Kantara Oscar rase: ಆಸ್ಕರ್‌ಗೆ 2 ವಿಭಾಗಗಳಲ್ಲಿ ಅರ್ಹತೆ ಪಡೆದ ಕಾಂತಾರ ದಂತಕಥೆ

(Kantara Oscar rase) ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಸೂಪರ್‌ ಹಿಟ್‌ ಸಿನಿಮಾವಾಗಿ ಹೊರಹೊಮ್ಮಿದೆ. ಇಡೀ ಕನ್ನಡವಷ್ಟೇ ಅಲ್ಲದೇ ಬಹುಬಾಷೆಗಳಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಇದಲ್ಲದೇ ಇನ್ನೊಂದು ಹೊಸ ಮೈಲಿಗಲ್ಲನ್ನು ಸಾಧಿಸಲು ಕಾಂತಾರ ಸಿನಿಮಾ ಹೊರಟಿದೆ. ಇದೀಗ ಆಸ್ಕರ್‌ ರೇಸ್‌ ನಲ್ಲಿ ಕಾಂತಾರ ಸಿನಿಮಾ ಎರಡು ವಿಭಾಗಗಳಲ್ಲಿ ಅರ್ಹತೆಯನ್ನು ಪಡೆದಿದ್ದು, ಇನ್ನೊಂದು ಹೊಸ ಮೈಲಿಗಲ್ಲನ್ನು ಸಾಧಿಸುವ ಸೂಚನೆಯನ್ನು ನೀಡಿದೆ.

ಕಾಂತಾರ ಸಿನಿಮಾ ನೂರು ದಿನಗಳ ಭರ್ಜರಿ ಪ್ರದರ್ಶನವನ್ನು ಕಂಡಿದ್ದು, ಇತ್ತೀಚೆಗಷ್ಟೇ ಇದರ ಸಂತಸವನ್ನು ಸಿನಿಮಾ ತಂಡ ನಮ್ಮೊಂದಿಗೆ ಹಂಚಿಕೊಂಡಿತ್ತು. ಈಗಾಗಲೇ ಪ್ರಪಂಚದಾದ್ಯಂತ ಸಿನಿಮಾ ಅದ್ದೂರಿ ಪ್ರದರ್ಶನವನ್ನು ಕಂಡು ಹೊಸ ಮೈಲಿಗಲ್ಲನ್ನು ಸೃಷ್ಟಿಸಿತ್ತು. ಇದರ ಜೊತೆಗೆ ಬರೋಬ್ಬರಿ ನಾಲ್ಕು ನೂರು ಕೋಟಿ ರೂಗಳನ್ನು ಬಾಚಿಕೊಂಡು ದಾಖಲೆ ಸೃಷ್ಟಿಸಿತ್ತು. ಇದೀಗ ರಿಷಬ್‌ ಶೆಟ್ಟಿ ಅವರ ಕಾಂತಾರ ಸಿನಿಮಾ ತಮ್ಮ ಆಸ್ಕರ್‌ ಪ್ರಯಾಣ(Kantara Oscar rase)ವನ್ನು ಪ್ರಾರಂಭಿಸಿದೆ.

ಆಸ್ಕರ್‌ ರೇಸ್‌ ನಲ್ಲಿ ಒಟ್ಟು 311 ಸಿನಿಮಾಗಳು ಅರ್ಹತೆ ಸುತ್ತನ್ನು ಪಾಸ್‌ ಮಾಡಿದ್ದು, ಕಾಂತಾರ ಸಿನಿಮಾ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ಅರ್ಹತೆಯ ಸುತ್ತನ್ನು ಪಾಸ್‌ ಮಾಡಿದೆ. ಆಸ್ಕರ್‌ ಸದಸ್ಯರು ಮತ ನೀಡಿದರೆ ಕಾಂತಾರ ಸಿನಿಮಾ ಮುಖ್ಯ ನಾಮಿನೇಷನ್‌ ಗೆ ಎಂಟ್ರಿ ಕೊಡಲಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌ ಮಾಡಿದ್ದು, “ಕಾಂತಾರ ಸಿನಿಮಾ 2 ಆಸ್ಕರ್‌ ಅರ್ಹತೆ ಪಡೆದಿರುವ ವಿಚಾರ ತಿಳಿಸಲು ನಮಗೆ ಸದಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ” ಎಂದು ಬರೆದುಕೊಂಡಿದೆ.

ಕಾಂತಾರದ ಅಂತಿಮ ನಾಮನಿರ್ದೇಶನಕ್ಕರ ಪ್ರವೇಶಿಸಲಿದೆಯೇ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ. ಆಸ್ಕರ್‌ ಬ್ಯಾಲೆಟ್‌ ಮತದಾನವು ಜನವರಿ 11 ರಿಂದ ಪ್ರಾರಂಭವಾಗಿ ಜನವರಿ 17 ರ ವೆರೆಗ ನಡೆಯುತ್ತದೆ. ಅಂತಿಮ ನಾಮನಿರ್ದೇಶನಗಳು ಜನವರಿ 24 ರಂದು ಹೊರಬರಲಿದೆ.

ಇದನ್ನೂ ಓದಿ : ಎಂಎಸ್ ಧೋನಿ ಎಲ್ಲರಿಗೂ ಮಾದರಿ ಎಂದ ಮಲಯಾಳಂ ನಟ ಟೋವಿನೋ ಥಾಮಸ್

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ ಕಾಂತಾರ ಸಿನಿಮಾ ಕರಾವಳಿಯ ಭೂತಾರಾಧನೆಯ ಕಥಾಹಂದರವನ್ನು ಹೊಂದಿದ್ದು, ಬಾಕ್ಸ್‌ ಆಫೀಸ್‌ ನಲ್ಲೂ ಕೂಡ ದಾಖಲೆ ಬರೆದಿತ್ತು. ಇನ್ನೂ ಕೂಡ ಕೆಲವು ಚಿತ್ರಮಂದಿರಗಳಲ್ಲಿ ಭರ್ಜರಿಯಾಗೇ ಪ್ರದರ್ಶನ ಕಾಣುತ್ತಿದೆ.

Kantara Oscar rase: Kantara legend qualified for Oscar in 2 categories

Comments are closed.