Mumbai accident-2 died: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದ ಕಬ್ಬಿಣದ ರಾಡ್ : ಆಟೊ ರಿಕ್ಷಾದಲ್ಲಿದ್ದ ತಾಯಿ ಮಗಳು ಸಾವು

ಮುಂಬೈ: (Mumbai accident-2 died) ಜೋಗೇಶ್ವರಿ ಉಪನಗರದಲ್ಲಿ ಶನಿವಾರ ಸಂಜೆ ತಾಯಿ ಮಗಳು ಪ್ರಯಾಣಿಸುತ್ತಿದ್ದ ಆಟೋರಿಕ್ಷಾ ಮೇಲೆ ನಿರ್ಮಾಣ ಹಂತದ ಕಟ್ಟಡದಿಂದ ಕಬ್ಬಿಣದ ಕಂಬ ಬಿದ್ದು ಆಟೋದಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯ ಶಲ್ಯಕ್ ಆಸ್ಪತ್ರೆ ಬಳಿ ಈ ದುಃಖಕರ ಘಟನೆ ನಡೆದಿದೆ.

ಅಪಘಾತ ಸಂಭವಿಸಿದ ನಿರ್ಮಾಣ ಹಂತದ ಕಟ್ಟಡವು ಸ್ಲಂ ಪುನರ್ವಸತಿ ಪ್ರಾಧಿಕಾರದ (ಎಸ್ಆರ್ಎ) ಯೋಜನೆಯಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿ ತಿಳಿಸಿದ್ದಾರೆ. 14 ಅಂತಸ್ತಿನ ಕಟ್ಟಡದ ಸ್ಕ್ಯಾಫೋಲ್ಡಿಂಗ್‌ನ ಏಳನೇ ಮಹಡಿಯಿಂದ ಕಬ್ಬಿಣದ ರಾಡ್ ಬಿದ್ದಿದೆ ಎಂದು ಅವರು ಹೇಳಿದರು. ಶಮಾ ಬಾನೋ ಆಸಿಫ್ ಶೇಖ್ (28) ಮತ್ತು ಅಯತ್ ಆಸಿಫ್ ಶೇಖ್ (9) ಅವರು ಪ್ರಯಾಣಿಸುತ್ತಿದ್ದ ರಿಕ್ಷಾದ ಮೇಲೆ ರಾಡ್‌ ಬಿದ್ದಿದ್ದರಿಂದ ತಾಯಿ ಮಗಳಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಇದನ್ನು ಗಮನಿಸಿದ ದಾರಿಹೋಕರೊಬ್ಬರು ನಾಗರಿಕ ಸಹಾಯವಾಣಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ನಂತರ ಅವರನ್ನು ಮೊದಲು ಹತ್ತಿರದ ಟ್ರಾಮಾ ಕೇರ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆಯ ವೈದ್ಯರು ಮಹಿಳೆ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ನಂತರ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಧೇರಿಯ ಕೋಕಿಲಾಬೆನ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಕೋಕಿಲಾಬೆನ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ.

ಫೆಬ್ರವರಿ 14 ರಂದು, ಸೆಂಟ್ರಲ್ ಮುಂಬೈನ ವರ್ಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ಫೋರ್ ಸೀಸನ್ಸ್ ಪ್ರೈವೇಟ್ ರೆಸಿಡೆನ್ಸಸ್ ಪ್ರಾಜೆಕ್ಟ್‌ನ 52 ನೇ ಮಹಡಿಯಿಂದ ದೊಡ್ಡ ಸಿಮೆಂಟ್ ಬ್ಲಾಕ್ ಕುಸಿದು, ಆವರಣದ ಹೊರಗೆ ನಿಂತಿದ್ದ ಇಬ್ಬರು ಸಾವನ್ನಪ್ಪಿದರು. ಡೆವಲಪರ್‌ನಿಂದ ಸರಿಯಾದ ಕಾಳಜಿ ಇಲ್ಲ ಎಂದು ಆರೋಪಿಸಿ ಸಮೀಪದ ನಿವಾಸಿಗಳು ಸಲ್ಲಿಸಿದ ಅರ್ಜಿಯ ಮೇಲೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಎತ್ತರದ ಕಟ್ಟಡಗಳ ನಿರ್ಮಾಣದಲ್ಲಿ ಕ್ರೇನ್‌ಗಳ ಬಳಕೆಗೆ ಸುರಕ್ಷತಾ ಮಾರ್ಗಸೂಚಿಗಳನ್ನು ರೂಪಿಸಲು BMC ಗೆ ಆದೇಶಿಸಿದೆ.

ಇದನ್ನೂ ಓದಿ : Kerala Bus accident: ಕಾರಿಗೆ ಢಿಕ್ಕಿ ಹೊಡೆದ ಕೇರಳ ರಾಜ್ಯ ಬಸ್:‌ ಹಲವು ಪ್ರಯಾಣಿಕರಿಗೆ ಗಾಯ

Mumbai accident-2 died: Iron rod fell from under construction building: Mother and daughter died in auto rickshaw

Comments are closed.