Winter Hair Care :ಚಳಿಗಾಲದಲ್ಲಿ ಕೂದಲು ಆರೈಕೆಗೆ ಬಳಸಿ ಈ ಎಣ್ಣೆ

(Winter Hair Care)ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಎಷ್ಟು ಮುಖ್ಯವೂ ಕೂದಲಿನ ರಕ್ಷಣೆ ಕೂಡ ಅಷ್ಟೇ ಮುಖ್ಯ. ಚಳಿಗಾಲದಲ್ಲಿ ಎಲ್ಲರಲ್ಲೂ ಕೂದಲು ಉದುರುವುದು ಮತ್ತು ಹೊಟ್ಟಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ನಿವಾರಣೆಗೆ ಮನೆಯಲ್ಲಿಯೇ ಕೂದಲಿಗೆ ಹಚ್ಚುವ ಎಣ್ಣೆಯನ್ನು ತಯಾರಿಸಿ ಕೊಳ್ಳಬಹುದು. ಕೂದಲಿಗೆ ಹಚ್ಚುವ ಎಣ್ಣೆಯನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ತಿಳಿಯೋಣ.

(Winter Hair Care)ಬೇಕಾಗುವ ಸಾಮಾಗ್ರಿಗಳು:

  • ಕೊಬ್ಬರಿ ಎಣ್ಣೆ
  • ಈರುಳ್ಳಿ
  • ಕರಿಬೇವು
  • ದಾಸವಾಳ ಹೂವು
  • ನೆಲ್ಲಿಕಾಯಿ
  • ಮೆಂತ್ಯ
  • ಕಪ್ಪುಜೀರಿಗೆ

ಮಾಡುವ ವಿಧಾನ:
ಬಾಣಲೆಗೆ ಎಣ್ಣೆ ಹಾಕಿಕೊಂಡು ಕೊಬ್ಬರಿ ಎಣ್ಣೆ, ತುಂಡರಿಸಿದ ಈರುಳ್ಳಿ,ಕರಿಬೇವು,ದಾಸವಾಳ ಹೂವು,ತುಂಡರಿಸಿದ ನೆಲ್ಲಿಕಾಯಿ, ಮೆಂತ್ಯ, ಕಪ್ಪುಜೀರಿಗೆ ಹಾಕಿ ಕಾಯಿಸಬೇಕು. ಕಂದು ಬಣ್ಣಕ್ಕೆ ತಿರುಗುತ್ತಿದ್ದ ಹಾಗೆ ಎಣ್ಣೆಯನ್ನು ಆರಲು ಬಿಡಬೇಕು ನಂತರ ಆ ಎಣ್ಣೆಯನ್ನು ಸೊಸಿಕೊಂಡು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತದೆ.

ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯಲ್ಲಿ ಲಾರಿಕ್‌ ಆಮ್ಲ ಟ್ರೈಗ್ಲಿಸರೈಡ್‌ ಇರುವುದರಿಂದ ಹೆಚ್ಚು ಪ್ರೋಟಿನ್‌ ಆಂಶವನ್ನು ಹೊಂದಿದೆ ಹಾಗಾಗಿ ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ತಲೆಬುರುಡೆಗೆ ತೆವಾಂಶವನ್ನು ನೀಡುತ್ತದೆ. ಹಲವು ಕೂದಲಿನ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ತಲೆ ಹೊಟ್ಟನ್ನು ಕಡಿಮೆ ಮಾಡಿ ಕೂದಲಿನ ಬೆಳವಣಿಗೆಗೆ ನೆರವಾಗುವುದು ಅಷ್ಟೇ ಅಲ್ಲದೆ ಕೂದಲು ದಪ್ಪ ಹಾಗೂ ಆರೋಗ್ಯವಾಗಿ ಬೆಳೆಯುವಂತೆ ಮಾಡುತ್ತದೆ.

ಮೆಂತ್ಯ
ಮೆಂತ್ಯೆಯನ್ನು ಆಹಾರ ರೂಪದಲ್ಲಿ ಸೇವನೆ ಮಾಡುವುದರಿಂದ ಆರೋಗ್ಯದ ಹಲವು ಪ್ರಯೋಜನವನ್ನು ಪಡೆದುಕೊಳ್ಳುವುದು ಅಷ್ಟೇ ಅಲ್ಲದೆ ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಮೆಂತ್ಯೆಯಲ್ಲಿ ಪೋಲಿಕ್‌ ಆಸಿಡ್‌ ವಿಟಮಿನ್‌ ಸಿ,ಎ,ಕೆ, ಪೋಟ್ಯಾಸಿಯಂ,ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಂಶಗಳು ಇರುವುದರಿಂದ ಮೆಂತ್ಯೆಯನ್ನು ಸೇವನೆ ಮಾಡುವುದರಿಂದ ಅಥವ ಇದರಿಂದ ತಯಾರಿಸಿದ ಪೇಸ್ಟ್‌ , ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಕಪ್ಪುಜೀರಿಗೆ
ಕಪ್ಪು ಜೀರಿಗೆಯಿಂದ ತಯಾರಿಸಿದ ಎಣ್ಣೆಯಲ್ಲಿ ಕೊಬ್ಬಿನ ಅಂಶ ಸಮೃದ್ಧವಾಗಿ ಇರುವುದರಿಂದ ಇದನ್ನು ಕೂದಲಿಗೆ ಹಚ್ಚುವುದರಿಂದ ಆರೋಗ್ಯಕರ ಕೂದಲ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ ತಲೆಹೊಟ್ಟನ್ನು ಕಡಿಮೆ ಮಾಡಿ ಕೂದಲು ದಪ್ಪವಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:Drink More Water In Winter :ಹೆಚ್ಚು ನೀರು ಕುಡಿಯಿರಿ ಚಳಿಗಾಲದಲ್ಲಿ ನಿಮ್ಮ ತ್ವಚೆ ಕಾಪಾಡಿಕೊಳ್ಳಿ

ಇದನ್ನೂ ಓದಿ:Indigestion Problem Solution:ಅಜೀರ್ಣ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ಸುಲಭ ಪರಿಹಾರ

ನೆಲ್ಲಿಕಾಯಿ
ನೆಲ್ಲಿಕಾಯಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್‌ ಎ,ಸಿ ,ಇ ಅಂಶಗಳು ಸಾಕಷ್ಟು ಇರುವುದರಿಂದ ಕೂದಲಿಗೆ ಸಾಕಷ್ಟು ಪೋಷಣೆಯನ್ನು ಒದಗಿಸಿ ಕೂದಲು ಕಪ್ಪಾಗುವಂತೆ ಮಾಡುತ್ತದೆ. ನೆಲ್ಲಿಕಾಯಿ ವಿಟಮಿನ್‌ ಸಿ ಅಂಶ ಕೂದಲಿಗೆ ತೆವಾಂಶ ನೀಡುವುದರಿಂದ ಕೂದಲು ಒಣಗದಂತೆ ನೋಡಿಕೊಳ್ಳುತ್ತದೆ. ತಲೆಯಲ್ಲಿ ಯಾವುದೇ ರೀತಿಯ ದದ್ದು ಅಥವಾ ತುರಿಕೆ ಇದ್ದರೆ ಅದನ್ನು ಕಡಿಮೆ ಮಾಡುತ್ತದೆ.

Winter Hair Care Use this oil for hair care in winter

Comments are closed.