Joe Root Beat Virat Kohli : ಕಿಂಗ್ ಕೊಹ್ಲಿಯನ್ನು Beat ಮಾಡಿದ ಇಂಗ್ಲೆಂಡ್ ರನ್ ಮಷಿನ್ !

ಲಂಡನ್: (Joe Root Beat Virat Kohli) ಕ್ರಿಕೆಟ್ ಜಗತ್ತಿನ ರನ್ ಮಷಿನ್ ಯಾರು ಎಂಬ ಪ್ರಶ್ನೆಗೆ ಮೊನ್ನೆ ಮೊನ್ನೆಯವರೆಗೆ ಕೇಳಿ ಬರುತ್ತಿದ್ದ ಉತ್ತರ ಒಂದೇ. ಅದು ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli). ಆದರೆ ಈಗ ಆ ಪಟ್ಟವನ್ನು ಇಂಗ್ಲೆಂಡ್ ಬ್ಯಾಟ್ಸ್’ಮನ್ ಜೋ ರೂಟ್ (Joe Root) ತಮ್ಮದಾಗಿಸಿಕೊಂಡಿದ್ದಾರೆ.

ಎಡ್ಜ್”ಬಾಸ್ಟನ್ ಮೈದಾನದಲ್ಲಿ ನಡೆದ ಭಾರತ ವಿರುದ್ಧದ 5ನೇ ಟೆಸ್ಟ್ ಪಂದ್ಯದ 4ನೇ ಇನ್ನಿಂಗ್ಸ್”ನಲ್ಲಿ ಅಮೋಘ 142 ರನ್ ಬಾರಿಸಿ ಇಂಗ್ಲೆಂಡ್”ಗೆ 7 ವಿಕೆಟ್’ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದ ಜೋ ರೂಟ್, ಸರಣಿ 2-2ರಲ್ಲಿ ಸಮಬಲಗೊಳ್ಳಲು ಕಾರಣರಾಗಿದ್ದರು. ಇದು ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೂಟ್ ಬಾರಿಸಿದ 4ನೇ ಶತಕ. ಭಾರತ ವಿರುದ್ಧದ ಟೆಸ್ಟ್ ಸರಣಿಯ 9 ಇನ್ನಿಂಗ್ಸ್’ಗಳಲ್ಲಿ ಜೋ ರೂಟ್ 63ರ ಸರಾಸರಿಯಲ್ಲಿ 4 ಶತಕಗಳ ಸಹಿತ 737 ರನ್ ಕಲೆ ಹಾಕಿ ಅಬ್ಬರಿಸಿದ್ದಾರೆ.

ಭಾರತ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಜೋ ರೂಟ್, ಅತೀ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಕಿಂಗ್ ಕೊಹ್ಲಿಯನ್ನು ಮೀರಿಸಿದ್ದಾರೆ. ವಿರಾಟ್ ಕೊಹ್ಲಿ ಆಡಿರುವ 102 ಟೆಸ್ಟ್ ಪಂದ್ಯಗಳಿಂದ 27 ಶತಕ ಬಾರಿಸಿದ್ರೆ, ಜೋ ರೂಟ್ 121 ಪಂದ್ಯಗಳಲ್ಲಿ 28 ಶತಕ ಬಾರಿಸಿ ಟೆಸ್ಟ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದವರ ಸಾಲಿನಲ್ಲಿ 17ನೇ ಸ್ಥಾನಕ್ಕೇರಿದ್ದಾರೆ.

ಆಸಕ್ತಿದಾಯಕ ವಿಚಾರ ಏನಂದ್ರೆ, ವಿರಾಟ್ ಕೊಹ್ಲಿ 27ನೇ ಟೆಸ್ಟ್ ಶತಕ ಬಾರಿಸಿದಾಗ ಜೋ ರೂಟ್ ಪಾಕೆಟ್”ನಲ್ಲಿದ್ದದ್ದು ಕೇವಲ 17 ಟೆಸ್ಟ್ ಶತಕಗಳಷ್ಟೇ. ಕಿಂಗ್ ಕೊಹ್ಲಿ 2019ರ ನವೆಂಬರ್’ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಅದು ಕೊಹ್ಲಿ ಪಾಲಿನ 27ನೇ ಟೆಸ್ಟ್ ಶತಕ. ಅದೇ ಕೊನೆ. ಮತ್ತೆ ವಿರಾಟ್ ಬ್ಯಾಟ್”ನಿಂದ ಒಂದೇ ಒಂದು ಶತಕ ಹೊರ ಬಂದಿಲ್ಲ.

ಕೊಹ್ಲಿ 27ನೇ ಟೆಸ್ಟ್ ಶತಕ ಬಾರಿಸಿದಾಗ 17ರಲ್ಲಿದ್ದ ಜೋ ರೂಟ್, 2021ರ ಜನವರಿಯಿಂದ ಇಲ್ಲಿಯವರೆಗೆ 11 ಟೆಸ್ಟ್ ಶತಕಗಳನ್ನು ಸಿಡಿಸಿದ್ದಾರೆ. ಈ ಪೈಕಿ ಐದು ಶತಕಗಳು ಭಾರತ ವಿರುದ್ಧವೇ ಬಂದಿವೆ. ಈ ವರ್ಷ ಅಮೋಘ ಫಾರ್ಮ್”ನಲ್ಲಿರುವ ಜೋ ರೂಟ್ ಕೇವಲ ಐದೇ ತಿಂಗಳುಗಳಲ್ಲಿ ಐದು ಶತಕಗಳನ್ನು ಸಿಡಿಸಿರುವುದು ವಿಶೇಷ.

2012ರಲ್ಲಿ ಟೆಸ್ಟ್ ಕ್ರಿಕೆಟ್”ಗೆ ಪದಾರ್ಪಣೆ ಮಾಡಿದ್ದ 31 ವರ್ಷದ ಜೋ ರೂಟ್, ವೃತ್ತಿಜೀವನದಲ್ಲಿ ಒಟ್ಟು 121 ಪಂದ್ಯಗಳನ್ನಾಡಿದ್ದು, 50.76ರ ಸರಾಸರಿಯಲ್ಲಿ 10,458 ರನ್ ಕಲೆ ಹಾಕಿದ್ದಾರೆ.

ಟೆಸ್ಟ್ ಕ್ರಿಕೆಟ್: ಜೋ ರೂಟ್ ಸಾಧನೆ
ಪಂದ್ಯ: 121
ಇನ್ನಿಂಗ್ಸ್: 224
ರನ್: 10,458
ಸರಾಸರಿ: 50.76
ಶತಕ: 28
ಅರ್ಧಶತಕ: 54
ಗರಿಷ್ಠ: 254

ಇದನ್ನೂ ಓದಿ : Reason behind India’s lost : ಎಡ್ಜ್‌ಬಾಸ್ಟನ್ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿಗೆ ಈತನೇ ಕಾರಣ

ಇದನ್ನೂ ಓದಿ : ದೆಹಲಿಯ ಗುರುದ್ವಾರದಲ್ಲಿ ಮಲಗುತ್ತಿದ್ದ ಹುಡುಗ.. ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್ !

Joe Root A New Run Machine of Test Cricket Joe Root Beat Virat Kohli

Comments are closed.