man arrested for rape : ನಿರಂತರ ಅತ್ಯಾಚಾರವೆಸಗಿ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ 50ರ ಕಾಮುಕ ಅರೆಸ್ಟ್​

ಮಹಾರಾಷ್ಟ್ರ : man arrested for rape : ಮಹಿಳೆಯರನ್ನು ರಕ್ಷಿಸಲು ದೇಶದಲ್ಲಿ ಎಷ್ಟೇ ಬಲವಾದ ಕಾನೂನುಗಳನ್ನು ಜಾರಿಗೆ ತಂದರೂ ಸಹ ದೇಶದಲ್ಲಿ ಮಹಿಳೆಯ ಮೇಲಿನ ಶೋಷಣೆಗಳು ನಡೆಯುತ್ತಲೇ ಇದೆ. ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದರೂ ಕಾಮುಕರಲ್ಲಿ ಭಯ ಹುಟ್ಟುವಂತೆ ಕಾಣುತ್ತಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ 50 ವರ್ಷದ ವ್ಯಕ್ತಿಯೊಬ್ಬ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಪಕ್ಕದ ಮನೆಯ ಬಾಲಕಿಯ ಮೇಲೆ ಈತ ನಿರಂತರ ಅತ್ಯಾಚಾರ ಎಸಗಿದ್ದು ಪರಿಣಾಮ ಬಾಲಕಿಯು ಗರ್ಭಿಣಿಯಾಗಿದ್ದು ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ .

ಮೇ 24ರಂದು ಬಾಲಕಿಯ ನೆರೆ ಮನೆಗೆ ಶಿಫ್ಟ್​ ಆಗಿದ್ದ 50 ವರ್ಷದ ವ್ಯಕ್ತಿಯು ಮನೆಯ ಸರಂಜಾಮುಗಳನ್ನು ಶಿಫ್ಟ್​ ಮಾಡಲು ಈ ಬಾಲಕಿಯ ಬಳಿ ನೆರವು ಕೇಳಿದ್ದ ಎನ್ನಲಾಗಿದೆ. ಅದರಂತೆ ಬಾಲಕಿಯು ಆತನಿಗೆ ವಸ್ತುಗಳನ್ನು ಶಿಫ್ಟ್​ ಮಾಡಲು ಸಹಾಯ ಮಾಡಿದ್ದಳು. ಬಾಲಕಿಯಿಂದ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯು ಬಳಿಕ ಮನೆಯ ಕೆಲವು ವಸ್ತುಗಳನ್ನು ಬಾಲಕಿಯು ಕದ್ದಿದ್ದಾಳೆ ಎಂದು ಆರೋಪ ಹೊರಿಸಿದ್ದನು.


ಮೇ 24 ಹಾಗೂ ಮೇ 25ರ ಮಧ್ಯರಾತ್ರಿ ಆಕೆಯನ್ನು ಮನೆಯಿಂದ ಹೊರ ಹೋಗುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಬಾಲಕಿಯು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಕಳೆದ ವಾರ ಆಕೆಯ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ವೈದ್ಯರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂಬ ಮಾಹಿತಿ ಕುಟುಂಬಸ್ಥರಿಗೆ ತಿಳಿದಿದೆ. ಕುಟುಂಬದವರು ಬಾಲಕಿಯನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಆಕೆ ತಾನು ನೆರೆ ಮನೆಯವನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಬಾಯ್ಬಿಟ್ಟಿದ್ದಾಳೆ. ಕೂಡಲೇ ಬಾಲಕಿಯ ಪೋಷಕರು ಪೊಲೀಸ್​ ಠಾಣೆಗೆ ತೆರಳಿ ದೂರನ್ನು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಈತ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ : ಕಿಂಗ್ ಕೊಹ್ಲಿ Vs ಸ್ವಿಂಗ್ ಸುಲ್ತಾನ್… ಇದೇ ದಿಗ್ಗಜರ ಕೊನೆಯ ಮುಖಾಮುಖಿ !

ಇದನ್ನೂ ಓದಿ : Racist Abuse : ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರಿಗೆ ಇಂಗ್ಲೀಷರಿಂದ ಜನಾಂಗೀಯ ನಿಂದನೆ !

Mumbai: 50-year-old man arrested for rape of 16-year-old girl

Comments are closed.