ಬೇಟೆ ಮುಂದುವರಿಸಿದ ಎನ್ ಸಿಬಿ ಪೊಲೀಸರು…! ಬಿಗ್ ಬಾಸ್ ಸ್ಪರ್ಧಿ ಹಾಗೂ ಮಾಡೆಲ್ ಬಂಧನ…!!

ಬೆಂಗಳೂರು: ಡ್ರಗ್ ಪೆಡ್ಲರ್ ಹಾಗೂ ಕಿರುತೆರೆ ನಟಿ ಅನಿಕಾ ಬಂಧನದ ಜೊತೆಗೆ ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಚಾಪ್ಟರ್ ತೆರೆದ ಎನ್ ಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರೆಸಿದ್ದು, ಬಿಗ್ ಬಾಸ್ ಸ್ಪರ್ಧಿ ಹಾಗೂ ಮಾಡೆಲ್ ಆ್ಯಡ್ಂ ಪಾಷಾನನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ ಅನಿಕಾ ಜೊತೆ ಲಿಂಕ್ ಹೊಂದಿದ್ದ ಆರೋಪದಡಿ ಆ್ಯಡಂನನ್ನು ವಿಚಾರಣೆಗೆ ಕರೆಸಿದ್ದ ಎನ್ ಸಿ ಬಿ ಪೊಲೀಸರು ವಿಚಾರಣೆ ಬಳಿಕ ಬಂಧಿಸಿದ್ದಾರೆ.

ಈಗಾಗಲೇ ಸ್ಯಾಂಡಲ್ ವುಡ್ ನ ಹಲವು ನಟ- ನಟಿಯರಿಗೆ ಡ್ರಗ್ಸ್ ಸಪ್ಲೈ ಮಾಡಿರೋದಾಗಿ ಹೇಳಿರುವ ಕಿರುತೆರೆ ನಟಿ ಹಾಗೂ ಪೆಡ್ಲರ್ ಅನಿಕಾಳಿಂದ ಡ್ರಗ್ ಖರೀದಿಸಿದ ಆರೋಪದಡಿ ಆ್ಯಡಂ ಪಾಷಾನನ್ನ ಪೊಲೀಸರು ಬಂಧಿಸಿದ್ದಾರೆ.

ಈತನ ಹೆಸರು ಈ ಹಿಂದೆಯೇ ಸ್ಯಾಂಡಲ್ ವುಡ್ ಡ್ರಗ್ ದಂಧೆಯಲ್ಲಿ‌ ಕೇಳಿಬಂದಿತ್ತು. ಆದರೆ ಸಾಕ್ಷ್ಯಾಧಾರ ಸಂಗ್ರಹಿಸಿದ ಪೊಲೀಸರು ಈಗ ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದಾರೆ.

ಬಂಧಿತ ಅನಿಕಾ ನನ್ನ ಸ್ನೇಹಿತೆ ಎಂದು ಈ ಹಿಂದೆ ಹೇಳಿಕೊಂಡಿದ್ದ ಆ್ಯಡಂ ಪಾಷಾ ಆಕೆಯ ಡ್ರಗ್ಸ್ ವ್ಯವಹಾರದ ಬಗ್ಗೆ ನಂಗೇನೂ ಗೊತ್ತಿಲ್ಲ ಎಂದಿದ್ದ. ಈಗ ಎನ್ ಸಿಬಿ ಪೊಲೀಸರು ಬಂಧಿಸಿದ್ದು ವಿಚಾರಣೆ ಚುರುಕುಗೊಳಿಸಿದ್ದಾರೆ. ಆ್ಯಡಂ ನೀಡೋ ಮಾಹಿತಿಯಿಂದ ಇನ್ನೆಷ್ಟು ಜನರು ಎನ್ ಸಿಬಿ ಬಲೆಗೆ ಬೀಳ್ತಾರೋ ಕಾದುನೋಡಬೇಕಿದೆ.

Comments are closed.