಕಾಮಗಾರಿ ನಡೆಯುತ್ತಿತ್ತು. ಈ ಸಮಯದಲ್ಲಿ ಕಬ್ಬಿಣದ ರಾಡ್ ನ ನಿರ್ಮಾಣ ಹಂತದ ಪಿಲ್ಲರ್ ಓವರ್‌ ಲೋಡ್‌ ಆಗಿ ಕುಸಿತ (Metro pillar collapse) ಗೊಂಡಿದೆ. ಕಬ್ಬಿಣದ ಪಿಲ್ಲರಗೆ ಓವರ್ ಲೋಡ್ ಆಗಿದ್ದರಿಂದ ಅದಕ್ಕೆ ನೀಡಿದ ಸಪೋರ್ಟ್ ವೀಕ್ ಆಗಿತ್ತು. ಈ ಹಿನ್ನಲೆಯಲ್ಲಿ ಏಕಾ ಏಕಿ ಪಿಲ್ಲರ್‌ ಕುಸಿದು ಹೆಣ್ಣೂರು ರಸ್ತೆಯ ಮೇಲೆ ಬಿದ್ದಿದೆ.

ಇದೇ ವೇಳೆ ಹೆಣ್ಣೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕುಟುಂಬದ ಮೇಲೆ ಪಿಲ್ಲರ್ ಬಿದ್ದಿದೆ. ಬೈಕ್‌ ನಲ್ಲಿ ಸಂಚರಿಸುತ್ತಿದ್ದ ತೇಜಸ್ವಿನಿ ಹಾಗೂ ಎರಡೂವರೆ ವರ್ಷದ ಮಗು ವಿಹಾನ್‌ ಗೆ ಪಿಲ್ಲರ್‌ ತಗುಲಿದೆ. ಇದರಿಂದಾಗಿ ತಾಯಿ ಮಗು ಇಬ್ಬರು ಗಂಭೀವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಆರ್.ಪುರಂ ನಿಂದ ಹೆಬ್ಬಾಳಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ . ಸ್ಥಳೀಯರು ಗಾಯಾಳುಗಳನ್ನು ಕೂಡಲೇ ಪಕ್ಕದ ಆಲ್ಟಿಸ್‌ ಹಾಸ್ಪಿಟಲ್‌ ಗೆ ದಾಖಲಿಸಿದ್ದು, ತಾಯಿ ಮಗು ಇಬ್ಬರು ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ : Auto-truck collision: ಆಟೋ ಟ್ರಕ್‌ ನಡುವೆ ಭೀಕರ ಅಪಘಾತ : ಒಂದೇ ಕುಟುಂಬದ 8ಮಂದಿ ಸಾವು

ಇದನ್ನೂ ಓದಿ : Noida Lift collapse: ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‌ ಕುಸಿತ: ಇಂಜಿನಿಯರ್‌ ಸಾವು

ಇದನ್ನೂ ಓದಿ : illegal liquor Sale: ಉಡುಪಿಯಲ್ಲಿ ಅಕ್ರಮ ಮಧ್ಯ ಮಾರಾಟ: ನಾಲ್ವರು ವಶಕ್ಕೆ

ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಏಕಾಏಕಿ ಪಿಲ್ಲರ್‌ ಕುಸಿದು ರಸ್ತೆಗೆ ಬಿದ್ದಿದ್ದರಿಂದ ಸುಮಾರು ಹತ್ತು ಕಿಲೋಮೀಟರ್‌ ವರೆಗೆ ಟ್ರಾಫಿಕ್‌ ಜಾಮ್‌ ಸಂಭವಿಸಿದೆ. ಸದ್ಯ ಪ್ರಕರಣದ ಕುರಿತು ಗೋವಿಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Metro pillar collapse: Under construction Metro pillar collapse: Two seriously injured

Metro pillar collapse: Under construction Metro pillar collapse: Two seriously injured

Comments are closed.