Miracle story: ವೃದ್ಧನ ಹೊಟ್ಟೆಯಲ್ಲಿತ್ತು 187 ನಾಣ್ಯ: ವೈದ್ಯಲೋಕಕ್ಕೆ ಅಚ್ಚರಿ

ಬಾಗಲಕೋಟೆ : (Miracle story) ಆತ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ಪರೀಕ್ಷೆ ನಡೆಸಿದ ವೈದ್ಯರಿಗೆ ಅರೆಕ್ಷಣ ಶಾಕ್ ಆಗಿತ್ತು. ಯಾಕೆಂದ್ರೆ ಅಸ್ವಸ್ಥತೆಗೆ ಕಾರಣವಾಗಿದ್ದು ಆತನ 187 ನಾಣ್ಯಗಳು. ಮಾನಸಿಕ ಅಸ್ವಸ್ಥ ನಾಣ್ಯಗಳನ್ನು ನುಂಗಿ ಸಾವಿನ ಕದ ತಟ್ಟಿದ್ದರೂ ಕೂಡ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದ್ರೆ ಈ ಸಂಗತಿ ಇದೀಗ ವೈದ್ಯಲೋಕಕ್ಕೆ ಅಚ್ಚರಿಯನ್ನು ಮೂಡಿಸಿದೆ.

ಬಾಗಲಕೋಟೆ ಜಿಲ್ಲೆಯ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ದ್ಯಾವಪ್ಪ ಎನ್ನುವವರೇ ನಾಣ್ಯಗಳನ್ನು ನುಂಗಿರುವ ವೃದ್ಧ (Miracle story). ದ್ಯಾವಪ್ಪ ಮಾನಸಿಕ ಅಸ್ವಸ್ತರಾಗಿದ್ದು, ಕೈಗೆ ಸಿಕ್ಕ ನಾಣ್ಯಗಳನ್ನೆಲ್ಲಾ ನುಂಗುತ್ತಾ ಬಂದಿದ್ದಾರೆ. ಹೀಗೆ ಬರೋಬ್ಬರಿ 187 ನಾಣ್ಯಗಳನ್ನು ನುಂಗಿದ್ದು, ಇದರ ಪರಿಣಾಮ ನಂತರದಲ್ಲಿ ದ್ಯಾವಪ್ಪನವರ ಆರೋಗ್ಯದಲ್ಲಿ ಏರುಪೇರಾಗಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಕುಟುಂಬದವರು ನಾಣ್ಯಗಳನ್ನು ನುಂಗಿರಬಹುದು ಎಂಬ ಅನುಮಾನದಿಂದಲೇ ಅವರನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ವೇಳೆ ವೈದ್ಯರು ಎಕ್ಸ್‌ ರೇ ಪರೀಕ್ಷೆ ನಡೆಸಿದ್ದು, ಎಕ್ಸ್‌ ರೇ ರಿಪೋರ್ಟ್‌ ನೋಡಿದ ವೈದ್ಯರಿಗೆ ಅಚ್ಚರಿಯಾಗಿತ್ತು. ವೃದ್ಧನ ಹೊಟ್ಟೆಯಲ್ಲಿ ರಾಶಿ ರಾಶಿ ನಾಣ್ಯಗಳಿರುವುದು ಎಕ್ಸ್‌ ರೇ ರಿಪೋರ್ಟ್‌ ನಲ್ಲಿ ಕಂಡುಬಂದಿದೆ. ವೃದ್ದನ ಜೀವಕ್ಕೆ ಅಪಾಯವಿರುವುದನ್ನು ತಿಳಿದು ವೈದ್ಯರು ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ. ಎಂಡೋಸ್ಕೋಪಿ ಚಿಕಿತ್ಸೆಯ ಮೂಲಕ ಸರಾಸರಿ ಎರಡೂವರೆ ಗಂಟೆಗಳ ನಿರಂತರ ಶಸ್ತ್ರ ಚಿಕಿತ್ಸೆಯ ಮಾಡಿ ಹೊಟ್ಟೆಯಲ್ಲಿದ್ದ ಬರೋಬ್ಬರಿ 187 ನಾಣ್ಯಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿ ನಾಣ್ಯಗಳನ್ನು ಹೊರತೆಗೆದ ನಂತರ ವೃದ್ಧ ದ್ಯಾವಪ್ಪನವರ ಆರೋಗ್ಯದಲ್ಲಿ ಚೇತರಿಕೆ ಕಂಡಿಬಂದಿದ್ದು, ದ್ಯಾವಪ್ಪನವರು ಬದುಕುಳಿದಿದ್ದಾರೆ. ವೈದ್ಯರ ಸಮಯಪ್ರಜ್ಞೆಯೇ ವೃದ್ಧ ದ್ಯಾವಪ್ಪನವರು ಬದುಕುಳಿಯುವುದಕ್ಕೆ ಕಾರಣ.

ಇದನ್ನೂ ಓದಿ : Daughter Murdered By Father : ಸಾಲದ ಹೊರೆ ತಪ್ಪಿಸಲು ತನ್ನ 2 ವರ್ಷದ ಮಗಳನ್ನೇ ಕೊಲೆಗೈದ ಬೆಂಗಳೂರಿನ ಇಂಜಿನಿಯರ್

ಇದನ್ನೂ ಓದಿ : Elephant shaped tree : ಸೆಲ್ಫಿ ಕೇಂದ್ರವಾಯ್ತು ಹುಬ್ಬಳ್ಳಿಯ ಆನೆ ಆಕೃತಿಯ ಮರ

ಇದನ್ನೂ ಓದಿ : Special Story: ಉಮಾಮಹೇಶ್ವರಿ ದೇವಸ್ಥಾನದಲ್ಲಿ ಕಣ್ಣು ತೆರೆದ ಶಿವ: ಹರಿದು ಬರುತ್ತಿದೆ ಜನಸಾಗರ

(Miracle story) He was admitted to the hospital due to illness. The doctor who conducted the examination was in shock for a moment. Because the reason for the disorder is his 187 coins. A mentally ill person almost died by swallowing coins but miraculously escaped with his life. But this fact has surprised the medical world now.

Comments are closed.